ಜಿದ್ದಿಗೆ ಬಿದ್ದಿದ್ದ ಡಿಕೆ ಶಿವಕುಮಾರ್ ಅಧಿಕಾರ ಹಂಚಿಕೆ ಸೂತ್ರ ಒಪ್ಪಲು ವಿಧಿಸಿರುವ ಷರತ್ತುಗಳೇನು?

ರಾಷ್ಟ್ರ ರಾಜಧಾನಿ ನಹಲಿಯಲ್ಲಿ ನಿನ್ನೆ ಇಡೀ ದಿನ ಹೈಡ್ರಾಮಾ ನಡೆದರೂ ಕರ್ನಾಟಕದ ಮುಂದಿನ ಸಿಎಂ ಯಾರು ಅನ್ನೋದು ಫೈನಲ್ ಆಗಲಿಲ್ಲ. ರಾತ್ರಿ ಸಭೆ ಮೇಲೆ ಸಭೆ ನಡೆಸಲಾಯಿತು.
ಡಿ.ಕೆ ಶಿವಕುಮಾರ್
ಡಿ.ಕೆ ಶಿವಕುಮಾರ್

ನವದೆಹಲಿ: ರಾಷ್ಟ್ರ ರಾಜಧಾನಿ ನಹಲಿಯಲ್ಲಿ ನಿನ್ನೆ ಇಡೀ ದಿನ ಹೈಡ್ರಾಮಾ ನಡೆದರೂ ಕರ್ನಾಟಕದ ಮುಂದಿನ ಸಿಎಂ ಯಾರು ಅನ್ನೋದು ಫೈನಲ್ ಆಗಲಿಲ್ಲ. ರಾತ್ರಿ ಸಭೆ ಮೇಲೆ ಸಭೆ ನಡೆಸಲಾಯಿತು.

ಮತ್ತೊಂದು ಸುತ್ತಿನ ಚರ್ಚೆಯ ಬಳಿಕ ರಾತ್ರಿ ಸಿದ್ದರಾಮಯ್ಯ ಜೊತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ, ಕೆ.ಸಿ ವೇಣುಗೋಪಾಲ್​ ಸಭೆ ನಡೆಸಿ ಅಭಿಪ್ರಾಯ ಪಡೆದರು. ಬಳಿಕ ಡಿಕೆಶಿ ಜೊತೆ ಸುರ್ಜೇವಾಲ ಸುಮಾರು ಅರ್ಧಗಂಟೆ ಮೀಟಿಂಗ್ ಮಾಡಿದರು.

ಸಿದ್ದರಾಮಯ್ಯ-ಡಿ.ಕೆ ಶಿವಕುಮಾರ್ ಅಭಿಪ್ರಾಯ ಪಡೆದ ಸುರ್ಜೇವಾಲ, ವೇಣುಗೋಪಾಲ್​​​​​​​​​​ ಸೇರಿ ದೆಹಲಿಯಲ್ಲಿರುವ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ಆಗಮಿಸಿದರು. ಆನಂತರ ಹೈಕಮಾಂಡ್​ನ ಸಂಧಾನ ಸೂತ್ರ ರೆಡಿಯಾಯಿತು.

ಆದರೆ ಸಿಎಂ ಸ್ಥಾನ ತಮ್ಮದಾಗಲೇಬೇಕೆಂದು ಶತಾಯಗತಾಯ ಪ್ರಯತ್ನಿಸಿದ್ದ ಡಿ.ಕೆ ಶಿವಕುಮಾರ್‌ ಅವರು, ನಾಲ್ಕು ಷರತ್ತುಗಳನ್ನು ಹೈಕಮಾಂಡ್‌ ಮುಂದಿಟ್ಟಿದ್ದಾರೆ. ಆ ನಾಲ್ಕು ಷರತ್ತುಗಳು ಇಂತಿವೆ:

ಮೊದಲ 2 ವರ್ಷ ಮಾತ್ರ ಸಿದ್ದರಾಮಯ್ಯ ಸಿಎಂ ಆಗಿರಬೇಕು.
ನಂತರದ 3 ವರ್ಷಗಳ ಕಾಲ ಸಿಎಂ ಹುದ್ದೆ ನನ್ನದಾಗಬೇಕು.
ಡಿಸಿಎಂ ಸ್ಥಾನದಲ್ಲಿ ನಾನು ಮಾತ್ರ ಇರಬೇಕು. ಬೇರೆ ಇನ್ನಾರಿಗೂ ಡಿಸಿಎಂ ಸ್ಥಾನ ಹಂಚಿಕೆ ಮಾಡಬಾರದು.
ಜತೆಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನವೂ ನನ್ನಲ್ಲೇ ಇರಬೇಕು
ಎಂಬ ಷರತ್ತುಗಳನ್ನು ಡಿ.ಕೆ ಶಿವಕುಮಾರ್ ಮುಂದಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com