ಮುಖ್ಯಮಂತ್ರಿ ಹುದ್ದೆಗೆ ಸಿದ್ದು-ಡಿಕೆಶಿ ಫೈಟ್; ಅಖಾಡಕ್ಕೆ ಈಗ ಡಾ. ಜಿ.ಪರಮೇಶ್ವರ್ ಎಂಟ್ರಿ!

ರಾಜ್ಯದ ನೂತನ ಮುಖ್ಯಮಂತ್ರಿ ಸ್ಥಾನಕ್ಕಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿರುವಂತೆಯೇ, ಈಗ ಮಾಜಿ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಕೂಡಾ  ಅಖಾಡ ಪ್ರವೇಶಿಸಿದ್ದಾರೆ.
ಡಾ.ಜಿ. ಪರಮೇಶ್ವರ್
ಡಾ.ಜಿ. ಪರಮೇಶ್ವರ್

ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿ ಸ್ಥಾನಕ್ಕಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿರುವಂತೆಯೇ, ಈಗ ಮಾಜಿ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಕೂಡಾ  ಅಖಾಡ ಪ್ರವೇಶಿಸಿದ್ದಾರೆ. ಒಂದು ವೇಳೆ ಸರ್ಕಾರ ನಡೆಸುವಂತೆ ಪಕ್ಷದ ಹೈಕಮಾಂಡ್ ಹೇಳಿದರೆ ಜವಾಬ್ದಾರಿ ತೆಗೆದುಕೊಳ್ಳಲು ಸಿದ್ಧರಿರುವುದಾಗಿ ಮಂಗಳವಾರ ಹೇಳಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷಕ್ಕಾಗಿ ತಾನೂ ಮಾಡಿರುವ ಸೇವೆ ಹೈಕಮಾಂಡ್ ಗೆ ಗೊತ್ತಿದೆ. ಮುಖ್ಯಮಂತ್ರಿ ಸ್ಥಾನಕ್ಕಾಗಿ ಲಾಬಿ ಮಾಡುವ ಅಗತ್ಯ ನನಗಿಲ್ಲ. ಒಂದು ವೇಳೆ ಹೈಕಮಾಂಡ್ ತೀರ್ಮಾನಿಸಿ, ಸರ್ಕಾರ ರಚಿಸುವಂತೆ ಕೇಳಿದರೆ, ಜವಾಬ್ದಾರಿ ತೆಗೆದುಕೊಳ್ಳಲು ಸಿದ್ಧ ಎಂದರು. 

ಪಕ್ಷದ ಹೈಕಮಾಂಡ್ ನಲ್ಲಿ ನಂಬಿಕೆ ಇಟ್ಟಿದ್ದೇನೆ. ನಾನು ಕೆಲವೊಂದು ಸಿದ್ಧಾಂತ ಹೊಂದಿದ್ದೇನೆ. ನಾನು ಕೂಡಾ 50 ಶಾಸಕರನ್ನು ಕರೆದೊಯ್ದು ಶಕ್ತಿ ಪ್ರದರ್ಶನ ನಡೆಸಬಹುದು ಆದರೆ ಪಕ್ಷದ ಶಿಸ್ತು ನನಗೆ ಮುಖ್ಯ. ನಮ್ಮಂತಹವರೇ ಇದನ್ನು ಪಾಲಿಸದಿದ್ದರೆ ಪಕ್ಷದಲ್ಲಿ ಯಾವುದೇ ಶಿಸ್ತು ಇರಲ್ಲ. ಜವಾಬ್ದಾರಿ ಕೊಟ್ಟರೆ ನಿರ್ವಹಿಸುತ್ತೇನೆ ಎಂದು ಹೇಳಿದ್ದೇನೆ. ಆಗಲ್ಲ ಎಂದು ಹೇಳಿಲ್ಲ ಎಂದು ಅವರು ಹೇಳಿದರು.

ನಾನು ಕೂಡಾ ಪಕ್ಷದ ಅಧ್ಯಕ್ಷನಾಗಿ 8 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ. 2013ರಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲಾಗಿತ್ತು. ಉಪ ಮುಖ್ಯಮಂತ್ರಿಯಾಗಿಯೂ ಕಾರ್ಯನಿರ್ವಹಿಸಿದ್ದೇನೆ. ಹೈಕಮಮಾಂಡ್ ಎಲ್ಲಾವನ್ನೂ ನೋಡಿದೆ. ಅದಕ್ಕಾಗಿ ಸಿಎಂ ಸ್ಥಾನಕ್ಕಾಗಿ ಯಾವುದೇ ಲಾಬಿ ಮಾಡುವ ಅಗತ್ಯವಿಲ್ಲ. ನಾನು ಮೌನವಾಗಿದ್ದೇನೆ ಎಂದ ಮಾತ್ರಕ್ಕೆ ಸಾಮರ್ಥ್ಯವಿಲ್ಲ ಎಂಬರ್ಥವಲ್ಲಾ, ಒಂದು ವೇಳೆ ಅವಕಾಶ ಕೊಟ್ಟರೆ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com