ಜೆಡಿಎಸ್-ಬಿಜೆಪಿ ಮೈತ್ರಿ ಕುರಿತು ದೇವೇಗೌಡರ ಹೇಳಿಕೆ ಸಂಪೂರ್ಣ ಅಸಂಬದ್ಧ: ಕೇರಳ ಸಿಎಂ ಪಿಣರಾಯಿ

ಕರ್ನಾಟಕದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಗೆ ಪಿಣರಾಯಿ ವಿಜಯನ್ ಅವರು ಸಂಪೂರ್ಣ ಒಪ್ಪಿಗೆ ನೀಡಿದ್ದಾರೆ ಎಂಬ ಜನತಾ ದಳ(ಎಸ್) ವರಿಷ್ಠ ಎಚ್‌ಡಿ ದೇವೇಗೌಡರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕೇರಳ ಮುಖ್ಯಮಂತ್ರಿ ಪಿಣರಾಯಿ...
ಪಿಣರಾಯಿ ವಿಜಯನ್ - ಎಚ್‌ಡಿ ದೇವೇಗೌಡ
ಪಿಣರಾಯಿ ವಿಜಯನ್ - ಎಚ್‌ಡಿ ದೇವೇಗೌಡ

ತಿರುವನಂತಪುರಂ: ಕರ್ನಾಟಕದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಗೆ ಪಿಣರಾಯಿ ವಿಜಯನ್ ಅವರು ಸಂಪೂರ್ಣ ಒಪ್ಪಿಗೆ ನೀಡಿದ್ದಾರೆ ಎಂಬ ಜನತಾ ದಳ(ಎಸ್) ವರಿಷ್ಠ ಎಚ್‌ಡಿ ದೇವೇಗೌಡರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು, ಗೌಡರ ಹೇಳಿಕೆ ಸಂಪೂರ್ಣ ಅಸಂಬದ್ಧ ಎಂದಿದ್ದಾರೆ.

ಈ ಸಂಬಂಧ ದೇವೇಗೌಡರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪಿಣರಾಯಿ, ದೇವೇಗೌಡರಂತಹ ಹಿರಿಯ ರಾಜಕಾರಣಿ ಈ ರೀತಿ ಆಧಾರ ರಹಿತ ಸುಳ್ಳುಗಳನ್ನು ಹೇಳುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದ್ದಾರೆ.

ಇಂದು ನಡೆದ ಸಿಪಿಎಂ ಸೆಕ್ರೆಟರಿಯೇಟ್ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಯಿತು. ಅಲ್ಲಿ ಗೌಡರು ಹೇಳಿಕೊಂಡಂತೆ ನಾನು ಜೆಡಿಎಸ್- ಬಿಜೆಪಿ ಮೈತ್ರಿಗೆ ಒಪ್ಪಿಗೆ ನೀಡಿಲ್ಲ ಎಂದು ಪಿಣರಾಯಿ ವಿವರಿಸಿದರು. 

ನಾನು ಇತ್ತೀಚಿಗೆ ದೇವೇಗೌಡರನ್ನು ಭೇಟಿಯೂ ಮಾಡಿಲ್ಲ ಮತ್ತು ಮಾತೂ ಆಡಿಲ್ಲ ಎಂದು ಕೇರಳ ಸಿಎಂ ಪಕ್ಷದ ನಾಯಕರಿಗೆ ತಿಳಿಸಿದರು. ನಂತರ ಕಠಿಣ ಪದಗಳಲ್ಲಿ ದೇವೇಗೌಡರ ಹೇಳಿಕೆಯನ್ನು ಖಂಡಿಸಿದ ಪಿಣರಾಯಿ, ಗೌಡರ ಹೇಳಿಕೆ ಅಸಂಬದ್ಧ ಮತ್ತು ರಾಜಕೀಯ ಸಭ್ಯತೆಯ ಭಾಗವಾಗಿ ಅದನ್ನು ಅವರು ಸರಿಪಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

ಕೇರಳದಲ್ಲಿ "ಜನತಾ ದಳ(ಎಸ್) ದೀರ್ಘಕಾಲದಿಂದ ಎಲ್ ಡಿಎಫ್ ನ ಭಾಗವಾಗಿದೆ. ಹೀಗಾಗಿ ಎನ್‌ಡಿಎ ಮೈತ್ರಿಕೂಟಕ್ಕೆ ಕೇರಳದ ರಾಜ್ಯ ಘಟಕ ಸಮ್ಮತಿ ನೀಡಿದೆ ಮತ್ತು ಪಿಣರಾಯಿ ವಿಜಯನ್ ಅವರು ಒಪ್ಪಿಗೆ ನೀಡಿದ್ದಾರೆ ಎಂದು ದೇವೇಗೌಡರು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com