ಕಪ್ಪು ಹಣದ ಖಜಾನೆ ಇರುವಲ್ಲಿ ದಾಳಿ ನಡೆಸದೇ ಬಡವರ ಮನೆ ಶೋಧಿಸಲಾದೀತೆ? ವಿಜಯೇಂದ್ರ

ಕಲಾವಿದರ ಸಂಭಾವನೆಯಿಂದಲೂ ಕಮಿಷನ್ ವಸೂಲಿ ದಂಧೆಗಿಳಿದಿರುವ ನಿಮ್ಮ ಸರ್ಕಾರದ ಆಡಳಿತ ಹೀನಾಯ ಭ್ರಷ್ಟ ಮುಖ ಜನರ ಮುಂದೆ ತೆರೆದು ಕೊಂಡಿದೆ. ಸದ್ಯದ ಬೆಳವಣಿಗೆಗಳನ್ನು ಗಮನಿಸಿದರೆ ‘ಲಂಚ ಭಾಗ್ಯ’ಯೋಜನೆ ನಿಮ್ಮ ಮುಂದಿನ ಹೆಜ್ಜೆ.
ಬಿ.ವೈ ವಿಜಯೇಂದ್ರ
ಬಿ.ವೈ ವಿಜಯೇಂದ್ರ

ಬೆಂಗಳೂರು: ಮಾನ್ಯ ಮುಖ್ಯಮಂತ್ರಿಗಳೇ, ಕಪ್ಪು ಹಣದ ಖಜಾನೆ ಇರುವಲ್ಲಿ ದಾಳಿ ನಡೆಸದೇ ಬಡವರ ಮನೆ ಶೋಧಿಸಲಾದೀತೆ? ಎಂದು ಶಾಸಕ ಬಿ.ವೈ ವಿಜಯೇಂದ್ರ ಪ್ರಶ್ನಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಕಲಾವಿದರ ಸಂಭಾವನೆಯಿಂದಲೂ ಕಮಿಷನ್ ವಸೂಲಿ ದಂಧೆಗಿಳಿದಿರುವ ನಿಮ್ಮ ಸರ್ಕಾರದ ಆಡಳಿತ ಹೀನಾಯ ಭ್ರಷ್ಟ ಮುಖ ಜನರ ಮುಂದೆ ತೆರೆದು ಕೊಂಡಿದೆ. ಸದ್ಯದ ಬೆಳವಣಿಗೆಗಳನ್ನು ಗಮನಿಸಿದರೆ ‘ಲಂಚ ಭಾಗ್ಯ’ಯೋಜನೆ ನಿಮ್ಮ ಮುಂದಿನ ಹೆಜ್ಜೆ ‘ಪರ್ಸೆಂಟೇಜ್ ‘ನಿಗದಿ ನಿಮ್ಮ ಮುಂದಿನ ಗುರಿ ಎಂಬುದು ಖಾತ್ರಿಯಾಗುತ್ತಿದೆ ಎಂದು ಲೇವಡಿ ಮಾಡಿದ್ದಾರೆ.

ರಾಜ್ಯದಲ್ಲಿ ನಡೆದ ಆದಾಯ ತೆರಿಗೆ ಶೋಧ ಕಾರ್ಯವನ್ನು ಮುಖ್ಯಮಂತ್ರಿ ಸ್ಥಾನದಲ್ಲಿರುವ ನೀವು ಸ್ವಾಗತಿಸಬೇಕಿತ್ತು, ಆದರೆ ಉದ್ಯಮಿಗಳು, ಗುತ್ತಿಗೆದಾರರ ವಕ್ತಾರರಂತೆ ಮಾತನಾಡಿ ಶೋಧಕಾರ್ಯವನ್ನು ಚುನಾವಣಾ ಹಿನ್ನಲೆಗೆ ಹೋಲಿಸಿರುವುದನ್ನು ನೋಡಿದರೆ ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಂಡನಂತೆ ಎಂಬ ಗಾದೆ ಮಾತು ನೆನಪಿಗೆ ತರಿಸುತ್ತಿದೆ, ಸರ್ಕಾರಿ ತನಿಖಾ ಸಂಸ್ಥೆಗಳ ನೈತಿಕ ಸ್ಥೈರ್ಯ ಕಸಿಯುವ  ‘ಹತಾಶೆ’ ನಿಮ್ಮ ಮಾತುಗಳಲ್ಲಿ ವ್ಯಕ್ತವಾಗುತ್ತಿದೆ ಎಂದು ವಿಜಯೇಂದ್ರ ಟೀಕಿಸಿದ್ದಾರೆ.

ಮಾನ್ಯ ಮುಖ್ಯಮಂತ್ರಿಗಳೇ,

‘ಕಪ್ಪು ಹಣದ ಖಜಾನೆ ಇರುವಲ್ಲಿ ದಾಳಿ ನಡೆಸದೇ ಬಡವರ ಮನೆ ಶೋಧಿಸಲಾದೀತೆ?’

ಕಲಾವಿದರ ಸಂಭಾವನೆಯಿಂದಲೂ ಕಮಿಷನ್ ವಸೂಲಿ ದಂಧೆಗಿಳಿದಿರುವ ನಿಮ್ಮ ಸರ್ಕಾರದ ಆಡಳಿತದ ಹೀನಾಯ ಭ್ರಷ್ಟ ಮುಖ ಜನರ ಮುಂದೆ ತೆರೆದು ಕೊಂಡಿದೆ.
ಸದ್ಯದ ಬೆಳವಣಿಗೆಗಳನ್ನು ಗಮನಿಸಿದರೆ ‘ಲಂಚ ಭಾಗ್ಯ’ಯೋಜನೆ ನಿಮ್ಮ ಮುಂದಿನ ಹೆಜ್ಜೆ ‘ಪರ್ಸೆಂಟೇಜ್…

ಜೈಲು ಭಾಗ್ಯಕಂಡ ಹಾಗೂ ಕಾಣಬೇಕಿರುವ ಅನೇಕರು ನಿಮ್ಮ ಪಕ್ಷ ಹಾಗೂ ಸರ್ಕಾರದಲ್ಲಿರುವುದನ್ನು ಮರೆತು ನೀವು ಮಾನ್ಯ ಯಡಿಯೂರಪ್ಪನವರ ಹೆಸರು ಉಲ್ಲೇಖಿಸುತ್ತಿದ್ದೀರಿ, ವ್ಯವಸ್ಥಿತ ರಾಜಕೀಯ ಚಕ್ರವ್ಯೂಹ ಭೇದಿಸಿ ನ್ಯಾಯಾಂಗ ಹೋರಾಟದ ಮೂಲಕ ನ್ಯಾಯದ ಶ್ರೀರಕ್ಷೆ ಪಡೆದು  ಮತ್ತೆ ಜನತಾ ನ್ಯಾಯಾಲದಲ್ಲಿ ಜನಾಶೀರ್ವಾದಿಂದ ಮುಖ್ಯಮಂತ್ರಿ ಸ್ಥಾನ ಮುಡಿಗೇರಿಸಿಕೊಂಡ ಮಾನ್ಯ ಬಿ.ಎಸ್ ಯಡಿಯೂರಪ್ಪ ಅವರ ಇತಿಹಾಸ ನೀವು ಮರೆತಂತೆ ಮಾತನಾಡುವುದು ನಿಮಗೆ ಘನತೆ ತರದು ಎಂದು ಟಾಂಗ್ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com