ಬಿಜೆಪಿಯೊಳಗಿನ ಚದುರಂಗದಾಟದಲ್ಲಿ ಬಿಜೆಪಿಯೇ ನಾಶವಾಗುತ್ತಿದೆ; ವಾಟ್ ಎ ಮಾಸ್ಟರ್‌ಸ್ಟ್ರೋಕ್ ಮೋದಿಜಿ!

ಬಿಜೆಪಿಯೊಳಗಿನ ಚದುರಂಗದಾಟದಲ್ಲಿ ಬಿಜೆಪಿಯೇ ನಾಶವಾಗುತ್ತಿದೆ, ಬಿಜೆಪಿಯ ಹಿರಿಯ ನಾಯಕರೆಲ್ಲರನ್ನು ಸಂತೋಷ ಕೂಟ ಬಲವಂತವಾಗಿ ರಾಜಕೀಯ ನಿವೃತ್ತಿ ಪಡೆಯುವಂತೆ ಮಾಡಿತು ಎಂದು ಕರ್ನಾಟಕ ಕಾಂಗ್ರೆಸ್ ಲೇವಡಿ ಮಾಡಿದೆ.
ನರೇಂದ್ರ ಮೋದಿ
ನರೇಂದ್ರ ಮೋದಿ

ಬೆಂಗಳೂರು: ಬಿಜೆಪಿಯೊಳಗಿನ ಚದುರಂಗದಾಟದಲ್ಲಿ ಬಿಜೆಪಿಯೇ ನಾಶವಾಗುತ್ತಿದೆ, ಬಿಜೆಪಿಯ ಹಿರಿಯ ನಾಯಕರೆಲ್ಲರನ್ನು ಸಂತೋಷ ಕೂಟ ಬಲವಂತವಾಗಿ ರಾಜಕೀಯ ನಿವೃತ್ತಿ ಪಡೆಯುವಂತೆ ಮಾಡಿತು ಎಂದು ಕರ್ನಾಟಕ ಕಾಂಗ್ರೆಸ್ ಲೇವಡಿ ಮಾಡಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿಯ ಹಿರಿಯ ನಾಯಕರೆಲ್ಲರನ್ನು ಸಂತೋಷ ಕೂಟ ಬಲವಂತವಾಗಿ ರಾಜಕೀಯ ನಿವೃತ್ತಿ ಪಡೆಯುವಂತೆ ಮಾಡಿತು. ಈಗ ಯಡಿಯೂರಪ್ಪನವರ ಮಗ ರಾಜ್ಯಾಧ್ಯಕ್ಷ, ಎರಡನೇ ಸಾಲಿನ ನಾಯಕರೂ ಅನಿವಾರ್ಯವಾಗಿ ರಾಜಕೀಯ ನಿವೃತ್ತಿಯಾಗುವ ಸನ್ನಿವೇಶ ಸೃಷ್ಟಿಸಿದೆ ಹೈಕಮಾಂಡ್. ಒಟ್ಟಿನಲ್ಲಿ #FamilyJantaParty ಖಾಲಿಯಾಗುವುದು ನಿಶ್ಚಿತ! ವಾಟ್ ಎ ಮಾಸ್ಟರ್‌ಸ್ಟ್ರೋಕ್ ಮೋದಿಜಿ ಎಂದು ಕಾಂಗ್ರೆಸ್ ಟೀಕಿಸಿದೆ.

ಯಡಿಯೂರಪ್ಪನವರ ಮಗನ ರಾಜ್ಯಾಧ್ಯಕ್ಷ ಹುದ್ದೆ ಕೇವಲ ಲೋಕಸಭೆ ಚುನಾವಣೆವರೆಗೆ ಮಾತ್ರ ಎಂಬ ಗುಸುಗುಸು ಪಿಸುಪಿಸು ಜಗನ್ನಾಥ ಭವನದಲ್ಲಿ ಕೇಳಿ ಬರುತ್ತಿದೆಯಂತೆ, ಇದು ಸಿ.ಟಿ ರವಿ, ಬಸನಗೌಡ ಪಾಟೀಲ್ ಮತ್ತು ಬಿ ಎಲ್  ಸಂತೋಷ್ ಅವರುಗಳು ಸಮಾಧಾನ ಮಾಡಿಕೊಳ್ಳುತ್ತಿರುವುದೋ, ಅಥವಾ ನೈಜತೆ ಇದೆಯೋ ಬಿಜೆಪಿ ಕರ್ನಾಟಕ ಸ್ಪಷ್ಟಪಡಿಸಬೇಕು ಎಂದು ಕಾಂಗ್ರೆಸ್ ಹೇಳಿದೆ.

ಯಡಿಯೂರಪ್ಪನವರ ಮಗ ಎಂಬ ಅರ್ಹತೆಯಲ್ಲಿ ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ "ಯಡಿಯೂರಪ್ಪನವರ ಮಗ"ನಿಗೆ ಅಭಿನಂದನೆಗಳು, ಬಿಜೆಪಿಯಲ್ಲಿ ಕುಟುಂಬ ರಾಜಕಾರಣವಿಲ್ಲ ಎಂಬ ಸುಳ್ಳನ್ನು ನಂಬಬೇಕು ಎಂದು ರಾಜ್ಯದ ಜನರಲ್ಲಿ ಮನವಿ ಮಾಡುತ್ತೇವೆ ಎಂದಿದೆ.

ಸಿ.ಟಿ ರವಿ ಅವರೇ, ಈಗ ಯಡಿಯೂರಪ್ಪನವರ ಕಿಚನ್ ಕ್ಯಾಬಿನೆಟ್ ನಲ್ಲೇ ಎಲ್ಲವೂ ನಿರ್ಧಾರವಾಗಲಿದೆ, ಅವರ ಕಿಚನ್ ಕ್ಯಾಬಿನೆಟ್ ಗೆ ತಾವು ಹೋಗುವಿರಾ ಅಥವಾ ತಾವೂ ರಾಜಕೀಯ ನಿವೃತ್ತಿ ಪಡೆಯುವಿರಾ? ಬಸವಗೌಡ ಪಾಟೀಲ್ ಯತ್ನಾಳ್ ಅವರೇ, ಇದೆಂತಹಾ ತಾವು ತಮ್ಮ ಅಸ್ತಿತ್ವಕ್ಕಾಗಿ ವಿಜಯೇಂದ್ರರ ಮುಂದೆ ಕೈಕಟ್ಟಿ ತಲೆಬಾಗಿಸಿ ನಿಲ್ಲುವಿರಾ ಅಥವಾ ರಾಜಕೀಯಕ್ಕೆ ಗುಡ್ ಬೈ ಹೇಳುವಿರಾ? #FamilyJanataParty ಯಲ್ಲಿ ಇನ್ಮುಂದೆ ನಿವೃತ್ತಿ ಪರ್ವ ಶುರುವಾದರೂ ಆಶ್ಚರ್ಯವಿಲ್ಲ! ಎಂದು ಲೇವಡಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com