ಗೆಲ್ಲಿಸಿದ ಜನರನ್ನು ತಿರಸ್ಕರಿಸಿ ಸಿದ್ದರಾಮಯ್ಯ ಓಡಿಹೋಗಿದ್ದಾರೆ, ಬಾದಾಮಿ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಮಾಡಿಲ್ಲ: ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಇಂದು ಶನಿವಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿ ಟೀಕಿಸಿದ್ದಾರೆ. ಇಂದು ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಿದ ಅವರು, ಸಿದ್ದರಾಮಯ್ಯನವರಿಗೆ ಈ ಬಾರಿ ಚುನಾವಣೆಯಲ್ಲಿ ತಮ್ಮ ಪರಿಸ್ಥಿತಿ ಅರ್ಥವಾಗಿದೆ. ಮತದಾರರ ಅಲೆ ಯಾರ ಕಡೆಗಿದೆ ಎಂದು ಗೊತ್ತಾಗಿ ಕ್ಷೇತ್ರವನ್ನು ತೊರೆದಿದ್
ಬಾದಾಮಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ
ಬಾದಾಮಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ
Updated on

ಬಾದಾಮಿ(ಬಾಗಲಕೋಟೆ): ಪ್ರಧಾನಿ ನರೇಂದ್ರ ಮೋದಿ ಇಂದು ಶನಿವಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿ ಟೀಕಿಸಿದ್ದಾರೆ. ಇಂದು ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಿದ ಅವರು, ಸಿದ್ದರಾಮಯ್ಯನವರಿಗೆ ಈ ಬಾರಿ ಚುನಾವಣೆಯಲ್ಲಿ ತಮ್ಮ ಪರಿಸ್ಥಿತಿ ಅರ್ಥವಾಗಿದೆ. ಮತದಾರರ ಅಲೆ ಯಾರ ಕಡೆಗಿದೆ ಎಂದು ಗೊತ್ತಾಗಿ ಕ್ಷೇತ್ರವನ್ನು ತೊರೆದಿದ್ದಾರೆ ಎಂದು ಟೀಕಿಸಿದರು.

ಈ ಭಾಗದ ಬಡವರು ಏಕೆ ಎಲ್ಲ ಸೌಲಭ್ಯಗಳಿಂದ ವಂಚಿತರಾದರು ಎಂದು ಕರ್ನಾಟಕದ ಜನತೆ ಸಿದ್ದರಾಮಯ್ಯ ಅವರನ್ನು ಕೇಳಬೇಕೆಂದು ನಾನು ಬಯಸುತ್ತೇನೆ. ಕಳೆದ ಚುನಾವಣೆಯಲ್ಲಿ ಬಾದಾಮಿ ಕ್ಷೇತ್ರಕ್ಕೆ ಬಂದ ಸಿದ್ದರಾಮಯ್ಯನವರನ್ನು ಕ್ಷೇತ್ರದ ಜನರು ಗೆಲ್ಲಿಸಿದರು.ಗೆಲ್ಲಿಸಿದ ಜನರನ್ನು ತಿರಸ್ಕರಿಸಿ ಸಿದ್ದರಾಮಯ್ಯನವರು ಓಡಿಹೋಗಿದ್ದಾರೆ. ಬಾದಾಮಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಯಾವುದೇ ಅಭಿವೃದ್ಧಿ ಮಾಡಿಲ್ಲ ಎಂದು ಕಿಡಿಕಾರಿದರು.

ಡಬಲ್ ಇಂಜಿನ್ ಸರ್ಕಾರದಿಂದ ಬಾಗಲಕೋಟೆಯ ಸುಮಾರು 3 ಲಕ್ಷ ಕುಟುಂಬಗಳಿಗೆ ಮೊದಲ ಬಾರಿಗೆ ನಳ್ಳಿ ನೀರಿನ ಸೌಲಭ್ಯ ಸಿಕ್ಕಿದೆ. ಮೂಲಸೌಕರ್ಯ ಕ್ಷೇತ್ರದಲ್ಲಿ ಅತಿದೊಡ್ಡ ಕಾಮಗಾರಿ ನಡೆಯುತ್ತಿದೆ. ಪಿಎಂ ವಿಶ್ವಕರ್ಮ ಸಮ್ಮಾನ್ ಯೋಜನೆ ಜಾರಿಗೊಳಿಸಿದ್ದೇವೆ. ಬಿಜೆಪಿ ಸರ್ಕಾರ ಎಲ್​ಇಡಿ ಬಲ್ಬ್​ಗಳನ್ನು ವಿತರಣೆ ಮಾಡಿದೆ. ಕುಂಬಾರ, ಕಮ್ಮಾರ, ವಿಶ್ವಕರ್ಮ ಮತ್ತು ಅಕ್ಕಸಾಲಿಗರು ನಮ್ಮ ಶಕ್ತಿ. ಇಳಕಲ್‌ ಸೀರೆ, ಗುಳೇದಗುಡ್ಡದ ಖಣದ ಸೀರೆ ದೇಶದ ಗೌರವ. ಈ ಬಗ್ಗೆ ಕಾಂಗ್ರೆಸ್ ಎಂದೂ ಗಮನಹರಿಸುವ ಕೆಲಸ ಮಾಡಲಿಲ್ಲ. ಆದರೆ ನಮ್ಮ ಸರ್ಕಾರ ಗುರುತಿಸಿ ಗೌರವಿಸಿದೆ ಎಂದು ಹೇಳಿದರು.

ಬಿಜೆಪಿ ಬಡವರು, ಹಿಂದುಳಿದವರಿಗೆ ಅನೇಕ ಯೋಜನೆ ತಂದಿದೆ. ಭಾರತದಲ್ಲೇ ಮೊಬೈಲ್​ಗಳನ್ನು ತಯಾರಿಸುತ್ತಿದ್ದೇವೆ. ಈ ಹಿಂದೆ ವಿದೇಶದಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ದೇಶದಲ್ಲಿಂದು ಮೊಬೈಲ್ ತಯಾರಿಸುವ 200 ಘಟಕಗಳಿವೆ. ಹಿಂದಿನ ಕಾಂಗ್ರೆಸ್ ಆಡಳಿತದಲ್ಲಿ 1 ಜಿಬಿ ಮೊಬೈಲ್ ಡೇಟಾಕ್ಕೆ 300 ರೂಪಾಯಿಯಾಗುತ್ತಿತ್ತು. ಇಂದಿನ ಬಿಜೆಪಿ ಸರ್ಕಾರದಲ್ಲಿ ಅದು 10 ರೂಪಾಯಿಗೆ ಇಳಿದಿದೆ. ಪ್ರಸ್ತುತ ಜನಸಾಮಾನ್ಯರಿಗೆ ಮಾಸಿಕ ಮೊಬೈಲ್ ಡೇಟಾ ಬಳಕೆಯ ದರ 250-300 ರೂಪಾಯಿಯಾಗಿದೆ. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಿದ್ದರೆ 5 ಸಾವಿರ ರೂಪಾಯಿಯಾಗುತ್ತಿತ್ತು ಎಂದು ಟೀಕಿಸಿದರು.

ತುಷ್ಟೀಕರಣ ರಾಜಕಾರಣ, ವೋಟ್ ಬ್ಯಾಂಕ್ ರಾಜಕಾರಣ, ಬಿಜೆಪಿ ಸರ್ಕಾರದ ಯೋಜನೆಗಳನ್ನು ಮುಚ್ಚುವುದು ಮತ್ತು ಲಿಂಗಾಯತ ಮತ್ತು ಒಬಿಸಿ ಸಮುದಾಯವನ್ನು ದುರುಪಯೋಗಪಡಿಸಿಕೊಳ್ಳುವ ಹಳೆಯ ಅಭ್ಯಾಸವನ್ನು ಕಾಂಗ್ರೆಸ್ ಬಿಡುವುದಿಲ್ಲ, ಏನೂ ವಿಷಯ ಸಿಗದಿದ್ದರೆ ಪ್ರಧಾನಿಯನ್ನು ನಿಂದಿಸುವುದು ಕಾಂಗ್ರೆಸ್ ನವರ ಚಾಳಿಯಾಗಿದೆ ಎಂದರು.

ಕಾಂಗ್ರೆಸ್​ ನಾಯಕ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹೇಳುತ್ತಿದ್ದರು ದೆಹಲಿಯಿಂದ 1 ರೂ. ಬಿಡುಗಡೆ ಆದರೆ ಜನರಿಗೆ 15 ಪೈಸೆ ತಲುಪುತ್ತೆ. ರಾಜೀವ್ ಗಾಂಧಿ ಹೇಳಿಕೆಯಂತೆ ಕಾಂಗ್ರೆಸ್​ ಶೇಕಡಾ 85 ಪರ್ಸೆಂಟ್ ಕಮಿಷನ್ ಪಡೆಯುತ್ತಿದ್ದರು. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಫಲಾನುಭವಿ ಖಾತೆಗೆ ನೇರವಾಗಿ ಹಣ ವರ್ಗಾವಣೆ ಆಗುತ್ತಿದೆ. ಇದರಿಂದ ಮಧ್ಯವರ್ತಿಗಳು, ಕಮಿಷನ್​ ಕಳ್ಳಾಟಕ್ಕೆ ಬ್ರೇಕ್ ಹಾಕಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿ ಈ ಬಾರಿಯೂ ಕರ್ನಾಟಕ ಜನತೆ ಡಬಲ್ ಎಂಜಿನ್ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಬೇಕೆಂದು ಒತ್ತಾಯಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com