‘ಮಾಧ್ಯಮ’ ಅಂದ್ರೆ ಯಾರು ಸ್ವಾಮೀ? ನಾರದನ ತುತ್ತೂರಿ ಊದುತ್ತಿರುವುದು ಯಾರು? ಬೀದಿಗೆ ಬಂತು ಎಟಿಎಂ ಸರ್ಕಾರದ ಗುದ್ದಾಟ!

ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ತಿಂಗಳು ಕಳೆಯುವುದರೊಳಗೆ ಗದ್ದುಗೆ ಗುದ್ದಾಟ ಆರಂಭವಾಗಿದೆ, ಕಾಂಗ್ರೆಸ್ ಸರ್ಕಾರಕ್ಕೆ ನೆರೆ-ಬರ ಎಲ್ಲಾ ಒಂದೇ ಆಗಿದೆ ಎಂದು ಬಿಜೆಪಿ ಲೇವಡಿ ಮಾಡಿದೆ.
ಎಂ.ಬಿ ಪಾಟೀಲ್, ಮಹಾದೇವಪ್ಪ ಮತ್ತು ಸತೀಶ್ ಜಾರಕಿಹೊಳಿ
ಎಂ.ಬಿ ಪಾಟೀಲ್, ಮಹಾದೇವಪ್ಪ ಮತ್ತು ಸತೀಶ್ ಜಾರಕಿಹೊಳಿ
Updated on

ಬೆಂಗಳೂರು:  ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ತಿಂಗಳು ಕಳೆಯುವುದರೊಳಗೆ ಗದ್ದುಗೆ ಗುದ್ದಾಟ ಆರಂಭವಾಗಿದೆ, ಕಾಂಗ್ರೆಸ್ ಸರ್ಕಾರಕ್ಕೆ ನೆರೆ-ಬರ ಎಲ್ಲಾ ಒಂದೇ ಆಗಿದೆ ಎಂದು ಬಿಜೆಪಿ ಲೇವಡಿ ಮಾಡಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ಒಂದು ತಿಂಗಳಲ್ಲೇ ಬೀದಿಗೆ ಬಂತು ಗದ್ದುಗೆಗಾಗಿ  ಎಟಿಎಂ ದ ಗುದ್ದಾಟ..!
 @MBPatil  - ಸಿದ್ದರಾಮಯ್ಯನವರೇ ಐದು ವರ್ಷ ಮುಖ್ಯಮಂತ್ರಿ.
 @DKSureshINC - ಎಂ. ಬಿ. ಪಾಟೀಲ್ ಹೇಳಿಕೆಗೆ ಹೆಚ್ಚಿನ ಮಾಹಿತಿ ಬೇಕಾದರೆ ಸುರ್ಜೇವಾಲಾರನ್ನೇ ಕೇಳಿ.
 @CMahadevappa - ಸಿದ್ದರಾಮಯ್ಯನವರೇ ಪೂರ್ಣಾವಧಿ ಮುಖ್ಯಮಂತ್ರಿ.
 @JarkiholiSatish - ಸಿಎಂ ಸ್ಥಾನದಲ್ಲಿ ಸಿದ್ದರಾಮಯ್ಯ ಮುಂದುವರೆಯುತ್ತಾರೆ.
 @KNRajanna_Off - ಸಿದ್ದರಾಮಯ್ಯ ಮುಂದಿನ 5 ವರ್ಷವೂ ಸಿಎಂ ಆಗಿ ಅವರೇ ಇರುತ್ತಾರೆ.
@DKSureshINC - ಸಚಿವರಾಗಿ ಕೆಲಸ ಮಾಡುವುದಕ್ಕಿಂತ ಬೇರೆ ಆಸಕ್ತಿ ಜಾಸ್ತಿ.
@DKShivakumar- ನಾನು ಫುಟ್‌ಬಾಲ್ ಆಡೋಕೆ ಬಂದಿಲ್ಲ, ಸನ್ಯಾಸಿನೂ ಅಲ್ಲ. ಚೇಸ್ ಆಡೋದು ಗೊತ್ತಿದೆ.
ಸುರ್ಜೇವಾಲಾ - ನಾನೇ ಇಲ್ಲಿ 'ಸೂಪರ್ ಸಿಎಂ' ನಾನೇ ಕಲೆಕ್ಷನ್ ಏಜೆಂಟ್ ಇವರೆಲ್ಲಾ ನನ್ನ ಕೈಗೊಂಬೆಗಳು ಅಷ್ಟೇ. ಒಬ್ಬರ ಚೆಸ್, ಮತ್ತೊಬ್ಬರ ಫುಟ್ಬಾಲ್ ಆಟಕ್ಕೆ ರಾಜ್ಯ ಮೈದಾನವಾಗಿರುವುದು ದುರಂತ! ಇವರ ನಡುವೆ ಬಡವಾಗುತ್ತಿದೆ ಕರ್ನಾಟಕ ಎಂದು ಬಿಜೆಪಿ ಲೇವಡಿ ಮಾಡಿದೆ.

ಮಾನ್ಯ ಸಿದ್ದರಾಮಯ್ಯರವರೇ, ಹೌದಾ ‘ಮುಖ್ಯಮಂತ್ರಿ ಬದಲಾವಣೆ’ ಎಂಬುದು ಮಾಧ್ಯಮ ಸೃಷ್ಟಿಯೇ? ‘ಮಾಧ್ಯಮ’ ಅಂದ್ರೆ ಯಾರು ಸ್ವಾಮೀ? ಹೆಚ್.ಸಿ. ಮಹಾದೇವಪ್ಪ ಅವರಾ ಅಥವಾ ಸತೀಶ್ ಜಾರಕಿಹೊಳಿ ಅವರಾ...? ಸಚಿವರಾದ ಎಂ.ಬಿ. ಪಾಟೀಲ್ ಅವರಾ ಅಥವಾ ಕೆ. ಎನ್. ರಾಜಣ್ಣ ಅವರಾ? ನಾರದನ ತುತ್ತೂರಿ ಊದುತ್ತಿರುವುದು ಯಾರು? ಅಣ್ಣನನ್ನು ಮುಖ್ಯಮಂತ್ರಿ ಆಗಿ ನೋಡಲು ಕಾಯುತ್ತಿರುವ ಡಿ. ಕೆ. ಸುರೇಶ್ ಅವರು ಆಕ್ರಂದಿಸುವ ಮೊದಲು ಉತ್ತರಿಸಿ ಎಂದು ಬಿಜೆಪಿ ಸವಾಲು ಹಾಕಿದ್ದಾರೆ.

ರಾಜ್ಯದ 20 ಜಿಲ್ಲೆಗಳಲ್ಲಿ ಕುಡಿಯುವ ನೀರಿಗೂ ತತ್ವಾರ ಶುರುವಾಗಿದೆ. ಆದರೆ ಕರ್ನಾಟಕ  ಕಾಂಗ್ರೆಸ್ ನಾಯಕರು ಮಾತ್ರ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ರವರೇ ಇರಬೇಕೆಂದು ಒಂದು ಬಣ, ಶಿವಕುಮಾರ್ ಆಗಬೇಕೆಂದು ಇನ್ನೊಂದು ಬಣ, ಇವರಿಬ್ಬರೂ ಬೇಡ ಎಂದು ಮತ್ತೊಂದು ಬಣ ಪಿತೂರಿಯಲ್ಲಿ ನಿರತರಾಗಿದ್ದಾರೆ. ಕಾಂಗ್ರೆಸ್ಸಿಗರಿಗೆ ಬರವಾದರೂ ಒಂದೇ, ನೆರೆ ಬಂದರೂ ಒಂದೇ ಎಂದು ಬಿಜೆಪಿ ಲೇವಡಿ ಮಾಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com