ಜಾತಿ ಸಮೀಕ್ಷೆ ವರದಿ: ಲೋಕಸಭೆ ಚುನಾವಣೆ ಹೊಸ್ತಿಲಿನಲ್ಲಿ ಇಕ್ಕಟ್ಟಿನಲ್ಲಿ ರಾಜ್ಯ ಕಾಂಗ್ರೆಸ್

ಬಹುಚರ್ಚಿತ ಜಾತಿ ಸಮೀಕ್ಷೆಯನ್ನು ಸಿಎಂ ಸಿದ್ದರಾಮಯ್ಯನವರು ಕಳೆದ ಬಾರಿ 2013ರಲ್ಲಿ ಅಧಿಕಾರಕ್ಕೆ ಬಂದಿದ್ದಾಗ ಆರಂಭಿಸಿದ್ದು, ಅದಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಬಹುಚರ್ಚಿತ ಜಾತಿ ಸಮೀಕ್ಷೆಯನ್ನು ಸಿಎಂ ಸಿದ್ದರಾಮಯ್ಯನವರು ಕಳೆದ ಬಾರಿ 2013ರಲ್ಲಿ ಅಧಿಕಾರಕ್ಕೆ ಬಂದಿದ್ದಾಗ ಆರಂಭಿಸಿದ್ದು, ಅದಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಗಳ ನಾಯಕರನ್ನಾಗಿ ಕಾಂಗ್ರೆಸ್‌ನಲ್ಲಿ ತಮ್ಮ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಲು ವರದಿಯನ್ನು ಹೆಚ್ಚು ಬಳಸುತ್ತಾರೆ ಎಂದು ತೋರಿಬರುತ್ತಿದ್ದು, ಇದಕ್ಕೆ ವಿರೋಧ ಪಕ್ಷಗಳ ವಿರೋಧ ದಿನಕ್ಕೆ ದಿನಕ್ಕೆ ಹೆಚ್ಚಾಗುತ್ತಿದೆ. 

ರಾಜ್ಯದಲ್ಲಿನ ಪ್ರಸ್ತುತ ರಾಜಕೀಯ ವಾತಾವರಣವನ್ನು ಗಮನಿಸಿದರೆ, ಆಡಳಿತಾರೂಢ ಕಾಂಗ್ರೆಸ್ 2024 ರ ಲೋಕಸಭೆ ಚುನಾವಣೆಗೆ ಮೊದಲು ಸಿದ್ದರಾಮಯ್ಯ ಸರ್ಕಾರ ರಾಜಕೀಯ ಅಪಾಯವನ್ನು ಎದುರಿಸಲು ನೋಡುತ್ತಿದೆ ಎಂದು ಎನಿಸುವುದಿಲ್ಲ. 
ಮುಂದಿನ ಕೆಲವೇ ದಿನಗಳಲ್ಲಿ ಕರ್ನಾಟಕ ರಾಜ್ಯ ಖಾಯಂ ಹಿಂದುಳಿದ ವರ್ಗಗಳ ಆಯೋಗದ (KSPBCC) ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸುವ ನಿರೀಕ್ಷೆಯಿದೆ.

ಅವರ ಅಧಿಕಾರಾವಧಿ ಈ ತಿಂಗಳಿಗೆ ಕೊನೆಗೊಳ್ಳಲಿದೆ. ವರದಿಯನ್ನು ಅಂಗೀಕರಿಸಲು ಮತ್ತು ಅದರ ಶಿಫಾರಸುಗಳನ್ನು ಜಾರಿಗೆ ತರಲು ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಸಿದ್ದರಾಮಯ್ಯ ಆಗಾಗ್ಗೆ ಹೇಳುತ್ತಿದ್ದರು. 2018 ರ ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ವರದಿಯನ್ನು ಸ್ವೀಕರಿಸಲು ವಿಫಲವಾಗಿವೆ ಎಂದು ಅವರು ಆರೋಪಿಸಿದರು. ಹೆಚ್.ಕಾಂತರಾಜು ಅವರು ಕೆಎಸ್‌ಪಿಬಿಸಿಸಿ ಅಧ್ಯಕ್ಷರಾಗಿದ್ದಾಗ 160 ಕೋಟಿ ರೂಪಾಯಿ ವೆಚ್ಚದಲ್ಲಿ ಕಸರತ್ತು ನಡೆಸಿ ವರದಿ ಸಿದ್ಧಪಡಿಸಲಾಗಿತ್ತು.

ವರದಿಯ ಶಿಫಾರಸುಗಳನ್ನು ಜಾರಿಗೆ ತರಲು ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ ಸರ್ಕಾರಕ್ಕೆ ಹೇಳಿದಷ್ಟು ಸುಲಭವಲ್ಲ. ಎರಡು ಪ್ರಬಲ ಸಮುದಾಯಗಳಾದ ಲಿಂಗಾಯತರು ಮತ್ತು ಒಕ್ಕಲಿಗರು ಇದರ ವಿರುದ್ಧ ಹೋರಾಟಕ್ಕಿಳಿದಿದ್ದಾರೆ. ಅವರ ಕಳವಳಗಳು ವರದಿಯ ಸೋರಿಕೆಯಾದ ವಿಷಯಗಳನ್ನು ಆಧರಿಸಿವೆ, ಅದು ಅವರ ಸಂಖ್ಯೆಯನ್ನು ಅವರು ನಂಬಿದ್ದಕ್ಕಿಂತ ಕಡಿಮೆ ಪ್ರಮಾಣದಲ್ಲಿ ಇರಿಸುತ್ತದೆ. ಕಳೆದ ಕೆಲವು ದಿನಗಳಲ್ಲಿ ಎರಡು ಸಮುದಾಯದ ಪ್ರಮುಖ ನಾಯಕರು ಇನ್ನೂ ಸಲ್ಲಿಕೆಯಾಗದ ವರದಿಯ ಬಗ್ಗೆ ಚರ್ಚಿಸಿ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.

ವೀರಶೈವ-ಲಿಂಗಾಯತ ಸಮುದಾಯದ ಒಂದು ವರ್ಗ ಇದು ಕುಶಲ ವರದಿ ಎಂದು ಭಾವಿಸುತ್ತದೆ. ಸಮುದಾಯದ ಜನಸಂಖ್ಯೆಯನ್ನು ನಿಜವಾದ ಸಂಖ್ಯೆಗಳ ಅರ್ಧಕ್ಕಿಂತ ಕಡಿಮೆ ತೋರಿಸಲಾಗಿದೆ ಎಂಬುದು ಅವರ ಆತಂಕ. ಆದರೆ, ಸಂಖ್ಯೆಗಳು ಮಾತ್ರ ಕಾಳಜಿಯಲ್ಲ. ಸಮುದಾಯದ ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಯನ್ನು ತಪ್ಪಾಗಿ ನಿರೂಪಿಸುವ ವರದಿಯ ಬಗ್ಗೆ ಅವರು ಹೆಚ್ಚು ಚಿಂತಿತರಾಗಿದ್ದಾರೆ. ಅದು ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ದೊಡ್ಡ ಭಾಗವನ್ನು ಒಳಗೊಂಡಿರುವ ಪ್ರಧಾನವಾಗಿ ಕೃಷಿ ಸಮುದಾಯದ ಅಭಿವೃದ್ಧಿಯ ಮೇಲೆ ದೂರಗಾಮಿ ಪರಿಣಾಮಗಳನ್ನು ಬೀರಬಹುದು.

ವೀರಶೈವ ಮಹಾಸಭಾ ಕಾರ್ಯದರ್ಶಿ ರೇಣುಕಾ ಪ್ರಸನ್ನ, ಸರಕಾರವು ಆಧಾರ್ ಲಿಂಕ್ ಮಾಡುವ ಮತ್ತು ಅದರ ನಿಖರತೆಯನ್ನು ಖಚಿತಪಡಿಸಿಕೊಳ್ಳಲು ಇತ್ತೀಚಿನ ತಂತ್ರಜ್ಞಾನಗಳನ್ನು ಬಳಸಿಕೊಂಡು ಹೊಸದಾಗಿ ಸಮೀಕ್ಷೆಯನ್ನು ನಡೆಸಬೇಕು. ಒಕ್ಕಲಿಗ ಸಮುದಾಯದ ಆದಿಚುಂಚನಗಿರಿ ಮಠದ ಪ್ರಭಾವಿ ಮಠಾಧೀಶ ನಿರ್ಮಲಾನಂದನಾಥ ಸ್ವಾಮೀಜಿ, ವರದಿಯು ನೈಜ ಪರಿಸ್ಥಿತಿಯನ್ನು ಹಿಡಿದಿಲ್ಲ ಎಂದು ಸಮುದಾಯದ ಅಭಿಪ್ರಾಯಗಳನ್ನು ಪ್ರತಿಬಿಂಬಿಸಿತು. 

ವರದಿಯನ್ನು ವಿರೋಧಿಸಿದ ಒಕ್ಕಲಿಗ ಸಮುದಾಯದ ಮುಖಂಡರ ಸಭೆಯಲ್ಲಿ ಉಪಮುಖ್ಯಮಂತ್ರಿ ಹಾಗೂ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಉಪಸ್ಥಿತರಿದ್ದರು. ಪ್ರಸ್ತುತ ಆಡಳಿತ ಪಕ್ಷದಲ್ಲಿ ಅವರು ಹೊಂದಿರುವ ಪ್ರಭಾವವನ್ನು ಪರಿಗಣಿಸಿ ಅದು ಗಮನಾರ್ಹವಾಗಿದೆ. 

ಸಿದ್ದರಾಮಯ್ಯ ಅಥವಾ ಅವರ ಪಾಳಯ ಹಿಂಬಾಲಕರು ಅದನ್ನು ಒತ್ತಾಯಿಸಿದರೆ, ಅದು ಸರ್ಕಾರ ಮತ್ತು ಕಾಂಗ್ರೆಸ್‌ನಲ್ಲಿ ಆಂತರಿಕ ಭಿನ್ನಾಭಿಪ್ರಾಯವನ್ನು ಉಂಟುಮಾಡಬಹುದು. ಇದು ಎರಡು ಪ್ರಬಲ ಸಮುದಾಯಗಳ ವಿರುದ್ಧ ಸಿಎಂ ಮತ್ತು ಪಕ್ಷವನ್ನು ಕಣಕ್ಕಿಳಿಸಬಹುದು.

ಹಳೆ ಮೈಸೂರು ಪ್ರದೇಶದಲ್ಲಿ ಒಕ್ಕಲಿಗರು ಪ್ರಬಲ ಶಕ್ತಿಯಾಗಿದ್ದರೆ, ಲಿಂಗಾಯತ ಸಮುದಾಯದ ಮುಖಂಡರು 224 ವಿಧಾನಸಭಾ ಕ್ಷೇತ್ರಗಳ ಪೈಕಿ ಸುಮಾರು 154 ಕ್ಷೇತ್ರಗಳಲ್ಲಿ ತಾವೇ ನಿರ್ಣಾಯಕ ಅಂಶವೆಂದು ಹೇಳಿಕೊಳ್ಳುತ್ತಾರೆ. ಈಗ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಪುತ್ರ ಬಿವೈ ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಿಸುವ ಮೂಲಕ ಲಿಂಗಾಯತರಲ್ಲಿ ತನ್ನ ಬೆಂಬಲದ ನೆಲೆಯನ್ನು ಪುನರ್ ದೃಢಪಡಿಸಲು ಪಕ್ಷ ಪ್ರಯತ್ನಿಸುತ್ತಿದೆ. 

2018 ರಲ್ಲಿ, ಲಿಂಗಾಯತರಿಗೆ ಪ್ರತ್ಯೇಕ ಧಾರ್ಮಿಕ ಸ್ಥಾನಮಾನದ ಬಗ್ಗೆ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ನ ನಿಲುವು ವಿಭಜಿಸುವ ತಂತ್ರವೆಂದು ಗ್ರಹಿಸಲ್ಪಟ್ಟಿದ್ದರಿಂದ ಕಾಂಗ್ರೆಸ್ ಗೆ ಅಧಿಕಾರಕ್ಕೆ ಬರಲು ಹಿನ್ನಡೆಯಾಯಿತು. ಈ ಬಾರಿ, ಲೋಕಸಭೆ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಲು ಪಕ್ಷವು ತನ್ನ ಖಾತರಿ ಯೋಜನೆಗಳ ಮೇಲೆ ಆಧಾರವಾಗಿದ್ದು ಎಚ್ಚರಿಕೆಯಿಂದ ಹೆಜ್ಜೆ ಹಾಕುತ್ತದೆ. ಕರ್ನಾಟ ಮೂಲದವರಾದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಷ್ಟ್ರಮಟ್ಟದಲ್ಲಿ ಪುನಶ್ಚೇತನದ ಯೋಜನೆಗಳಿಗೆ ಧಕ್ಕೆ ತರುವಂತಹ ಸೂಕ್ಷ್ಮ ವಿಷಯಗಳ ಬಗ್ಗೆ ನಿರ್ಧರಿಸಲು ಪಕ್ಷದ ರಾಜ್ಯ ನಾಯಕರಿಗೆ ಮುಕ್ತ ಹಸ್ತ ನೀಡುವ ಸಾಧ್ಯತೆ ಕಡಿಮೆ.

ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಒಟ್ಟಾಗಿ ಹೋಗಲು ನಿರ್ಧರಿಸಿವೆ. ವಿಧಾನಸಭಾ ಚುನಾವಣೆಗಿಂತ ಭಿನ್ನವಾಗಿ, ಹಳೆ ಮೈಸೂರು ಭಾಗದ ಒಕ್ಕಲಿಗ ಹೃದಯಭಾಗದಲ್ಲಿ ಕಾಂಗ್ರೆಸ್ ವಿರೋಧಿ ಮತಗಳು ವಿಭಜನೆಯಾಗುವುದನ್ನು ತಪ್ಪಿಸಲು ಅವರು ಕಾರ್ಯತಂತ್ರವನ್ನು ರೂಪಿಸುತ್ತಿದ್ದಾರೆ.

ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ರಾಷ್ಟ್ರಮಟ್ಟದಲ್ಲಿ ಜಾತಿ ಗಣತಿ ಪರವಾಗಿ ಧ್ವನಿಯೆತ್ತಿರಬಹುದು. ಆದರೆ, ಕರ್ನಾಟಕದಲ್ಲಿ ಈ ವರದಿ ಲೋಕಸಭೆ ಚುನಾವಣೆಗೂ ಮುನ್ನ ಅವರ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆ ಇದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com