ಸಿದ್ದು ಬೇಡ: ನನ್ನನ್ನು ಸಿಎಂ ಮಾಡಿ, ಇಲ್ಲದಿದ್ದರೆ ನೀವೇ ಸಿಎಂ ಆಗಿ: ಖರ್ಗೆಗೆ ಡಿಕೆಶಿ ಪಟ್ಟು
ನವದೆಹಲಿ: ಸಿಎಂ ಹುದ್ದೆ ಆಯ್ಕೆ ಕಗ್ಗಂಟು ಹೈಕಮಾಂಡ್ ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಕಾಂಗ್ರೆಸ್ ನ ಅಗ್ರ ನಾಯಕರ ಮನವೊಲಿಕೆಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಜಗ್ಗುತ್ತಿಲ್ಲ. ಸಿದ್ದರಾಮಯ್ಯ ಬೇಡ, ನನ್ನನ್ನು ಸಿಎಂ ಮಾಡಿ ಇಲ್ಲವೇ ನೀವೇ ಸಿಎಂ ಆಗಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಡಿಕೆ ಶಿವಕುಮಾರ್ ಪಟ್ಟು ಹಿಡಿದಿದ್ದಾರೆ.
ಇಂದು ನವದೆಹಲಿಯಲ್ಲಿರುವ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಸುದೀರ್ಘ ಮಾತುಕತೆ ನಡೆಸಿದ ಡಿಕೆ ಶಿವಕುಮಾರ್ ಯಾರ ಮನವೊಲಿಕೆಗೂ ಜಗ್ಗುತ್ತಿಲ್ಲ. ಹೈಕಮಾಂಡ್ ನ 50:50 ಫಾರ್ಮುಲಾ, ಡಿಸಿಎಂ ಹುದ್ದೆ, ಅಲ್ಲದೆ ಯಾವುದೇ ಪ್ರಮುಖ ಖಾತೆಗಳು ನನಗೆ ಬೇಡ ಮಾಡುವುದಾದರೇ ಸಿಎಂ ಮಾಡಿ ಎಂದು ಆಗ್ರಹಿಸಿದ್ದಾರೆ.
ಸಿದ್ದರಾಮಯ್ಯ ಸಿಎಂ ಎಂಬ ಸುದ್ದಿ ಸತ್ಯಕ್ಕೆ ದೂರವಾದದ್ದು, ಇದನ್ನು ನಂಬಬೇಡಿ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಇನ್ನು ಡಿಕೆ ಶಿವಕುಮಾರ್ ನನ್ನನ್ನು ಸಿಎಂ ಮಾಡದರೆ ಇದ್ದರೆ ಸಿದ್ದರಾಮಯ್ಯ ಸರ್ಕಾರದಲ್ಲಿ ಯಾವುದೇ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಇನ್ನು ರಾಹುಲ್ ಗಾಂಧಿ ಭೇಟಿ ವೇಳೆ ಡಿಕೆ ಶಿವಕುಮಾರ್ ದಲಿತ ಸಿಎಂ ಕಾರ್ಡ್ ಉಪಯೋಗಿಸಿದ್ದಾರೆ. ಈ ಬಾರಿ ಮಾಡುವುದಾದರೇ ದಲಿತರನ್ನು ಸಿಎಂ ಮಾಡಿ ಎಂದು ಪಟ್ಟು ಹಿಡಿದಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರನ್ನೇ ಸಿಎಂ ಮಾಡಿ ಎಂದು ಡಿಕೆ ಶಿವಕುಮಾರ್ ರಾಹುಲ್ ಗಾಂಧಿಗೆ ಹೇಳಿದ್ದಾರೆ ಎನ್ನಲಾಗಿದೆ.
ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಸುದೀರ್ಘ ಮಾತುಕತೆ ಬಳಿಕ ಹೊರಬಂದ ಡಿಕೆ ಶಿವಕುಮಾರ್ ಯಾವುದೇ ಪ್ರತಿಕ್ರಿಯೆ ನೀಡದೆ ಮೌನಕ್ಕೆ ಶರಣಾಗಿದ್ದಾರೆ. ಇನ್ನು ಮಾಧ್ಯಮಗಳು ಎದುರಾಗುತ್ತಿದ್ದಂತೆ ಕೈಮುಗಿದು ಅಲ್ಲಿಂದ ಡಿಕೆ ಸುರೇಶ್ ಅವರ ನಿವಾಸಕ್ಕೆ ತೆರಳಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ