ಕಾಂಗ್ರೆಸ್ 120ಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆದು ಸ್ವಂತ ಶಕ್ತಿ ಮೇಲೆ ಅಧಿಕಾರಕ್ಕೆ ಬರುತ್ತದೆ: ಸಿದ್ದರಾಮಯ್ಯ

16ನೇ ವಿಧಾನಸಭೆಯ ಸದಸ್ಯರ ಆಯ್ಕೆಗೆ ಮೊನ್ನೆಯಷ್ಟೇ ಮುಕ್ತಾಯವಾದ ಚುನಾವಣೆಯ ಫಲಿತಾಂಶ ಇಂದು ಮೇ 13ರಂದು ಪ್ರಕಟವಾಗುತ್ತಿದ್ದು ಈಗಾಗಲೇ 6ನೇ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದೆ. 
ಮೈಸೂರಿನ ಮತ ಎಣಿಕೆ ಕೇಂದ್ರ ಮುಂದೆ ಗೆಲುವಿನ ಸಂಕೇತ ಬೀರಿದ ಸಿದ್ದರಾಮಯ್ಯ
ಮೈಸೂರಿನ ಮತ ಎಣಿಕೆ ಕೇಂದ್ರ ಮುಂದೆ ಗೆಲುವಿನ ಸಂಕೇತ ಬೀರಿದ ಸಿದ್ದರಾಮಯ್ಯ

ಮೈಸೂರು: 16ನೇ ವಿಧಾನಸಭೆಯ ಸದಸ್ಯರ ಆಯ್ಕೆಗೆ ಮೊನ್ನೆಯಷ್ಟೇ ಮುಕ್ತಾಯವಾದ ಚುನಾವಣೆಯ ಫಲಿತಾಂಶ ಇಂದು ಮೇ 13ರಂದು ಪ್ರಕಟವಾಗುತ್ತಿದ್ದು ಈಗಾಗಲೇ 6ನೇ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದೆ. 

ಕಾಂಗ್ರೆಸ್ ಸರ್ಕಾರ ರಚಿಸಲು ಬೇಕಾದ 113 ಮ್ಯಾಜಿಕ್ ನಂಬರ್ ನ್ನು ದಾಟಿ ಸರಳವಾಗಿ ಬಹುಮತ ಸಿಗುವ ಸೂಚನೆ ಕಂಡುಬರುತ್ತಿದೆ. ಅದರಂತೆ ಕಾಂಗ್ರೆಸ್ ಪಾಳಯದಲ್ಲಿ ಸಂಭ್ರಮ ಮನೆಮಾಡಿದೆ. ಮತ ಎಣಿಕೆ ಮುಂದುವರಿಯುತ್ತಿರುವಂತೆ ಸಿದ್ದರಾಮಯ್ಯನವರು ಇಂದು ಬೆಳಗ್ಗೆ ಮುಖದಲ್ಲಿ ಸಂಭ್ರಮ, ಸಂತೋಷ ತುಂಬಿಕೊಂಡು ಗೆಲುವಿನ ನಗೆ ಬೀರುತ್ತಾ ಕೈ ಎತ್ತಿ ಗೆಲುವಿನ ಸಂಕೇತವನ್ನು ಸೂಚಿಸಿದರು.

ನಂತರ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ನಮ್ಮ ಅನಿಸಿಕೆ, ಲೆಕ್ಕಾಚಾರದಂತೆ ಮುನ್ನಡೆ ಸಾಧಿಸಿದೆ. ಬಿಜೆಪಿಗೆ 65ರಿಂದ 70 ಸ್ಥಾನ ಬರಬಹುದೆಂದು ಲೆಕ್ಕ ಹಾಕಿಕೊಂಡಿದ್ದೆವು, ಹೇಳಿದ್ದೆವು ಕೂಡ, ಅದೇ ರೀತಿ ಬಂದಿದೆ. ನಾವು 120ಕ್ಕಿಂತ ಜಾಸ್ತಿ ಬರುತ್ತದೆ ಎಂದು ಹೇಳಿದ್ದೆವು, ಅದೇ ತರ ಟ್ರೆಂಡ್ ಇದೆ. ಜೆಡಿಎಸ್ ಗೆ 25-26 ಬರಬಹುದು ಎಂದು ಹೇಳಿದ್ದೆವು, ಅದೇ ರೀತಿ ಟ್ರೆಂಡ್ ಇದೆ ಎಂದರು.

ಕಾಂಗ್ರೆಸ್ ಪಾರ್ಟಿ 120 ಮೇಲೆ ಸ್ಥಾನಗಳನ್ನು ತೆಗೆದುಕೊಂಡು ಸ್ವಂತ ಶಕ್ತಿ ಮೇಲೆ ಅಧಿಕಾರಕ್ಕೆ ಬರುತ್ತದೆ. ವರುಣಾದಲ್ಲಿ 8 ಸಾವಿರ ಲೀಡ್ ಇದೆ, ಮುಂದೆ ಕೂಡ ಇದೇ ರೀತಿ ಇರಬಹುದು, ಚಾಮರಾಜನಗರದಲ್ಲಿಯೂ ಪುಟ್ಟರಂಗಶೆಟ್ಟಿ ಗೆಲ್ಲುತ್ತಾರೆ ಎಂಬ ನಂಬಿಕೆಯಿದೆ. ಸೋಮಣ್ಣನವರು ಎರಡೂ ಕ್ಷೇತ್ರಗಳಲ್ಲಿ ಸೋಲುತ್ತಾರೆ ಎಂದರು.

ನರೇಂದ್ರ ಮೋದಿ, ಅಮಿತ್ ಶಾ, ಜೆ ಪಿ ನಡ್ಡಾ ಎಷ್ಟೇ ಸಲ ಬಂದು ಪ್ರಚಾರ ಮಾಡಿದರೂ ಕರ್ನಾಟಕದಲ್ಲಿ ಮತದಾರರನ್ನು ಓಲೈಸಲು ಸಾಧ್ಯವಾಗುವುದಿಲ್ಲ. ಬಿಜೆಪಿಯವರು ಭ್ರಷ್ಟಾಚಾರ, ದುರಾಡಳಿತಗಳಿಂದ ಜನರು ಬೇಸತ್ತಿದ್ದಾರೆ. ಜನ ಬದಲಾವಣೆ ಬಯಸುತ್ತಾರೆ ಎಂದು ಹೇಳುತ್ತಿದ್ದೆ, ಅದೇ ರೀತಿ ಜನ ತೀರ್ಪು ಕೊಟ್ಟಿದ್ದಾರೆ ಎನಿಸುತ್ತಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com