ಮೋದಿ ಸರ್ಕಾರದ ಅಕ್ಕಿ, ಸಿದ್ದರಾಮಣ್ಣನ ಜಾತ್ರೆ; ಯಾರದೋ ದುಡ್ಡು ಕಾಂಗ್ರೆಸ್ ಯಾತ್ರೆ: ಪ್ರತಾಪ್ ಸಿಂಹ
ಮೈಸೂರು: ಕಾಂಗ್ರೆಸ್ ಸರ್ಕಾರದ ಉಚಿತ ಯೋಜನೆಗಳು ಹೇಗೆ ಎಂದರೆ, ಒಂಥರಾ ಗಂಡನ ದರೋಡೆ ಮಾಡಿ ಹೆಂಡತಿಗೆ ಕೊಟ್ಟಹಾಗೆ. ಗಂಡನ ಜೇಬಿಗೆ ಕತ್ತರಿ ಹಾಕಿ ಪತ್ನಿಗೆ ಕೊಡುವುದರಲ್ಲಿ ಏನೂ ಅರ್ಥ ಇದೆ ಹೇಳಿ? ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಅಕ್ಕಿ ವಿಚಾರದಲ್ಲಿ ಕೇಂದ್ರದ ಮೇಲೆ ಬಿಜೆಪಿ ಒತ್ತಡ ತರಲಿ ಎಂಬ ಸಿಎಂ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, 5 ಕೆಜಿ ಅಕ್ಕಿ ಕೊಡುವುದು ಕೇಂದ್ರ ಸರಕಾರ ಅಂತಾ ಪ್ರಥಮ ಬಾರಿಗೆ ಸತ್ಯ ಹೇಳಿದ್ದಕ್ಕೆ ಸಿದ್ದರಾಮಯ್ಯನವರಿಗೆ ಧನ್ಯವಾದ.
ಮೋದಿಯವರು ಕೊಡುವ ಐದು ಕೆಜಿ ಗೆ ರಾಜ್ಯ ಸರ್ಕಾರ ಕೊಟ್ಟ ಮಾತಿನಂತೆ 10 ಕೆಜಿ ಸೇರಿಸಿ 15ಕೆ ಜಿ ರಾಜ್ಯದ ಜನರಿಗೆ ಕೊಡಬೇಕು ನೀವು. ಆದರೆ ಕೇಂದ್ರ ಸರ್ಕಾರ ಕೊಡುವ ಅಕ್ಕಿಮೇಲೆ ತಮ್ಮ ಹೆಸರು ಹಾಕಿಸಿಕೊಳ್ಳುವುದು ಸರಿನಾ? ಯಾರಾದೋ ದುಡ್ಡು ಕಾಂಗ್ರೆಸ್ ಜಾತ್ರೆ ನಾ? ಮೋದಿ ಸರಕಾರದ ಅಕ್ಕಿ ಸಿದ್ರಾಮಣ್ಣನ ಜಾತ್ರೆ ನಾ? ಇದೊಳ್ಳೆ ತಮಾಷೆಯಾಗಿದೆ ನೋಡಿ. ಮೋದಿ ಅವರು ಅಕ್ಕಿ ಕೊಡಬೇಕು. ನೀವು ಚುನಾವಣೆ ಗೆದ್ದು ಬರಬೇಕಾ? ಓಪನ್ ಮಾರ್ಕೆಟ್ ನಲ್ಲಿ ಅಕ್ಕಿ ಖರೀದಿ ಮಾಡಿ. ಅಕ್ಕಿ ಖರೀದಿ ಆಗದಿದ್ದರೆ ಗಂಡನ ಅಕೌಂಟ್ ಗೆ ಅಕ್ಕಿಯ ಹಣ ಹಾಕಿ ಎಂದು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.
ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ ಎಲ್ಲಾ ಕಡೆ ಚುನಾವಣೆ ಇದೆ. ಅಲ್ಲೂ ನೀವು ಫ್ರೀ ಅಕ್ಕಿ ಘೋಷಣೆ ಮಾಡಿದರೆ ಅಕ್ಕಿ ಕೋಡೋಕೆ ಆಗುತ್ತಾ? ಮೋದಿ ಅವರ ಕೈಯಲ್ಲಿ ಅಷ್ಟು ಪ್ರಮಾಣದ ಅಕ್ಕಿ ಕೊಡೋಕೆ ಆಗಿದ್ದರೆ ನಾವೇ ಕೊಡ್ತಿದ್ವಿ. ಅಕ್ಕಿಯನ್ನು ತಯಾರಿಸೋಕೆ ಆಗಲ್ಲ. ಬೆಳೆಯಬೇಕು. ಈ ಬಾರಿ ಮುಂಗಾರು ಕೈಕೊಟ್ಟಿದೆ. ಬರ ಬಂದರೆ, ಜಲಪ್ರಳಯವಾದರೆ ಅಂತ ಪ್ರದೇಶಗಳಿಗೆ ಅಕ್ಕಿ ಕೊಡಬೇಕಾದರೆ ಕೇಂದ್ರ ಏನ್ ಮಾಡಬೇಕು ಎಂದು ಪ್ರಶ್ನಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ