2024 ಲೋಕಸಭಾ ಚುನಾವಣೆ ಮೇಲೆ ಅರುಣ್ ಕುಮಾರ್ ಪುತ್ತಿಲ ಕಣ್ಣು; ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಕಟೀಲ್ ಗೆ ಹೊಸ ಚಿಂತೆ!

ನಳಿನ್ ಕುಮಾರ್ ಕಟೀಲ್ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವ ವದಂತಿಗಳ ನಡುವೆಯೇ ಅವರು ಪ್ರತಿನಿಧಿಸುತ್ತಿರುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಆಗುತ್ತಿರುವ ರಾಜಕೀಯ ಬೆಳವಣಿಗೆಗಳು ಅವರನ್ನು ಮತ್ತಷ್ಟು ಚಿಂತೆಗೀಡು ಮಾಡಿವೆ.
ಅರುಣ್ ಕುಮಾರ್ ಪುತ್ತಿಲ
ಅರುಣ್ ಕುಮಾರ್ ಪುತ್ತಿಲ
Updated on

ಮಂಗಳೂರು: ನಳಿನ್ ಕುಮಾರ್ ಕಟೀಲ್ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವ ವದಂತಿಗಳ ನಡುವೆಯೇ ಅವರು ಪ್ರತಿನಿಧಿಸುತ್ತಿರುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಆಗುತ್ತಿರುವ ರಾಜಕೀಯ ಬೆಳವಣಿಗೆಗಳು ಅವರನ್ನು ಮತ್ತಷ್ಟು ಚಿಂತೆಗೀಡು ಮಾಡಿವೆ.

ಪುತ್ತೂರು ವಿಧಾನಸಭಾ ಚುನಾವಣೆಯಲ್ಲಿ ಸೋತ ಹಿಂದುತ್ವವಾದಿ ಅರುಣಕುಮಾರ ಪುತ್ತಿಲ ಜಿಲ್ಲೆಯಾದ್ಯಂತ ವ್ಯಾಪಕ ಪ್ರವಾಸ ಕೈಗೊಂಡು ಬಲಪಂಥೀಯ ಕಾರ್ಯಕರ್ತರೊಂದಿಗೆ ಸಭೆ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅಲ್ಲದೇ, ಅಪರಾಧ ಕೃತ್ಯಗಳಲ್ಲಿ ಬದುಕುಳಿದವರನ್ನು ಭೇಟಿ ಮಾಡುತ್ತಿದ್ದು, 2024ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ತಯಾರಿ ನಡೆಸುತ್ತಿದ್ದಾರೆ ಎಂಬಂತಹ ಮಾತುಗಳು ಕೇಳಿಬರುತ್ತಿವೆ. ಪುತ್ತಿಲ ಬಿಜೆಪಿ ಆಕಾಂಕ್ಷಿಯಾಗುವ ಮೂಲಕ ಕಟೀಲ್‌ಗೆ ಸವಾಲು ಆಗಬಹುದು ಅಥವಾ ಸ್ವತಂತ್ರವಾಗಿ ಸ್ಪರ್ಧಿಸಬಹುದು ಎಂದು ಮೂಲಗಳು ತಿಳಿಸಿವೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪುತ್ತಿಲ್ಲ ಅವರನ್ನು ಸಂಪರ್ಕಿಸಿದಾಗ,  ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆಯನ್ನು ಅವರು ತಳ್ಳಿಹಾಕಲಿಲ್ಲ, ಸಮಯ ಮತ್ತು ಪರಿಸ್ಥಿತಿ ನಿರ್ಧರಿಸಲಿದೆ ಎಂದರು.  ಹೊಸ ಸರ್ಕಾರದಡಿ ಹಿಂದೂ ಸಮುದಾಯವು 'ಹೆಚ್ಚು ಸವಾಲುಗಳನ್ನು' ಎದುರಿಸುವ ಸಾಧ್ಯತೆಯಿರುವುದರಿಂದ ಹೆಚ್ಚು ಹೆಚ್ಚು ಜನರೊಂದಿಗೆ ಸಭೆ ನಡೆಸಿ ಹಿಂದುತ್ವ ಸಂಘಟನೆಯನ್ನು ಬಲಪಡಿಸುವ ಉದ್ದೇಶವಿದೆ ಎಂದು ಸಮರ್ಥಿಸಿಕೊಂಡರು. 

ವಿಧಾನಸಭಾ ಚುನಾವಣೆಯಲ್ಲಿ ಸೋಲಿಗೆ ಕಟೀಲು ಹಾಗೂ ಮಾಜಿ ಸಿಎಂ ಡಿವಿ ಸದಾನಂದಗೌಡ ಕಾರಣ ಎಂದು ಅವರ ಭಾವಚಿತ್ರಕ್ಕೆ ಪಾದರಕ್ಷೆ ಹಾರ ಹಾಕಿದ ಕಾರಣಕ್ಕೆ ಅವರ ಹಿಂಬಾಲಕರನ್ನು ಪೊಲೀಸರು ಥಳಿಸಿರುವ ಘಟನೆ  ಪುತ್ತಿಲ ಮತ್ತು ಹಿಂದುತ್ವ ಕಾರ್ಯಕರ್ತರನ್ನು ಕೆರಳಿಸಿತ್ತು ಮತ್ತು ಅವರು ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯವನ್ನು ಮತ್ತಷ್ಟು ವಿಸ್ತರಿಸಿದೆ ಎಂದು ಮೂಲಗಳು ತಿಳಿಸಿವೆ.

ಇದು ದಕ್ಷಿಣ ಕನ್ನಡದ ಇತರ ಭಾಗಗಳಲ್ಲಿ ಮಾತ್ರವಲ್ಲದೆ ರಾಜ್ಯದಾದ್ಯಂತದ ಹತಾಶೆಗೊಂಡ ಹಿಂದುತ್ವ ಕಾರ್ಯಕರ್ತರ ಬೆಂಬಲ ಗಳಿಸಲು ಅವರಿಗೆ ಸಹಾಯ ಮಾಡಿದೆ. ಮೈಸೂರು,ಮಡಿಕೇರಿ, ಬೆಂಗಳೂರು, ಬಳ್ಳಾರಿ, ಚಿಕ್ಕಮಗಳೂರು, ತುಮಕೂರು, ಬಾಗಲಕೋಟೆ ಮತ್ತಿತರ ಕಡೆಯಿಂದ ಹಿಂದುತ್ವದ ವಿಚಾರವಾಗಿ ಮನವಿಗಳನ್ನು ಸ್ವೀಕರಿಸಿದ್ದು, ಶೀಘ್ರದಲ್ಲೇ ಆ ಸ್ಥಳಗಳಿಗೆ ಭೇಟಿ ನೀಡುವುದಾಗಿ ಪುತ್ತಿಲ ಹೇಳಿದರು.

ಪುತ್ತೂರು ಚುನಾವಣೆ ಸಂದರ್ಭದಲ್ಲಿ ಸಂಘ ಮತ್ತು ಬಿಜೆಪಿ ಬೆಂಬಲ ನೀಡಿದ್ದು, ಮುಂದೆಯೂ ಇಂತಹ ಪರಿಸ್ಥಿತಿ ಎದುರಾದರೆ ಅದನ್ನು ಮುಂದುವರಿಸುತ್ತೇವೆ. ಪಕ್ಷದ ಸಿದ್ಧಾಂತ ಮತ್ತು ಪ್ರಮುಖರ ವಿರುದ್ಧ ವಿಷಯಗಳು ನಡೆದರೆ, ಅದನ್ನು ಸರಿಪಡಿಸುವುದು ಎಲ್ಲರ ಕರ್ತವ್ಯ" ಎಂದು ಅವರು ಹೇಳಿದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com