ಬೇಲೂರಿನಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಪರ ಘೋಷಣೆ: ಕೇಂದ್ರ ಸಚಿವರ ಅಸಮಾಧಾನ

ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ವೇಳೆ ಬೇಲೂರಿನಲ್ಲಿ ಟಿಕೆಟ್ ಆಕಾಂಕ್ಷಿಗಳ ಬೆಂಬಲಿಗರ ನಡುವೆ ಜಟಾಪಟಿ ನಡೆದಿರುವುದಕ್ಕೆ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಮತ್ತು ಶೋಭಾ ಕರಂದ್ಲಾಜೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಜಯ ಸಂಕಲ್ಪ ಯಾತ್ರೆ
ವಿಜಯ ಸಂಕಲ್ಪ ಯಾತ್ರೆ

ಬೇಲೂರು: ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ವೇಳೆ ಬೇಲೂರಿನಲ್ಲಿ ಟಿಕೆಟ್ ಆಕಾಂಕ್ಷಿಗಳ ಬೆಂಬಲಿಗರ ನಡುವೆ ಜಟಾಪಟಿ ನಡೆದಿರುವುದಕ್ಕೆ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಮತ್ತು ಶೋಭಾ ಕರಂದ್ಲಾಜೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರೋಡ್ ಶೋ ಮೂಲಕ ಅದೇ ತಾಲೂಕಿನ ಅರೇಹಳ್ಳಿ ಮತ್ತು ಬಿಕ್ಕೋಡು ಹೋಬಳಿಗಳ ಮೂಲಕ ಸಕಲೇಶಪುರ ತಲುಪಬೇಕಿದ್ದ ವಿಜಯ ಸಂಕಲ್ಪ ಯಾತ್ರೆಗೆ ಮುಖಂಡರು ಜೊತೆಗಿರಲಿಲ್ಲ ಎನ್ನಲಾಗಿದೆ. ಜೋಶಿ ಮತ್ತು ಶೋಭಾ ಕರಂದ್ಲಾಜೆ ಹೆಲಿಕಾಪ್ಟರ್ ಹತ್ತಿ ಅರೇಹಳ್ಳಿ, ಬಿಕ್ಕೋಡು ಬಿಟ್ಟು ಸಕಲೇಶಪುರ ತಲುಪಿದರು. ಹಿರಿಯ ನಾಯಕರ ಸೂಚನೆಯ ನಡುವೆಯೂ ಎಚ್‌ಕೆ ಸುರೇಶ್, ಸಿದ್ದೇಶ್ ನಾಗೇಂದ್ರ, ಕೊರಟಗೆರೆ ಪ್ರಕಾಶ್, ಸಂತೋಷ್ ಕೆಂಚಾಂಬ ಬೆಂಬಲಿಗರು ಹಳೇಬೀಡು ಮತ್ತು ಬೇಲೂರಿನಲ್ಲಿ ತಮ್ಮ ನಾಯಕರ ಪರವಾಗಿ ನಿರಂತರವಾಗಿ ಘೋಷಣೆಗಳನ್ನು ಕೂಗಿದ್ದರು.

ಯಾತ್ರೆಯ ವೇಳೆ ಕೇಂದ್ರ ಸಚಿವರ ಮುಂದೆ ಟಿಕೆಟ್ ಆಕಾಂಕ್ಷಿಗಳು ತಮ್ಮ ಶಕ್ತಿ ಪ್ರದರ್ಶಿಸಲು ಪ್ರಯತ್ನಿಸಿದರು. ರ್ಯಾಲಿಯಲ್ಲಿ ಎಚ್‌ಕೆ ಸುರೇಶ್ ಮತ್ತು ಸಿದ್ದೇಶ್ ನಾಗೇಂದ್ರ ಬೆಂಬಲಿಗರ ಮಾತಿನ ಚಕಮಕಿಯೂ ನಡೆಯಿತು. ಕೇಂದ್ರ ಸಚಿವರು ಚಹಾ ಸೇವಿಸುವಾಗ ಬೆಂಬಲಿಗರು ತಮ್ಮ ನಾಯಕರ ಪರವಾಗಿ ಘೋಷಣೆಗಳನ್ನು ಕೂಗಿದರು. ಪೊಲೀಸರು ಸಭೆಗೆ ಧಾವಿಸಿ ಕಾರ್ಯಕರ್ತರನ್ನು ಚದುರಿಸಿದರು. ಹೀಗಾಗಿ ನಿಗದಿತ ಸಮಯಕ್ಕಿಂತ ಎರಡು ಗಂಟೆಗಳ ನಂತರ ರ್ಯಾಲಿ ಆರಂಭವಾಯಿತು.

ಬಿಜೆಪಿ ಕಾರ್ಯಕರ್ತರ ನಡುವಿನ ಜಟಾಪಟಿಗೆ ತೆರೆ ಎಳೆದ ಹೆಚ್.ಕೆ.ಸುರೇಶ್, ಸಿದ್ದೇಶ್ ನಾಗೇಂದ್ರ ಮಾತನಾಡಿ, ಬೆಂಬಲಿಗರು ತಮ್ಮ ನಾಯಕರ ಪರ ಘೋಷಣೆ ಕೂಗುವುದು ಮಾಮೂಲಿ ಎಂದಿದ್ದು, ವಿಜಯ ಸಂಕಲ್ಪ ಯಾತ್ರೆಗೂ ಮುನ್ನವೇ ಪೂರ್ವಭಾವಿ ಸಭೆ ನಡೆಸಲು ಕೇಂದ್ರ ಸಚಿವರು ಹೆಲಿಕಾಪ್ಟರ್ ಮೂಲಕ ಸಕಲೇಶಪುರಕ್ಕೆ ತೆರಳಿದ್ದಾರೆ. ನಾವು ಒಗ್ಗಟ್ಟಾಗಿದ್ದು, ಹೈಕಮಾಂಡ್ ಯಾವುದೇ ನಾಯಕರಿಗೆ ಪಕ್ಷದ ಟಿಕೆಟ್ ನೀಡಿದರೆ ಗೆಲುವಿಗೆ ಶ್ರಮಿಸುತ್ತೇವೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com