ರಾಜ್ಯ ಕಾಂಗ್ರೆಸ್‌ನಲ್ಲಿ ಆಂತರಿಕ ಭಿನ್ನಮತ: ಡಿಕೆ ಶಿವಕುಮಾರ್ ಬೆಳಗಾವಿ ಭೇಟಿ ವೇಳೆ ಮುನ್ನೆಲೆಗೆ!

ಬೆಳಗಾವಿ ಜಿಲ್ಲೆಯ ವ್ಯವಹಾರಗಳಲ್ಲಿ ಹಿರಿಯ ಸಚಿವರು ಸೇರಿದಂತೆ ಕಾಂಗ್ರೆಸ್‌ನ ಉನ್ನತ ನಾಯಕರು ಮಧ್ಯಪ್ರವೇಶಿಸುತ್ತಿರುವುದು ಲೋಕೋಪಯೋಗಿ ಮತ್ತು ಬೆಳಗಾವಿ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರನ್ನು ಕೆರಳಿಸಿದೆ.
ಡಿಕೆ ಶಿವಕುಮಾರ್ ಬೆಳಗಾವಿ ಭೇಟಿ ಚಿತ್ರ
ಡಿಕೆ ಶಿವಕುಮಾರ್ ಬೆಳಗಾವಿ ಭೇಟಿ ಚಿತ್ರ

ಬೆಳಗಾವಿ: ಬೆಳಗಾವಿ ಜಿಲ್ಲೆಯ ವ್ಯವಹಾರಗಳಲ್ಲಿ ಹಿರಿಯ ಸಚಿವರು ಸೇರಿದಂತೆ ಕಾಂಗ್ರೆಸ್‌ನ ಉನ್ನತ ನಾಯಕರು ಮಧ್ಯಪ್ರವೇಶಿಸುತ್ತಿರುವುದು ಲೋಕೋಪಯೋಗಿ ಮತ್ತು ಬೆಳಗಾವಿ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರನ್ನು ಕೆರಳಿಸಿದೆ.

ಬೆಳಗಾವಿಯ ಆಡಳಿತ ವ್ಯವಹಾರಗಳಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಹಸ್ತಕ್ಷೇಪದ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸಚಿವರು ಚರ್ಚಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಅಧಿಕಾರಿಗಳ ವರ್ಗಾವಣೆ ಮತ್ತು ರಾಜಕೀಯ ವ್ಯವಹಾರಗಳ ಪ್ರಕ್ರಿಯೆಯಲ್ಲಿ ಪಕ್ಷದ ಉನ್ನತ ನಾಯಕರ ಹಸ್ತಕ್ಷೇಪ ಕಳೆದ ಕೆಲವು ತಿಂಗಳುಗಳಿಂದ ಜಾರಕಿಹೊಳಿ ಅವರನ್ನು ಅಸಮಾಧಾನಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.

ಶಿವಕುಮಾರ್ ಮತ್ತು ಹೆಬ್ಬಾಳ್ಕರ್  ಉಸ್ತುವಾರಿ ಸಚಿವರಾಗಿರುವ ಜಿಲ್ಲೆಗಳು ಸೇರಿದಂತೆ ಇತರ ಜಿಲ್ಲೆಗಳ ವ್ಯವಹಾರಗಳಲ್ಲಿ ಜಾರಕಿಹೊಳಿ ಎಂದಿಗೂ ಮಧ್ಯಪ್ರವೇಶಿಸಿಲ್ಲ ಎಂದು ಜಾರಕಿಹೊಳಿ ಅವರ ಸಹವರ್ತಿಯೊಬ್ಬರು ಹೇಳುತ್ತಾರೆ. ಹೀಗಿರುವಾಗ ಬೆಳಗಾವಿಯ ವಿಚಾರದಲ್ಲಿ ಯಾರಾದರೂ ಏಕೆ ಮಧ್ಯಪ್ರವೇಶಿಸಬೇಕು? ಅವರು ಪ್ರಶ್ನಿಸಿದರು.

ಬುಧವಾರ ಬೆಳಗಾವಿಗೆ ಶಿವಕುಮಾರ್ ಭೇಟಿ ನೀಡಿದಾಗ  ಜಿಲ್ಲೆಯ ಬಹುತೇಕ ಶಾಸಕರು ಗೈರು ಹಾಜರಾಗುವ ಮೂಲಕ ಅವರೊಳಗಿನ ಭಿನ್ನಮತ ಎದ್ದು ಕಾಣುತ್ತಿತ್ತು. ಶಿವಕುಮಾರ್ ಬೆಳಗಾವಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಜಾರಕಿಹೊಳಿ, ಹೆಬ್ಬಾಳ್ಕರ್ ಸೇರಿದಂತೆ ಪಕ್ಷದ ಬಹುತೇಕ ಶಾಸಕರು ಮತ್ತು ಎಂಎಲ್‌ಸಿಗಳು ಶಿವಕುಮಾರ್ ಅವರನ್ನು ಸ್ವಾಗತಿಸಲು ಬರಲಿಲ್ಲ. ಪಕ್ಷ ಮತ್ತು ವಿರೋಧಿಗಳಿಗೆ ಬಲವಾದ ಸಂದೇಶವನ್ನು ರವಾನಿಸಲು, ಜಾರಕಿಹೊಳಿ ಅವರು ಪಕ್ಷದ ಅನೇಕ ಶಾಸಕರನ್ನು ತಮ್ಮೊಂದಿಗೆ ಸೇರಿಸಿಕೊಳ್ಳಲು ಶಕ್ತಿ ಪ್ರದರ್ಶನದಲ್ಲಿ ಪ್ರಯತ್ನಿಸುತ್ತಿದ್ದಾರೆ. ಬೆಳಗಾವಿ ರಾಜಕೀಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸುವ ಅವರ ನಿರಂತರ ಪ್ರಯತ್ನಗಳಲ್ಲಿ ಪಕ್ಷದ ಹೆಚ್ಚಿನ ಶಾಸಕರು ಅವರೊಂದಿಗೆ ಸೇರುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.

ಇತ್ತೀಚೆಗಷ್ಟೇ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ನೆಪದಲ್ಲಿ ಮೈಸೂರಿಗೆ ತೆರಳಲು ನಿರ್ಧರಿಸಿದ್ದ ವೇಳೆ ಹಲವು ಶಾಸಕರು ಅವರ ಜೊತೆಗೂಡಿದ್ದರು. ಆದರೆ, ಪಕ್ಷದ ನಾಯಕತ್ವದ ಒತ್ತಡಕ್ಕೆ ಮಣಿದು ಅವರ ಪ್ರವಾಸವನ್ನು ಸ್ಥಗಿತಗೊಳಿಸಲಾಗಿತ್ತು. ಪ್ರವಾಸದಲ್ಲಿ ರಾಜಕೀಯ ಇಲ್ಲ, ಶಾಸಕರ ಮೈಸೂರು ಪ್ರವಾಸದ ಬಗ್ಗೆ ಸಿಎಂ ಮತ್ತು ಡಿಸಿಎಂಗೆ ತಿಳಿಸಿದ್ದೇನೆ ಎಂದು ಜಾರಕಿಹೊಳಿ ಅವರು ಈ ಬೆಳವಣಿಗೆಯ ಬಗ್ಗೆ ಕೇಳಿದಾಗ ಉತ್ತರಿಸಿದರು. "ಕೆಲವು ಶಾಸಕರು ತಮ್ಮ ಕ್ಷೇತ್ರಗಳಲ್ಲಿ ನಿರತರಾಗಿದ್ದರಿಂದ ನಾವು ಕೊನೆಯ ಕ್ಷಣದಲ್ಲಿ ಪ್ರವಾಸವನ್ನು ರದ್ದುಗೊಳಿಸಬೇಕಾಯಿತು. ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ, ಎಲ್ಲಾ ನಾಯಕರು ಒಗ್ಗಟ್ಟಾಗಿದ್ದಾರೆ ಎಂದು ಹೇಳಿದರು.

'ಕಾಂಗ್ರೆಸ್‌ನಲ್ಲಿ ಯಾವುದೇ ಒಡಕ್ಕಿಲ್ಲ: ಬೆಳಗಾವಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಶಿವಕುಮಾರ್ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ.  ಕಾಂಗ್ರೆಸ್‌ನ ಎಲ್ಲಾ 136 ಶಾಸಕರು ಒಟ್ಟಿಗೆ ಮತ್ತು ಒಗ್ಗಟ್ಟಾಗಿದ್ದಾರೆ ಎಂದು ಹೇಳಿದರು. ಕಾಂಗ್ರೆಸ್ ಮತ್ತು ಅದರ ನಾಯಕರ ಬಗ್ಗೆ ಬಿಜೆಪಿ ಸುಳ್ಳು ಸುದ್ದಿಗಳನ್ನು ಹರಡುತ್ತಿದೆ ಎಂದು ಆರೋಪಿಸಿದ ಅವರು ಜಾರಕಿಹೊಳಿ ಅಥವಾ ಇತರ ನಾಯಕರೊಂದಿಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com