ಪ್ರಧಾನಿ ಫೋಟೋ ಮರೆಮಾಚದ ಚುನಾವಣಾ ಆಯೋಗ; ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದೆಯೇ? ಕಾಂಗ್ರೆಸ್ ಕಿಡಿ

ಚುನಾವಣಾ ಆಯೋಗ ಬೆಂಗಳೂರಿನ ಅತ್ತಿಗುಪ್ಪೆಯಲ್ಲಿ ಪ್ರಧಾನಿ ಫೋಟೋವನ್ನು ಮರೆಮಾಚಿಲ್ಲ. ಇದು ಕಾಂಗ್ರೆಸ್ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರಧಾನಿ ಮೋದಿ ಫೋಟೋವಿರುವ ಜಾಹೀರಾತು
ಪ್ರಧಾನಿ ಮೋದಿ ಫೋಟೋವಿರುವ ಜಾಹೀರಾತು

ಬೆಂಗಳೂರು: ಮೇ 10 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆ ಬಹಿರಂಗ ಪ್ರಚಾರಕ್ಕೆ ನಾಳೆ ಸಂಜೆ ತೆರೆ ಬೀಳಲಿದೆ. ಮತದಾನ ಮುಕ್ತಾಯದ 48 ಗಂಟೆಗೂ ಮುನ್ನ ಬಹಿರಂಗ ಪ್ರಚಾರ ಅಂತ್ಯವಾಗಲಿದ್ದು, ಮಂಗಳವಾರ ಸಂಜೆಯವರೆಗೂ ಮನೆ ಮನೆಗೆ ತೆರಳಿ  ಮತ ಕೇಳಲು ಅವಕಾಶವಿದೆ.

ಆದಾಗ್ಯೂ, ಚುನಾವಣಾ ಆಯೋಗ ಬೆಂಗಳೂರಿನ ಅತ್ತಿಗುಪ್ಪೆಯಲ್ಲಿ ಪ್ರಧಾನಿ ಫೋಟೋವನ್ನು ಮರೆಮಾಚಿಲ್ಲ. ಇದು ಕಾಂಗ್ರೆಸ್ ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ಐಟಿ, ಇಡಿಗಳೂ ಏಕಪಕ್ಷಿಯವಾಗಿವೆ, ಚುನಾವಣಾ ಆಯೋಗವೂ ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದೆಯೇ? ಎಂದು ಕಿಡಿಕಾರಿದೆ.

ಚುನಾವಣೆ ಘೋಷಣೆಯಾಗಿ, ಚುನಾವಣೆ ಸಮೀಪಿಸಿದರೂ ಪ್ರಧಾನಿ ಫೋಟೋವನ್ನು ಮರೆಮಾಚಿಲ್ಲ. ಏಕೆ ಈ ತಾರತಮ್ಯ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಯನ್ನು  ಪ್ರಶ್ನಿಸಿದ್ದು,  ತಾವು ಏಕಪಕ್ಷೀಯವಾಗಿ ವರ್ತಿಸುತ್ತಿರುವಾಗ ನ್ಯಾಯಯುತ ಚುನಾವಣೆ ನಡೆಯುವ ಭರವಸೆ ಸಾಧ್ಯವೇ? ಎಂದು ಅನುಮಾನ ವ್ಯಕ್ತಪಡಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com