ಬಿಜೆಪಿಯಲ್ಲಿ 'ಸೋಮನಹಳ್ಳಿ ಮುದುಕಿ ಕಥೆ' ಆಗಿದೆ; ಡಿ. 6ರ ನಂತರ ಮಾತನಾಡುವೆ: ಸೋಮಣ್ಣ

ಡಿಸೆಂಬರ್ 6ರ ನಂತರ ನನ್ನ ನಿರ್ಧಾರವನ್ನು ತಿಳಿಸುತ್ತೇನೆ. ಅರವಿಂದ್ ಲಿಂಬಾವಳಿ ಮಾತಿಗೆ ನನ್ನ ಸಮ್ಮತಿ ಇದೆ. ಪಕ್ಷದಲ್ಲಿ ಸೋಮನಹಳ್ಳಿ ಮುದುಕಿ ಕಥೆ ರೀತಿ ಆಗಿದೆ ಎಂದು ಹೇಳುವ ಮೂಲಕ ಅಸಮಾಧಾನ ಹೊರ ಹಾಕಿದರು.
ವಿ.ಸೋಮಣ್ಣ
ವಿ.ಸೋಮಣ್ಣ

ಮೈಸೂರು: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಿ ವೈ ವಿಜಯೇಂದ್ರ ನೇಮಕದ ಬಳಿಕ ಅಸಮಾಧಾನಗೊಂಡಿರುವ ಮಾಜಿ ಸಚಿವ ವಿ.ಸೋಮಣ್ಣಇಂದು ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.

ಡಿಸೆಂಬರ್ 6ರ ನಂತರ ನನ್ನ ನಿರ್ಧಾರವನ್ನು ತಿಳಿಸುತ್ತೇನೆ. ಅರವಿಂದ್ ಲಿಂಬಾವಳಿ ಮಾತಿಗೆ ನನ್ನ ಸಮ್ಮತಿ ಇದೆ. ಪಕ್ಷದಲ್ಲಿ ಸೋಮನಹಳ್ಳಿ ಮುದುಕಿ ಕಥೆ ರೀತಿ ಆಗಿದೆ ಎಂದು ಹೇಳುವ ಮೂಲಕ ಅಸಮಾಧಾನ ಹೊರ ಹಾಕಿದರು. ಈ ನಡುವೆ ಅಸಮಾಧಾನಗೊಂಡಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಭೇಟಿಗೆ ವಿಜಯೇಂದ್ರ ಮುಂದಾಗಿದ್ದಾರೆ. ಶಾಸಕಾಂಗ ಸಭೆ ಆರಂಭಕ್ಕೂ ಮುನ್ನವೇ ಬಸನಗೌಡ ಪಾಟೀಲ್ ಯತ್ನಾಳ್ ಜೊತೆಯಲ್ಲಿ ರಮೇಶ್ ಜಾರಕಿಹೊಳಿ ಹೊರ ಬಂದಿದ್ದರು.

ಬಿವೈ ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಕ್ಕೆ ಸೋಮಣ್ಣ ಮತ್ತಷ್ಟು ಅಸಮಧಾನಗೊಂಡಿದ್ದಾರೆ. ಹೀಗಾಗಿ ಸೋಮಣ್ಣ ಅವರು ಕಾಂಗ್ರೆಸ್​ ಸೇರ್ಪಡೆಯಾಗುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದರ ಬೆನ್ನಲ್ಲೇ ಇದೀಗ ಇದಕ್ಕೆ ಸೋಮಣ್ಣ ಪ್ರತಿಕ್ರಿಯಿಸಿದ್ದು, ಡಿಸೆಂಬರ್​ 6ರ ಬಳಿಕ ನನ್ನ ಮನಸ್ಸಿ‌ನ ಭಾವನೆ ಹೇಳುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸೋಮಣ್ಣ ಅವರ ರಾಜಕೀಯ ನಡೆ ತೀವ್ರ ಕುತೂಹಲ ಮೂಡಿಸಿದೆ.

ಅರವಿಂದ ಲಿಂಬಾವಳಿ ಹೇಳಿಕೆಗೆ ನನ್ನ ಸಮ್ಮತಿ ಇದೆ. ನಮ್ಮ ಪಕ್ಷದಲ್ಲಿ ಒಂದು ರೀತಿ ಸೋಮನಹಳ್ಳಿ ಮುದುಕಿ ಕಥೆ ಆಗಿದೆ. ಡಿಸೆಂಬರ್ 6ರ ಬಳಿಕ ಎಲ್ಲವನ್ನೂ ವಿವರವಾಗಿ ಹೇಳುತ್ತೇನೆ. ಯಾವ ರೀತಿ ನನಗೆ ಹೊಡೆತ ಆಗಿದೆ ಎಂಬುದನ್ನು ವಿವರಿಸುತ್ತೇನೆ. ರಾಜಕಾರಣ ಯಾವುದೇ ಮನೆತನಕ್ಕೆ ಸಿಮೀತವಲ್ಲ ಎಂದು ಪರೋಕ್ಷವಾಗಿ ಸ್ವಪಕ್ಷದ ನಾಯಕರ ವಿರುದ್ಧ ಅದರಲ್ಲೂ ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧವಾಗ್ದಾಳಿ ನಡೆಸಿದ್ದಾರೆ. ಎಲ್ಲಾ ಒಳ ಒಪ್ಪಂದವಾಗಿದೆ, ಯಾರು ಆತುರ ಪಡಬೇಡಿ ಎಂದು ಕಾರ್ಯಕರ್ತರಿಗೆ ಸೋಮಣ್ಣ ಕಿವಿಮಾತು ಹೇಳಿದ್ದಾರೆ.

ರಾಜಕಾರಣ ನಾಟಕ ಕಂಪನಿ ಅಲ್ಲ, ಒಳ ಒಪ್ಪಂದಕ್ಕೆ ಸಿಮೀತವಲ್ಲ. ನನ್ನನ್ನು ಯಾರು ಸಂಪರ್ಕಿಸಿಲ್ಲ, ನಾನೂ ಯಾರನ್ನು , ಯಡಿಯೂರಪ್ಪ ಅವರನ್ನು ಸಂಪರ್ಕಿಸಿಲ್ಲ. ಡಿಸೆಂಬರ್​ 6ರ ಬಳಿಕ ನನ್ನ ಮನಸ್ಸಿ‌ನ ಭಾವನೆ ಹೇಳುತ್ತೇನೆ ಎಂದು ಸ್ಪಷ್ಟಪಡಿಸಿದರು. ಈ ಮೂಲಕ ರಾಜ್ಯ ರಾಜಕಾರಣದಲ್ಲಿ ಸೋಮಣ್ಣ ನಡೆ ಸಂಚಲನ ಮೂಡಿಸಿದೆ.

ಇದೀಗ ತಮ್ಮ ರಾಜಕೀಯ ವಿರೋಧಿ ಬಿವೈ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಿಸಿದ್ದಕ್ಕೆ ಸೋಮಣ್ಣನವರ ಕಣ್ಣು ಮತ್ತಷ್ಟು ಕೆಂಪಾಗಿಸಿದೆ. ಸೋಮಣ್ಣ ಸಹ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ನೀಡಿದರೆ ನಿಭಾಯಿಸುವೆ ಎಂದು ಬಹಿರಂಗವಾಗಿಯೇ ಬೇಡಿಕೆ ಇಟ್ಟಿದ್ದರು. ಆದ್ರೆ, ಹೈಕಮಾಂಡ್ ವಿಜಯೇಂದ್ರಗೆ ಮಣೆ ಹಾಕಿರುವುದು ಮತ್ತಷ್ಟು ಅಸಮಾಧಾನಕ್ಕೆ ಕಾರಣವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com