ನಮ್ಮನ್ನು ಬಿಜೆಪಿಗೆ ಅಡಮಾನ ಇಡಲು ಬಿಡೊಲ್ಲ; ಜೆಡಿಎಸ್ ಸೇರಲು ನಾನು ಕುಮಾರಸ್ವಾಮಿ ಮನೆಗೆ ಹೋಗಿಲ್ಲ: ಸಿ.ಎಂ ಇಬ್ರಾಹಿಂ

ಜೆಡಿಎಸ್ ಸೇರಲು ನಾನು ಕುಮಾರಸ್ವಾಮಿ ಮನೆಗೆ ಹೋಗಿಲ್ಲ. ಕುಮಾರಸ್ವಾಮಿಯೇ ನಮ್ಮ ಮನೆ ಬಳಿ ಎಷ್ಟು ಬಾರಿ ಬಂದಿದ್ದರು ಗೊತ್ತಾ? ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಪ್ರಶ್ನಿಸಿದ್ದಾರೆ.
ಸಿ.ಎಂ ಇಬ್ರಾಹಿಂ
ಸಿ.ಎಂ ಇಬ್ರಾಹಿಂ

ಬೆಂಗಳೂರು: ಜೆಡಿಎಸ್ ಸೇರಲು ನಾನು ಕುಮಾರಸ್ವಾಮಿ ಮನೆಗೆ ಹೋಗಿಲ್ಲ. ಕುಮಾರಸ್ವಾಮಿಯೇ ನಮ್ಮ ಮನೆ ಬಳಿ ಎಷ್ಟು ಬಾರಿ ಬಂದಿದ್ದರು ಗೊತ್ತಾ? ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಪ್ರಶ್ನಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಕುಮಾರಸ್ವಾಮಿ ನನ್ನ ಬಳಿ ಯಾವ ವಿಚಾರವೂ ಪ್ರಸ್ತಾಪ ಮಾಡಿಲ್ಲ, ಜೆಡಿಎಸ್-ಬಿಜೆಪಿ ಮೈತ್ರಿಗೆ ನನ್ನ ವಿರೋಧವಿದೆ, ಪಕ್ಷದ ಹಲವು ಶಾಸಕರು ಕೂಡ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ ಎಂದು ಹೇಳಿದ್ದಾರೆ. ಮೈತ್ರಿಗೆ ನಾವು ಒಪ್ಪುವುದಿಲ್ಲ ಎಂದು ಹಲವು ಶಾಸಕರು ಹೇಳಿದ್ದಾರೆ. ಶಾಸಕರೇ ನನ್ನ ಬಳಿ ಹೇಳಿದ್ದಾರೆ, ಆದ್ರೆ ಹೆಸರು ಪ್ರಸ್ತಾಪ ಮಾಡಲ್ಲ. ದೇವೇಗೌಡರು ಮತ್ತು ಕುಮಾರಸ್ವಾಮಿ ಮೇಲೆ ನನಗೆ ಗೌರವ ಇದೆ. ಅವರು ಏನು ಹೇಳ್ತಾರೆ ನೋಡಿ ಮುಂದಿನ ತೀರ್ಮಾನ ಕೈಗೊಳ್ತೇನೆ ಎಂದು ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ.

ಇನ್ನೂ ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳಿಂದ ನನಗೆ ಆಹ್ವಾನವಿದೆ, ಆದರೆ ಇದುವರೆಗೂ ನಾನು ನಿರ್ಧರಿಸಿಲ್ಲ, ಮುಂಬರುವ ಯಾವುದೇ ಚುನಾವಣೆಯಲ್ಲೂ ನಾನೂ ಸ್ಪರ್ಧಿಸುವುದಿಲ್ಲ ಎಂದಿದ್ದಾರೆ. ಇನ್ನೂ ನಾಲ್ಕು ವರ್ಷ ಅವಧಿಯಿದ್ದ ವಿಧಾನಪರಿಷತ್ ಸದಸ್ಯ ಸ್ಥಾನವನ್ನು ಬಿಟ್ಟು ಜೆಡಿಎಸ್ ಗೆ ಬಂದಿದ್ದೇನೆ. ಪೋಸ್ಟರ್ ಮತ್ತು ಬ್ಯಾನರ್ ನಲ್ಲಿ  ನನ್ನ ಹೆಸರಿಲ್ಲ ಆದರೆ ಎಲ್ಲಾ ಜನರ ಹೃದಯದಲ್ಲಿದ್ದೇನೆ ಎಂದರು.

ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ ಅನ್ನೋದು ತಪ್ಪು. ಎಲ್ಲಾ ಜಿಲ್ಲೆಯವರು ಸಂಪರ್ಕದಲ್ಲಿದ್ದಾರೆ. ಜನತಾದಳ ಪಕ್ಷದ ಸಿದ್ಧಾಂತವನ್ನು ಬಿಜೆಪಿಯವರು ಒಪ್ಪಿದ್ದಾರಾ? ಬಿಜೆಪಿ ಸಿದ್ಧಾಂತವನ್ನ JDS ಒಪ್ಪಿದೆಯಾ ಎಂಬುದನ್ನು ತಿಳಿಸಬೇಕು. ರಾಷ್ಟ್ರಮಟ್ಟದಲ್ಲಿ ಮೈತ್ರಿ ಮಾಡಿಕೊಳ್ಳುವುದಕ್ಕೆ ನಮಗೆ ಶಕ್ತಿ ಇಲ್ಲ. ಈ ಮೈತ್ರಿ ಕರ್ನಾಟಕಕ್ಕೆ ಮಾತ್ರ ಸೀಮಿತ ಆಗುತ್ತಿದೆ. ದೇವೇಗೌಡರು ಎಲ್ಲರನ್ನೂ ಕರೆದು ಅಭಿಪ್ರಾಯ ಪಡೆಯುವುದು ಸೂಕ್ತ ಎಂದು ಸಿ.ಎಂ.ಇಬ್ರಾಹಿಂ ಹೇಳಿದರು.

ಬಿಜೆಪಿ ಜೊತೆ ನ್ಯಾಯೋಚಿತ ಮೈತ್ರಿ ಮಾಡಿಕೊಳ್ಳದಿದ್ದರೇ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮತ್ತಷ್ಟು ಸೀಟು ಕಳೆದುಕೊಳ್ಳುವ ಸಾಧ್ಯತೆಯಿದೆ. ರಾಜ್ಯ ಹಳವು ಕಡೆ ಕಾರ್ಯಕರ್ತರು ಬೇಸರಗೊಂಡು ನಿರಾಶೆಗೊಂಡಿದ್ದಾರೆ, ಇನ್ನೂ ಸಿಎಂ ಇಬ್ರಾಹಿಂ ಅವರು ಪಕ್ಷಕ್ಕೆ ಬಂದಿದ್ದರಿಂದ ಆಗಿರುವ ಸಂಪಾದನೆ ಏನು ಎಂದು ಕುಮಾರಸ್ವಾಮಿ ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಇಬ್ರಾಹಿಂ ಅವರಿಂದ ಏನು ಸಂಪಾದನೆಯಾಗಿದೆ ಎಂದು ಮರು ಪ್ರಶ್ನಿಸಿದ್ದಾರೆ. ಇನ್ನೂ ಅಕ್ಟೋಬರ್ 16 ರ ನಂತರ ನನ್ನ ನಿರ್ದಾರ ತಿಳಿಸುತ್ತೇನೆ, ಮೈತ್ರಿ ಜೆಡಿಎಸ್ ಗೆ ಬೇಕಿತ್ತೋ ಅಥವಾ ಬಿಜೆಪಿಗೆ ಬೇಕಿತ್ತೋ ಎಂಬ ಬಗ್ಗೆ ನನಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com