ಹೊಗಳುಭಟ್ಟರ ಅವಿವೇಕತನದ ಹೇಳಿಕೆಯಿಂದ ಕಾಂಗ್ರೆಸ್ ತತ್ತರ: ಸಿಎಂ-ಡಿಸಿಎಂ ನಿಷ್ಠರ ನಡುವಿನ ಕದನದಿಂದ ಪಕ್ಷಕ್ಕೆ ಮುಜುಗರ!

ಬಿಜೆಪಿ ವಿರುದ್ಧದ ಜನಾದೇಶದಿಂದ ಹೊಸ ಭರವಸೆಯೊಂದಿಗೆ ಅಧಿಕಾರಕ್ಕೆ ಮರಳಿರುವ ಕಾಂಗ್ರೆಸ್ ಪಕ್ಷ ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಅನುಯಾಯಿಗಳ ನಡುವಿನ  ಹೇಳಿಕೆಗಳ ಪೈಪೋಟಿಯಿಂದ ತತ್ತರಿಸಿದೆ.
ಕಾಂಗ್ರೆಸ್ ನಲ್ಲಿ ಬಣ ರಾಜಕೀಯ
ಕಾಂಗ್ರೆಸ್ ನಲ್ಲಿ ಬಣ ರಾಜಕೀಯ

ಮೈಸೂರು: ಬಿಜೆಪಿ ವಿರುದ್ಧದ ಜನಾದೇಶದಿಂದ ಹೊಸ ಭರವಸೆಯೊಂದಿಗೆ ಅಧಿಕಾರಕ್ಕೆ ಮರಳಿರುವ ಕಾಂಗ್ರೆಸ್ ಪಕ್ಷ ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಅನುಯಾಯಿಗಳ ನಡುವಿನ  ಹೇಳಿಕೆಗಳ ಪೈಪೋಟಿಯಿಂದ ತತ್ತರಿಸಿದೆ.

ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಆರಂಭದಲ್ಲಿ ಉತ್ತಮ ಯೋಜನೆಗಳ ಮೂಲಕ ಜನರ ಮೆಚ್ಚುಗೆ ಗಳಿಸಿತ್ತು, ಐದು ಖಾತ್ರಿಗಳಲ್ಲಿ ಈಗಾಗಲೇ ನಾಲ್ಕು ಯೋಜನೆಗಳನ್ನು ಅನುಷ್ಠಾನಗೊಳಿಸಿರುವ ಸರ್ಕಾರ ಉತ್ತಮ ಆಡಳಿತದ ಭರವಸೆ ನೀಡಿತ್ತು, ಆದರೆ ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆಗಳು ಕಾಂಗ್ರೆಸ್ ನಾಯಕರ ನಡುವಿನ ಬಿರುಕನ್ನು ತೋರಿಸುತ್ತಿದೆ.

ಲೋಕಸಭೆ ಚುನಾವಣೆವರೆಗೂ ಬಿಜೆಪಿ ನಾಯಕರ ವಿರುದ್ಧ ಪ್ರಬಲ ಹೋರಾಟ ನಡೆಸುವ ಬದಲು ಕಾಂಗ್ರೆಸ್ ನಾಯಕರು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದಾರೆ. ರಾಜ್ಯ ಸರ್ಕಾರ ಬರ ಪರಿಹಾರ ಕಾಮಗಾರಿ ಕೈಗೆತ್ತಿಕೊಂಡು ರೈತರ ಸಂಕಷ್ಟಕ್ಕೆ ಪರಿಹಾರ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿತ್ತು, ಆದರೆ ಸಿಎಂ ಮತ್ತು ಡಿಸಿಎಂ ನಿಷ್ಠಾವಂತರ ನಡುವೆ ಅಸಮಾಧಾನ ಕಾಂಗ್ರೆಸ್ ನಾಯಕರಿಗೆ ತೀವ್ರ ಮುಜುಗರ ತಂದಿದೆ.

ಜೂನ್‌ನಲ್ಲಿ ಸರ್ಕಾರ ಅಧಿಕಾರ ವಹಿಸಿಕೊಂಡಾಗಿನಿಂದ ಬಣ ರಾಜಕೀಯ ನಡೆದುಕೊಂಡು ಬರುತ್ತಲೆ ಇದೆ. ಸಿದ್ದರಾಮಯ್ಯನವರನ್ನು ಪೂರ್ಣಾವಧಿಗೆ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಪಾಳೆಯದಿಂದ ನಾಯಕರು ಘೋಷಿಸುತ್ತಿರುವ ಅವಿವೇಕದ ಹೇಳಿಕೆಗಳು ಡಿಕೆ ಶಿವಕುಮಾರ್ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಹಿರಿಯ ಸಚಿವರಾದ ಕೆ.ಎನ್.ರಾಜಣ್ಣ, ಹೆಚ್.ಸಿ.ಮಹದೇವಪ್ಪ, ಸತೀಶ್ ಜಾರಕಿಹೊಳಿ, ಜಮೀರ್ ಅಹ್ಮದ್ ಮತ್ತಿತರರು ಸಿದ್ದರಾಮಯ್ಯ ಅವರನ್ನು ಪೂರ್ಣಾವಧಿಗೆ ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂದು ಜನರು ಬಯಸುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಎರಡೂವರೆ ವರ್ಷಗಳ ನಂತರ ಶಿವಕುಮಾರ್ ಮುಖ್ಯಮಂತ್ರಿಯಾಗಲಿದ್ದು, ಹೊಸ ಸಚಿವ ಸಂಪುಟ ರಚನೆಯಾಗಲಿದೆ ಎಂದು ಡಿಕೆಶಿ ಬೆಂಬಲಿತ ಶಾಸಕರು ಹೇಳಿಕೊಂಡಿದ್ದಾರೆ. ಈ ಗೊಂದಲ ಚರ್ಚೆಗೆ ಗ್ರಾಸವಾಗಿದ್ದು, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಇಬ್ಬರೂ ಮೌನ ವಹಿಸಿದ್ದಾರೆ.

ನಾಯಕತ್ವದ ವಿಷಯದ ಬಗ್ಗೆ ಯಾರೂ ಮಾತನಾಡದಂತೆ ಎಚ್ಚರಿಕೆ ನೀಡಲು ಹಾಗೂ ಸಮಸ್ಯೆಗಳನ್ನು ಮಾತುಕತೆ ಮೂಲಕ ಬಗೆಹರಿಸಬೇಕೆಂದು ಸೂಚಿಸಿ ಕಾಂಗ್ರೆಸ್ ಹೈ ಕಮಾಂಡ್ ರಣದೀಪ್ ಸುರ್ಜೇವಾಲಾ ಮತ್ತು ಕೆಸಿ ವೇಣುಗೋಪಾಲ್ ಅವರನ್ನು ರಾಜ್ಯಕ್ಕೆ ಕಳುಹಿಸಿತ್ತು.

ಈ ಸಮಸ್ಯೆಯನ್ನು ಇಬ್ಬರೂ ನಾಯಕರು ನಿರ್ಲಕ್ಷ್ಯಿಸಿ, ತಮ್ಮ ನಿಷ್ಠಾವಂತರಿಗೆ ಅಭಿವೃದ್ಧಿಯತ್ತ ಗಮನ ಹರಿಸುವಂತೆ ಸೂಚಿಸಬೇಕು, ನಾಯಕತ್ವದ ವಿಷಯವನ್ನು ನಿರ್ಧರಿಸುವುದು ಹೈಕಮಾಂಡ್ ಗೆ ಸಂಬಂದಿಸಿದ ವಿಷಯವಾಗಿದೆ ಎಂದು ಕಾಂಗ್ರೆಸ್ ನಾಯಕರೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.

ಲೋಕಸಭೆ ಚುನಾವಣೆಯವರೆಗೂ ಬಿಜೆಪಿ ವಿರುದ್ಧ ತನಿಖೆ ನಡೆಸಬೇಕಾಗಿತ್ತು, ವಿರೋಧ ಪಕ್ಷದ ನಾಯಕನನ್ನು ನೇಮಿಸುವಲ್ಲಿ ವಿಫಲವಾಗಿರುವ ಕೇಸರಿ ನಾಯಕರ ವಿರುದ್ಧ ಕಾಂಗ್ರೆಸ್ ಹರಿಹಾಯಬೇಕಿತ್ತು, ಆದರೆ, ಅದರ ಬದಲಿಗೆ ಬಿಜೆಪಿ ನಾಯಕರ ಚರ್ಚೆಗೆ ಕಾಂಗ್ರೆಸ್ ಮುಖಂಡರು ಆಹಾರ ಒದಗಿಸುತ್ತಿದ್ದಾರೆ.

ಬಿಜೆಪಿಯನ್ನು ಎದುರಿಸಲು ರಾಹುಲ್ ಗಾಂಧಿಯವರ ನಾಯಕತ್ವದ ಮೇಲೆ ಗಮನ ಕೇಂದ್ರೀಕರಿಸಲು ಇದು ಸರಿಯಾದ ಸಮಯ ಎಂದು ಹಿರಿಯ ಸಚಿವರು ಭಾವಿಸಿದ್ದಾರೆ. ನಾನು ಸಿಎಲ್‌ಪಿ ನಾಯಕ ಮತ್ತು ಪೂರ್ಣಾವಧಿಗೆ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಹೇಳಿಕೊಳ್ಳುವುದು, ಅವರು ತಮ್ಮ ಸಂಪುಟ, ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕಾರಿಣಿಗೆ ಬಲವಾದ ಸಂದೇಶವನ್ನು ಕಳುಹಿಸಲು ಬಯಸುತ್ತಾರೆ ಎಂಬುದನ್ನು ತೋರಿಸುತ್ತದೆ.

ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಮೊದಲು ತಮಗೆ ಏಕೆ ಅಧಿಕಾರ ನೀಡಲಾಯಿತು ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು. ಬಿಜೆಪಿಯ ದುರಾಡಳಿತದ ವಿರುದ್ಧ ಮತ್ತು ಐದು ಭರವಸೆಗಳಿಗಾಗಿ ಕಾಂಗ್ರೆಸ್ ಪರ ಜನಾದೇಶವು ನೀಡಿದ್ದು ಎಂಬುದನ್ನು ಕಾಂಗ್ರೆಸ್ ನವರು ಅರ್ಥ ಮಾಡಿಕೊಳ್ಳಬೇಕು ಎಂದು ರಾಜಕೀಯ ವಿಮರ್ಶಕ ಮುಜಾಫರ್ ಅಸ್ಸಾದಿ ಅಭಿಪ್ರಾಯ ಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com