ಚಿಕ್ಕಮಗಳೂರು: ನನ್ನನ್ನು ಬಿಜೆಪಿಯಿಂದ ಸಿ.ಟಿ.ರವಿ ಹೊರ ಕಳಿಸಿದ್ರು, ಈಗ ಅವರು ಕ್ಷೇತ್ರವನ್ನೇ ಖಾಲಿ ಮಾಡಬೇಕಾಯ್ತು ಎಂದು ಎಂ.ಪಿ. ಕುಮಾರಸ್ವಾಮಿ ವ್ಯಂಗ್ಯವಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿಕ್ಕಮಗಳೂರಲ್ಲಿ ಒಕ್ಕಲಿಗರು ಇರೋದು ಆರೇ ಸಾವಿರ ಮತದಾರರು ಅಷ್ಟೇ. ಆದರೆ ಚಿಕ್ಕಮಗಳೂರು ಇನ್ಮುಂದೆ ವೀರಶೈವ ಲಿಂಗಾಯತರ ಕ್ಷೇತ್ರ ಎಂದಿದ್ದಾರೆ.
ಇನ್ಮುಂದೆ ಸಿ.ಟಿ.ರವಿಯ ಈ ವಿಚಾರಗಳು ಕೆಲಸ ಮಾಡುವುದಿಲ್ಲ. ಮಾಜಿ ಸಿಎಂ ಯಡಿಯೂರಪ್ಪ ಮೊಬೈಲ್ ಸ್ವಿಚ್ ಆಫ್ ಮಾಡಲಿಲ್ಲ. ಫೋನ್ ಸ್ವಿಚ್ ಆಫ್ ಮಾಡಿದ್ರೆ ಬಿಜೆಪಿಗೆ 50 ಸೀಟ್ ಅಷ್ಟೇ ಬರುತ್ತಿತ್ತು ಎಂದು ವಾಗ್ದಾಳಿ ನಡೆಸಿದ್ದಾರೆ.
ಮೂಡಿಗೆರೆ ಬಿಜೆಪಿಗೆ ಜೀವ ತುಂಬಿದವನೇ ನಾನಾಗಿದ್ದೆ. ಆದರೆ ನನ್ನನ್ನ ಬಿಟ್ಟಿದ್ದಕ್ಕೆ 5 ಕ್ಷೇತ್ರ ಹೋಗುತ್ತೆ ಅಂತ ಸಾಮಾನ್ಯ ಜನ ಹೇಳ್ತಾರೆ. ಜೆಡಿಎಸ್‍ನಲ್ಲಿ ಬೂತ್ ಕಮಿಟಿ, ಪಕ್ಷ ಸಂಘಟನೆ ಇರಲಿಲ್ಲ, ಹಾಗಾಗಿ ಸೋತೆ. ಎಲ್ಲಾ ಸರಿ ಮಾಡಿಕೊಂಡು ಚುನಾವಣೆ ಮಾಡೋದು ಆಗುತ್ತಿರಲಿಲ್ಲ, ಕಷ್ಟವಾಗಿತ್ತು. ಮುಂದೆ ಎಲ್ಲಾ ಸರಿ ಮಾಡಿಕೊಂಡು ಜಿಪಂ, ತಾಪಂ ಎಲೆಕ್ಷನ್ ಮಾಡುತ್ತೇವೆ ಎಂದು ಎಂ.ಪಿ ಕುಮಾರಸ್ವಾಮಿ ಹೇಳಿದ್ದಾರೆ.
ಬಿಜೆಪಿಯ ಭದ್ರಕೋಟೆ, ಹಿಂದುತ್ವದ ಕಿಚ್ಚಿನ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಿಜೆಪಿಗೆ ಹೀನಾಯ ಸೋಲಾಗಿದೆ. ಹಿಂದುತ್ವದ ಫೈಯರ್ ಬ್ರಾಂಡ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದಶಿ ಸಿ.ಟಿ. ರವಿ ಸೇರಿದಂತೆ ಹಾಲಿ ನಾಲ್ಕು ಶಾಸಕರನ್ನ ಸೋಲಿಸುವ ಮೂಲಕ ಬಿಜೆಪಿ ಕೋಟೆಯನ್ನ ಕಾಂಗ್ರೆಸ್ ಕಬ್ಜ ಮಾಡಿದೆ.
Advertisement