ಶ್ರೀನಿವಾಸ್ ಸಾಹೇಬ್ರೆ.. ನಾನು ಒಮ್ಮೆಯೂ ಸೋತಿರಲಿಲ್ಲ, ಬಿಜೆಪಿಗೆ ಬಂದ ಮೇಲೆ ನಾಲ್ಕೈದು ಸೋಲು ಕಂಡೆ: ವಿ.ಸೋಮಣ್ಣ

ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜನಗರ ಮತ್ತು ವರುಣ ಎರಡೂ ಕ್ಷೇತ್ರದಲ್ಲಿ ಸೋತ ಹಿನ್ನೆಲೆಯಲ್ಲಿ ಹತಾಶರಾಗಿರುವ ಮಾಜಿ ಸಚಿವ ವಿ.ಸೋಮಣ್ಣ ಅವರು, ಮತ್ತೊಮ್ಮೆ ಬಿಜೆಪಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ವಿ.ಸೋಮಣ್ಣ
ವಿ.ಸೋಮಣ್ಣ

ಮೈಸೂರು: ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜನಗರ ಮತ್ತು ವರುಣ ಎರಡೂ ಕ್ಷೇತ್ರದಲ್ಲಿ ಸೋತ ಹಿನ್ನೆಲೆಯಲ್ಲಿ ಹತಾಶರಾಗಿರುವ ಮಾಜಿ ಸಚಿವ ವಿ.ಸೋಮಣ್ಣ ಅವರು, ಮತ್ತೊಮ್ಮೆ ಬಿಜೆಪಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಬಿಜೆಪಿಗೆ ಬರುವವರೆಗೆ ನಾನು ಸೋತೆ ಇರಲಿಲ್ಲ, ಬಿಜೆಪಿಗೆ ಬಂದಾಗಿನಿಂದ ನಾನು 4-5 ಬಾರಿ ಸೋತೆ ಎಂದು ಪರೋಕ್ಷವಾಗಿ ಬಿಜೆಪಿ ನಾಯಕರ ವಿರುದ್ಧ ವಿ.ಸೋಮಣ್ಣ ಕಿಡಿ ಕಾರಿದ್ದಾರೆ.

ಭಾನುವಾರ ಮೈಸೂರಿನ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾನು ಸೋತಿರಲಿಲ್ಲ ಇಲ್ಲ. ಕಾಂಗ್ರೆಸ್ ನಲ್ಲಿ ನಿಂತು ಗೆದ್ದಿದ್ದೇನೆ. ಸ್ವತಂತ್ರ ಅಭ್ಯರ್ಥಿಯಾಗಿ 2 ಬಾರಿ ಗೆದ್ದಿದ್ದೇನೆ ಆದರೆ ಬಿಜೆಪಿಗೆ ಬಂದು ಸೋತೆ. ನಾನು ಏನಾಗಿ ಬಿಡುತ್ತೇನೋ ಅನ್ನುವ ಭಯದಲ್ಲಿ ಸೋಲಿಸಿದರು ಎಂದು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.

ನಮ್ಮವರೇ ನಮ್ಮ ಕಾಲು ಎಳೆಯುವುದು ಬಿಡಬೇಕು, ನಮ್ಮವರೇ ನಮ್ಮವರನ್ನು ಮೂಲೆ ಗುಂಪು ಮಾಡುವುದನ್ನು ಬಿಡಬೇಕು, ವರುಣ ಕ್ಷೇತ್ರದ ಸೋಲಿಗೆ ಪರೋಕ್ಷವಾಗಿ ಲಿಂಗಾಯತ ಸಮಾಜವನ್ನು ದೂರಿದರು.

ಶರಣರ ಆದರ್ಶಗಳನ್ನ ನಾವು ಬಸವ ಕಲ್ಯಾಣಕ್ಕೆ ಹೋದಾಗ ನೆನಪಿಸಿಕೊಳ್ಳುತ್ತೇವೆ. ಹಲವಾರು ವರ್ಷಗಳಿಂದ ಬಸವಕಲ್ಯಾಣಕ್ಕೂ ನನಗೂ ಸಂಬಂಧ ಇದೆ. ಬಸವಣ್ಣನವರ ಆದರ್ಶಪ್ರಾಯವಾದ ಚಿಂತನೆ ಈಗಲೂ ಇದೆ. ಅನೇಕ ವಿಚಾರ ಮಾತನಾಡಿದರೆ ಕೆಲವರಿಗೆ ಕಸಿವಿಸಿಯಾಗುತ್ತೆ. ಒಬ್ಬನೇ ಒಬ್ಬ ಸೋಮಣ್ಣ ಸಣ್ಣ ಅಪಾಚಾರ ಮಾಡದೆ ಬೆಂಗಳೂರಿನಲ್ಲಿ ಜೀವನ ನಡೆಸುತ್ತಿದ್ದಾನೆ. ಇದಕ್ಕೆ ಕಾರಣ ನಮ್ಮ ಗುರುಗಳು ಎಂದರು.

ದೇಶಕ್ಕೆ ಮಾದರಿ ನಮ್ಮ ಅನುಭವ ಮಂಟಪ ಅಂತ ದೇಶದ ಪ್ರಧಾನಿ ಹೇಳುತ್ತಾರೆ. ಬುದ್ಧವಂತರಿದ್ದರೆ ಅವರನ್ನ ಮೂಲೆ ಗುಂಪು ಮಾಡುವ ಕೆಲಸ ನಡೆಯುತ್ತಿದೆ ಎಂದು ಆಕ್ರೋಶ ಹೊರ ಹಾಕಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com