ಸಿದ್ದರಾಮಯ್ಯ ಮತ್ತು ಪರಮೇಶ್ವರ್ ಕುಮ್ಮಕ್ಕಿನಿಂದಲೇ ಶಿವಮೊಗ್ಗ ಗಲಭೆ ನಡೆದಿದೆ: ಶೋಭಾ ಕರಂದ್ಲಾಜೆ ಆರೋಪ

ಕಳೆದ ಭಾನುವಾರ ಸಂಜೆ ಶುವಮೊಗ್ಗ ನಗರದ ಶಾಂತಿನಗರ ರಾಗಿಗುಡ್ಡದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ನಡೆದ ಹಲ್ಲು ತೂರಾಟ, ಗಲಭೆ ಪ್ರಕರಣ ಸಂಬಂಧ ವಿಪಕ್ಷ ಬಿಜೆಪಿ ಆಡಳಿತ ಕಾಂಗ್ರೆಸ್ ಸರ್ಕಾರದ ನಾಯಕರ ವಿರುದ್ಧ ವಾಗ್ದಾಳಿ ನಡೆಸುತ್ತಾ ಬಂದಿದೆ.
ಶೋಭಾ ಕರಂದ್ಲಾಜೆ
ಶೋಭಾ ಕರಂದ್ಲಾಜೆ

ಚಾಮರಾಜನಗರ: ಕಳೆದ ಭಾನುವಾರ ಸಂಜೆ ಶುವಮೊಗ್ಗ ನಗರದ ಶಾಂತಿನಗರ ರಾಗಿಗುಡ್ಡದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ನಡೆದ ಹಲ್ಲು ತೂರಾಟ, ಗಲಭೆ ಪ್ರಕರಣ ಸಂಬಂಧ ವಿಪಕ್ಷ ಬಿಜೆಪಿ ಆಡಳಿತ ಕಾಂಗ್ರೆಸ್ ಸರ್ಕಾರದ ನಾಯಕರ ವಿರುದ್ಧ ವಾಗ್ದಾಳಿ ನಡೆಸುತ್ತಾ ಬಂದಿದೆ.

ಇದೊಂದು ಸಣ್ಣ ಗಲಭೆ ಎಂದು ಹೇಳಿ ತೀವ್ರ ಟೀಕೆಗೆ ಗುರಿಯಾಗಿರುವ ಗೃಹಸಚಿವ ಪರಮೇಶ್ವರ್ ವಿರುದ್ಧ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಟೀಕೆಯ ಸುರಿಮಳೆಗೈದಿದ್ದಾರೆ, ಸಿದ್ದರಾಮಯ್ಯ ಮತ್ತು ಪರಮೇಶ್ವರ್ ಕುಮ್ಮಕ್ಕಿನಿಂದಲೇ ಈ ಘಟನೆ ನಡೆದಿದೆ ಎಂದು ಆರೋಪಿಸಿದ್ದಾರೆ.

ಚಾಮರಾಜನಗರದ ಹರಳುಕೋಟೆ ಆಂಜನೇಯನ ದರ್ಶನ ಪಡೆದ ಬಳಿಕ ಮಾತನಾಡಿದ ಅವರು, ಈದ್​ ಮಿಲಾದ್ ಹಬ್ಬದ ದಿನ ಬಿಟ್ಟು ಬೇರೆ ದಿನ ಆಚರಿಸಲು ಕಾರಣವೇನು? ಈದ್ ಮಿಲಾದ್​ ಅಂದರೆ ಒಂದು ದಿನ ಆಚರಿಸುವ ಹಬ್ಬ ಅಲ್ವಾ ಎಂದು ಕೇಳಿದರು. ದಂಗೆ ಎಬ್ಬಿಸಲೆಂದೇ ಒಂದು ದಿನ ಬಿಟ್ಟು ಆಚರಿಸಲಾಗಿದೆ. ಶಿವಮೊಗ್ಗ, ಕೋಲಾರದಲ್ಲಿ ತಲ್ವಾರ್ ಹಿಡಿದು ಮೆರವಣಿಗೆ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಅತಿ ದೊಡ್ಡ ಖಡ್ಗದ ಮೆರವಣಿಗೆ ಮಾಡಲಾಗಿದೆ, ಇದರ ಅರ್ಥವೇನು, ಔರಂಗಜೇಬನ ದೊಡ್ಡ ಫೋಟೋ ಹಾಕಿ ಅಖಂಡ ಭಾರತವನ್ನ ಆಳಿದ ಮಹಾರಾಜ ಎಂಬ ಬರಹಗಳನ್ನ ಬರೆದಿದ್ದಾರೆ. ನಿಮ್ಮ ಆದರ್ಶಪುರುಷ ಮೊಹಮ್ಮದ್ ಪೈಂಗರ್ ಹಾಗೂ ಅಬ್ಧುಲ್ ಕಲಾಮ್ ಆಗಿರಬೇಕು. ಹಿಂದೂಗಳ ರಕ್ತ ಹರಿಸಿದ ಹಿಂದೂಗಳ ಮಾರಣಹೋಮ ನಡೆಸಿದ ಟಿಪ್ಪು ಹಾಗೂ ಔರಂಗಬೇಜ್ ಹೇಗಾಗುತ್ತಾರೆ ಎಂದು ಕೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com