ಮೈಸೂರು: ಮೊದಲ ಬಾರಿ ವೋಟ್ ಮಾಡಿ 'ಮತ' ಮಾರಿಕೊಂಡ ಭವ್ಯ ಭಾರತದ ಭಾವಿ ಪ್ರಜೆಗಳು!

ಪ್ರಜಾಪ್ರಭುತ್ವದ ಅತ್ಯಂತ ಕೆಟ್ಟ ನಿದರ್ಶನಕ್ಕೆ ಮೈಸೂರು ಸಾಕ್ಷಿಯಾಯಿತು. ಬುಧವಾರ ನಡೆದ ಮತದಾನದ ಸಂದರ್ಭದಲ್ಲಿ ಹಳೆ-ಮೈಸೂರು ಪ್ರದೇಶದಲ್ಲಿ ಅನೇಕ ಯುವ ಮತ್ತು ಮೊದಲ ಬಾರಿಯ ಮತದಾರರು ತಮ್ಮ ಮತಗಳನ್ನು ಹಣಕ್ಕೆ ಮಾರಾಟ ಮಾಡಿಕೊಂಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಮೈಸೂರು: ಪ್ರಜಾಪ್ರಭುತ್ವದ ಅತ್ಯಂತ ಕೆಟ್ಟ ನಿದರ್ಶನಕ್ಕೆ ಮೈಸೂರು ಸಾಕ್ಷಿಯಾಯಿತು. ಬುಧವಾರ ನಡೆದ ಮತದಾನದ ಸಂದರ್ಭದಲ್ಲಿ ಹಳೆ-ಮೈಸೂರು ಪ್ರದೇಶದಲ್ಲಿ ಅನೇಕ ಯುವ ಮತ್ತು ಮೊದಲ ಬಾರಿಯ ಮತದಾರರು ತಮ್ಮ ಮತಗಳನ್ನು ಹಣಕ್ಕೆ ಮಾರಾಟ ಮಾಡಿಕೊಂಡಿದ್ದಾರೆ.. ಇದರಿಂದ ಹಲವು ಕ್ಷೇತ್ರಗಳಲ್ಲಿ ಚುನಾವಣಾ ಫಲಿತಾಂಶ ತಲೆಕೆಳಗಾಗುವ ನಿರೀಕ್ಷೆ ಇದೆ.

ಜಿಲ್ಲಾಡಳಿತ ಮತ್ತು ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಚುನಾವಣಾ ಭಾಗವಹಿಸುವಿಕೆ (SVEEP) ಸಮಿತಿಯು ಈ ಬಾರಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಿದ್ದರೂ, ಮೊದಲ ಬಾರಿಗೆ ಮತ್ತು ಯುವ ಮತದಾರರ ಪ್ಲಾನ್ ಬೇರೆಯೇ ಆಗಿತ್ತು.

ಜಿಲ್ಲೆಯ ನಗರ ಹಾಗೂ ಗ್ರಾಮೀಣ ಭಾಗದ ಹಲವು ಮತಗಟ್ಟೆಗಳಲ್ಲಿ ಇದು ಸ್ಪಷ್ಟವಾಗಿ ಕಂಡುಬಂದಿದೆ. ಅಂತಹ ಅನೇಕ ಮತದಾರರು ಮತಕ್ಕಾಗಿ ಹಣ ಹಂಚುವವರನ್ನು ಸಂಪರ್ಕಿಸುವಲ್ಲಿ ನಿರತರಾಗಿದ್ದರು, ಕೆಲವರು ರಾಜಕೀಯ ಪಕ್ಷಗಳ ಏಜೆಂಟರಿಗಾಗಿ ಮತಗಟ್ಟೆಗಳ ಬಳಿ ಕಾಯುತ್ತಿದ್ದರು. ಕೆಲವರು ಏಜೆಂಟರ ಜತೆ ಒಪ್ಪಂದ ಮಾಡಿಕೊಂಡಿರುವುದು ಕಂಡುಬಂದಿದೆ.

ಜಿಲ್ಲೆಯಲ್ಲಿ ಈ ವರ್ಷ 50 ಸಾವಿರಕ್ಕೂ ಹೆಚ್ಚು ಯುವಕರು ಮತದಾರರ ಪಟ್ಟಿಗೆ ಸೇರ್ಪಡೆಯಾಗಿದ್ದು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅತಿ ಹೆಚ್ಚು 6,068 ಮತದಾರರು, ಹುಣಸೂರಿನಲ್ಲಿ 5,663, ಕೆ.ಆರ್.ನಗರದಲ್ಲಿ 5,170, ನರಸಿಂಹರಾಜ ಕ್ಷೇತ್ರದಲ್ಲಿ 4,944 ಮತದಾರರ ಸೇರ್ಪಡೆಯಾಗಿದೆ.

ಎಚ್‌ಡಿ ಕೋಟೆ ತಾಲೂಕಿನ ಹೈರಿಗೆ ಗ್ರಾಮದಲ್ಲಿ 19 ರಿಂದ 23 ವರ್ಷದೊಳಗಿನ ಅನೇಕ ಮತದಾರರು ಮತಗಟ್ಟೆಯ ಮುಂದೆ ತಮ್ಮ ಮತಗಳಿಗೆ "ಉತ್ತಮ" ಬೆಲೆ ನೀಡಲು ಗ್ರಾಮದ ಮುಖಂಡರು ಕಾಯುತ್ತಿದ್ದ ದೃಶ್ಯ ಕಂಡು ಬಂದಿತ್ತು. ಕಾಲೇಜು ವಿದ್ಯಾರ್ಥಿ ಮಹೇಶ ಎಂಬಾತ ಜೆಡಿಎಸ್ ಮುಖಂಡರೊಬ್ಬರಿಗೆ ಮತ ಮಾರಲು ಸಿದ್ಧ ಎಂದು ಹೇಳಿರುವುದು ತಿಳಿದು ಬಂದಿದೆ. 1,000 ನೀಡುವುದಾಗಿ ಜೆಡಿಎಸ್ ಏಜೆಂಟ್ ಹೇಳಿದಾಗ 1500 ರು, ಹಣ ಕೊಟ್ಟರೆ ಇನ್ನೂ ನಾಲ್ವರು ಮತದಾರರನ್ನು ಕರೆತರುವುದಾಗಿ ಹೇಳಿದ ಮಹೇಶ ಪ್ರತಿ ವೋಟಿಗೆ1500 ರೂ ಡಿಮ್ಯಾಂಡ್ ಮಾಡಿದ್ದ.

ಹಣ ತರಲು ಸ್ವಲ್ಪ ಸಮಯ ಬೇಕು ಎಂದು ಜೆಡಿಎಸ್ ಮುಖಂಡ ಹೇಳಿದಾಗ, ಮಹೇಶೇ ಜೊತೆಗಿದ್ದ ಐವರ ಗುಂಪು ಅದೇ ಪ್ಲಾನ್‌ನೊಂದಿಗೆ ಬಿಜೆಪಿಯ ಏಜೆಂಟರನ್ನು ಸಂಪರ್ಕಿಸಿತು. ಅಷ್ಟೊತ್ತಿಗಾಗಲೇ ಕಂಠಪೂರ್ತಿ ಕುಡಿದಿದ್ದ ಮಹೇಶ, ''ಚುನಾವಣೆಯಲ್ಲಿ ಹಣದ ಚಲಾವಣೆ ಇಲ್ಲದ ಜಾಗ ತೋರಿಸು. ಇನ್ನೂ ಮಧ್ಯಾಹ್ನ 1 ಗಂಟೆ, ಸಂಜೆ 4 ಗಂಟೆಯವರೆಗೆ ಕಾಯುತ್ತೇವೆ. ನಮಗೆ ಹೆಚ್ಚು ಹಣ ನೀಡುವ ಪಕ್ಷಕ್ಕೆ ನಾವು ಮತ ಹಾಕುತ್ತೇವೆ ಎಂದು ಹೇಳಿದ್ದಾನೆ.

ಕೃಷ್ಣರಾಜ ಕ್ಷೇತ್ರದ ಕುರುಬರಹಳ್ಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಲು ಯುವ ಮತದಾರರು ಹಣದ ಬೇಡಿಕೆ ಇಟ್ಟಿರುವುದು ಕಂಡು ಬಂದಿದೆ. ಮೂಲಗಳ ಪ್ರಕಾರ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ವ್ಯಕ್ತಿಯೊಬ್ಬರು ಪಂಚಾಯತ್ ಮುಖಂಡರೊಬ್ಬರನ್ನು ಸಂಪರ್ಕಿಸಿ ತಮ್ಮ ನೇತೃತ್ವದ ಸಂಘವು 31 ಸದಸ್ಯರನ್ನು ಹೊಂದಿದ್ದು, ಪ್ರತಿ ಮತಕ್ಕೆ 1,500 ರೂಪಾಯಿ ನೀಡಿದರೆ ನಿರ್ದಿಷ್ಟ ಅಭ್ಯರ್ಥಿಗೆ ಮತ ಹಾಕಲು ಸಿದ್ಧ ಎಂದು ತಿಳಿಸಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೆ ನಿರುದ್ಯೋಗದಂತಹ ಸಮಸ್ಯೆಗಳನ್ನು ಬಗೆಹರಿಸುವುದಿಲ್ಲ, ಹಣ ತೆಗೆದುಕೊಳ್ಳುವುದರಲ್ಲಿ ತಪ್ಪೇನಿಲ್ಲ’ ಎಂದು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮತಕ್ಕಾಗಿ 1500 ರೂಪಾಯಿ ತೆಗೆದುಕೊಂಡ ಕಾರ್ಖಾನೆಯ ಮೇಲ್ವಿಚಾರಕ ಹರೀಶ್ ಗೌಡ ಪ್ರಶ್ನಿಸಿದ್ದಾರೆ.

ಮತಗಟ್ಟೆಗಳ ಬಳಿ ವಿವಿಧ ಪಕ್ಷಗಳ ಏಜೆಂಟರೊಂದಿಗೆ ಘೋಷಣೆಗಳನ್ನು ಕೂಗುತ್ತಾ, ತಮ್ಮ ಅಭ್ಯರ್ಥಿಗಳ ಪರವಾಗಿ ಮತ ಕೇಳುತ್ತಿದ್ದ ಮಕ್ಕಳು ಭಾಗಿಯಾಗಿರುವುದು ಹೆಚ್ಚು ಆತಂಕಕಾರಿಯಾಗಿ ಕಂಡು ಬಂದಿದೆ. ಮಾದರಿ ನೀತಿ ಸಂಹಿತೆ ಮತ್ತು ಇತರ ಮಾರ್ಗಸೂಚಿಗಳು ಜಾರಿಯಲ್ಲಿದ್ದಾಗ, ಇವೆಲ್ಲವೂ ನಡೆಯುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com