ಸುಭಾಷ್ ಚಂದ್ರ ಬೋಸ್
ಸುಭಾಷ್ ಚಂದ್ರ ಬೋಸ್

ಸುಭಾಷ್ ಚಂದ್ರ ಬೋಸ್ ಹಂತಕರು ಕಾಂಗ್ರೆಸ್ ನವರು; ನೆಹರೂ ಅವ್ರೇ ಕೊಲ್ಲಿಸಿದ್ರು ಅಂತಾರೆ ಕೆಲವರು: ಬಸನಗೌಡ ಪಾಟೀಲ್ ಯತ್ನಾಳ್

ಸುಭಾಷ್ ಚಂದ್ರ ಬೋಸ್ ಅವರ ಹಂತಕರು ಕಾಂಗ್ರೆಸ್ ನವರು, ಈ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಮಾಣಿಕವಾಗಿ ಹೋರಾಟ ಮಾಡಿದ ಅನೇಕರನ್ನು ಕಾಂಗ್ರೆಸ್ ನವರು ಹತ್ಯೆ ಮಾಡಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ.
Published on

ಹುಬ್ಬಳ್ಳಿ: ಸುಭಾಷ್ ಚಂದ್ರ ಬೋಸ್ ಅವರ ಹಂತಕರು ಕಾಂಗ್ರೆಸ್ ನವರು, ಈ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಮಾಣಿಕವಾಗಿ ಹೋರಾಟ ಮಾಡಿದ ಅನೇಕರನ್ನು ಕಾಂಗ್ರೆಸ್ ನವರು ಹತ್ಯೆ ಮಾಡಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ.

ಇಂದು ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಸುಭಾಷ್ ಚಂದ್ರ ಬೋಸ್ ರ ಸಾವಿನ ಬಗ್ಗೆ ಇಂದಿಗೂ ಗೊಂದಲ, ಸಂಶಯಗಳಿವೆ. ಕಾಂಗ್ರೆಸ್ ನವರೇ ಅವರನ್ನು ಕೊಂದಿದ್ದು, ಅದರಲ್ಲೂ ನೆಹರೂ ಅವರೇ ಕೊಲ್ಲಿಸಿದರು ಎಂದು ಹಲವರು ಮಾತನಾಡಿಕೊಳ್ಳುತ್ತಾರೆ ಎಂದು ಕೂಡ ಯತ್ನಾಳ್ ಹೇಳಿಕೆ ನೀಡಿದ್ದಾರೆ.

ಸುಭಾಷ್ ಚಂದ್ರ ಬೋಸ್ ಅವರು ಈ ದೇಶದ ಮೊದಲ ಪ್ರಧಾನಿಯಾಗಬೇಕಿತ್ತು. ಅವರಿಗೆ ಎಲ್ಲಾ ಅರ್ಹತೆಗಳಿದ್ದವು. ಆದರೆ ನೆಹರೂರವನ್ನು ಪ್ರಧಾನಿ ಮಾಡುವ ಏಕೈಕ ಉದ್ದೇಶದಿಂದ ಮಹಾತ್ಮಾ ಗಾಂಧಿಯವರು ತಪ್ಪು ನಿರ್ಧಾರ ತೆಗೆದುಕೊಂಡರು ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com