'ಸಂಕಷ್ಟದಲ್ಲಿರುವ ಸಾರಿಗೆ' ಬೇಡವೆ ಬೇಡ- ರಾಮಲಿಂಗಾ ರೆಡ್ಡಿ ಖಾತೆ 'ಕ್ಯಾತೆ': ಮನವೊಲಿಸಲು ಸಿಎಂ-ಡಿಸಿಎಂ ಸುಸ್ತೋ ಸುಸ್ತು!

ಇದೀಗ ಕೆಲ ಸಚಿವರ ಖಾತೆ ಕ್ಯಾತೆ ಶುರುವಾಗಿದೆ. ಅದರಲ್ಲೂ ಹಿರಿಯ ನಾಯಕ ರಾಮಲಿಂಗರೆಡ್ಡಿ ತಮಗೆ ನೀಡಿರುವ  ಖಾತೆಗೆ ಅಸಮಾಧಾನಗೊಂಡಿದ್ದು ಮುನಿಸಿಕೊಂಡಿದ್ದಾರೆ
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭಾನುವಾರ ಬೆಂಗಳೂರಿನಲ್ಲಿ ಸಚಿವ ಬಿ ರಾಮಲಿಂಗಾ ರೆಡ್ಡಿ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. | Express
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭಾನುವಾರ ಬೆಂಗಳೂರಿನಲ್ಲಿ ಸಚಿವ ಬಿ ರಾಮಲಿಂಗಾ ರೆಡ್ಡಿ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. | Express

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಹೊರ ಬಿದ್ದ 15 ದಿನಗಳ ಬಳಿಕ ಸಿದ್ದರಾಮಯ್ಯ  ಸಂಪುಟ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿದೆ. ಆಗಿದೆ. ಸಿಎಂ, ಡಿಸಿಎಂ ಸೇರಿ ಒಟ್ಟು 34 ಸಚಿವರಿದ್ದಾರೆ.

ಆದರೆ ಇದೀಗ ಕೆಲ ಸಚಿವರ ಖಾತೆ ಕ್ಯಾತೆ ಶುರುವಾಗಿದೆ. ಅದರಲ್ಲೂ ಹಿರಿಯ ನಾಯಕ ರಾಮಲಿಂಗರೆಡ್ಡಿ ತಮಗೆ ನೀಡಿರುವ ಖಾತೆಗೆ ಅಸಮಾಧಾನಗೊಂಡಿದ್ದು ಮುನಿಸಿಕೊಂಡಿದ್ದಾರೆ. ಜೊತೆಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಎಚ್ಚರಿಕೆ ನೀಡಿದ್ದಾರೆ.  ರಾಮಲಿಂಗಾ ರೆಡ್ಡಿ ಅವರನ್ನು ಸಮಾಧಾನ ಮಾಡಲು ಹಲವು ಸುತ್ತಿನ ಮಾತುಕತೆಗಳು ನಡೆದವು.

ರೆಡ್ಡಿ ಬೆಂಬಲಿಗರು  ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದರು, ಮುಖ್ಯಮಂತ್ರಿ ಮಧ್ಯಸ್ಥಿಕೆ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ. ಸಿದ್ದರಾಮಯ್ಯ ಮೊದಲು ರಾಮಲಿಂಗಾರೆಡ್ಡಿ ಅವರೊಂದಿಗೆ ಮಾತನಾಡಿ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದರು.  ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ರಾಮಲಿಂಗಾರೆಡ್ಡಿ ಅವರ ನಿವಾಸಕ್ಕೆ ಭೇಟಿ ನೀಡಿ ಗಂಟೆಗಟ್ಟಲೆ ಚರ್ಚೆ ನಡೆಸಿದರು. -"ಪಕ್ಷದ ಅಧ್ಯಕ್ಷರಾದ ಡಿಕೆಶಿ ಮತ್ತುಕಾರ್ಯಾಧ್ಯಕ್ಷರಾದ  ರಾಮಲಿಂಗಾರೆಡ್ಡಿ  ಪಕ್ಷಕ್ಕೆ ಸಂಬಂಧಿಸಿದ ಹಲವು ವಿಷಯಗಳ ಕುರಿತು ಚರ್ಚೆ ನಡೆಸಿದ್ದಾರೆ.

ರಾಮಲಿಂಗಾರೆಡ್ಡಿ ಸತತ ಎಂಟು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅವರ ನಂತರ ನಾನು ಅತಿ ಹೆಚ್ಚು ಬಾರಿ ಗೆದ್ದಿದ್ದೇನೆ. ನಾವು ಹಲವು ವರ್ಷಗಳಿಂದ ಸ್ನೇಹಿತರಾಗಿದ್ದು ಪಕ್ಷ ಕಟ್ಟಿದ್ದೇವೆ. ಹಲವು ಕಾರ್ಯಕರ್ತರು ನಮ್ಮ ಮೇಲೆ ವಿಶ್ವಾಸವಿಟ್ಟು ಅವರತ್ತ ಗಮನ ಹರಿಸಬೇಕು ಎಂದು ಶಿವಕುಮಾರ್ ಸುದ್ದಿಗಾರರಿಗೆ ತಿಳಿಸಿದರು.

ಆದರೆ, ನಾವು ಪಕ್ಷದ ಶಿಸ್ತಿನ ಸಿಪಾಯಿಗಳಾಗಿದ್ದೇವೆ ಹೀಗಾಗಿ ನಾವು ಪಕ್ಷ ಬಿಟ್ಟಿಲ್ಲ. ನಾವು ಬೇರೆ ಪಕ್ಷಕ್ಕೆ ಹೋದರೆ ನಮಗೆ ಉನ್ನತ ಸ್ಥಾನಮಾನಗಳು ದೊರಯಬಹುದು, ಆದರೆ ನಾವು ಪಕ್ಷದ ತೀರ್ಮಾನಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಅವರು ಹೇಳಿದರು. ಸಂಜೆ ಶಿವಕುಮಾರ್ ಅವರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಶಿವಕುಮಾರ್ ರಾಮಲಿಂಗಾರೆಡ್ಡಿ ಅವರಿಗೆ ನೀಡಲಾದ ಖಾತೆಯಿಂದ ಅವರು ಅಸಮಾಧಾನ ಗೊಂಡಿದ್ದಾರೆ ಎಂದು ತಿಳಿಸಿದರು

ಚರ್ಚೆಯ ನಂತರ ಇನ್ನೂ ಉತ್ತಮ ಖಾತೆ ನೀಡುವ ಭರವಸೆಯೊಂದಿಗೆ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಮಾಡಲು ಮುಖಂಡರು ನಿರ್ಧರಿಸಿದರು. ಅಧಿಕೃತ ಮೂಲಗಳ ಪ್ರಕಾರ, ಬೆಂಗಳೂರು ಅಭಿವೃದ್ಧಿಯಲ್ಲಿ ರಾಮಲಿಂಗಾ ರೆಡ್ಡಿ ಆಸಕ್ತಿ ಹೊಂದಿದ್ದರು, ಆದರೆ ಅವರಿಗೆ ಸಾರಿಗೆ ಮಂಜೂರು ಮಾಡಲಾಗಿದೆ. ಈಗ, ರಾಮಲಿಂಗಾರೆಡ್ಡಿಗೆ ಹೆಚ್ಚುವರಿ ಖಾತೆ ಸಿಗುವ ಸಾಧ್ಯತೆ ಇದೆ ಎಂದು ಮೂಲವೊಂದು ತಿಳಿಸಿದೆ.

ಈ ಮಧ್ಯೆ, ಹೊಸದಾಗಿ ನೇಮಕಗೊಂಡ ಸಚಿವರು ತಮ್ಮ ತಮ್ಮ ವಿಧಾನಸಭಾ ಕ್ಷೇತ್ರಗಳಿಗೆ ಮರಳಿದರು ಮತ್ತು ಅದ್ದೂರಿ ಸ್ವಾಗತ ಪಡೆದರು. ವಿಶೇಷವೆಂದರೆ ಕಮಲಪಂಥ್, ರವಿ ಡಿ ಚನ್ನಣ್ಣನವರ್ ಸೇರಿದಂತೆ ಉನ್ನತ ಪೊಲೀಸ್ ಅಧಿಕಾರಿಗಳು ಡಾ ಜಿ ಪರಮೇಶ್ವರ ಅವರನ್ನು ಭೇಟಿ ಮಾಡಿ ಅಭಿನಂದಿಸಿದರು. ಸಚಿವರಿಗೆ ಹಂಚಿಕೆಯಾಗಿರುವ ಖಾತೆಗಳ ಪಟ್ಟಿ ರಾಜ್ಯಪಾಲರ ಕಚೇರಿಗೆ ತಲುಪಿದ್ದು, ಸೋಮವಾರ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ಮೂಲಗಳು ಟಿಎನ್‌ಐಇಗೆ ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com