ಸಿದ್ದರಾಮಯ್ಯ ವಿರುದ್ಧ ಹರಿಪ್ರಸಾದ್ ಶಕ್ತಿ ಪ್ರದರ್ಶನ: ಲೋಕಸಭೆ ಚುನಾವಣೆಗೂ ಮುನ್ನ ಬಿಲ್ಲವ ನಾಯಕನಿಗೆ ಸೂಕ್ತ ಸ್ಥಾನ?

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಹರಿಪ್ರಸಾದ್ ಇಬ್ಬರು ಹಿಂದುಳಿದ ಸಮುದಾಯದ ನಾಯಕರಾಗಿದ್ದಾರೆ, ಸಚಿವ ಸ್ಥಾನ ಸಿಗದಿದ್ದಕ್ಕೆ ಬೇಸರಗೊಂಡಿರುವ ಹರಿಪ್ರಸಾದ್ ಸಿಎಂ ವಿರುದ್ಧ ತೊಡೆ ತಟ್ಟಿದ್ದಾರೆ.
ಸಿದ್ದರಾಮಯ್ಯ ಮತ್ತು ಬಿ.ಕೆ ಹರಿಪ್ರಸಾದ್
ಸಿದ್ದರಾಮಯ್ಯ ಮತ್ತು ಬಿ.ಕೆ ಹರಿಪ್ರಸಾದ್
Updated on

ಬೆಂಗಳೂರು: ಎಐಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ಎಂಎಲ್‌ಸಿ ಬಿ.ಕೆ.ಹರಿಪ್ರಸಾದ್ ಅವರು ಶನಿವಾರ ಅರಮನೆ ಮೈದಾನದಲ್ಲಿ ಬಿಲ್ಲವ-ಈಡಿಗ ಬೆಂಬಲಿಗರ ಸಭೆ ಕರೆದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಹರಿಪ್ರಸಾದ್ ಇಬ್ಬರು ಹಿಂದುಳಿದ ಸಮುದಾಯದ ನಾಯಕರಾಗಿದ್ದಾರೆ, ಸಚಿವ ಸ್ಥಾನ ಸಿಗದಿದ್ದಕ್ಕೆ ಬೇಸರಗೊಂಡಿರುವ ಹರಿಪ್ರಸಾದ್ ಸಿಎಂ ವಿರುದ್ಧ ತೊಡೆ ತಟ್ಟಿದ್ದಾರೆ.

ಸುಮಾರು 150-200 ಬಸ್‌ಗಳು ದಕ್ಷಿಣ ಕನ್ನಡ ಮತ್ತು ಉಡುಪಿಯಿಂದ ಬೆಂಗಳೂರಿಗೆ ಬೆಂಬಲಿಗರನ್ನು ಕರೆದೊಯ್ಯುತ್ತಿವೆ. ಹರಿಪ್ರಸಾದ್ ಅವರ ಈ ಶಕ್ತಿ ಪ್ರದರ್ಶನದ ಬೆಳವಣಿಗೆಗಳನ್ನು ಸರ್ಕಾರದ 'ಉನ್ನತ ಅಧಿಕಾರಿಗಳು' ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಗುಪ್ತಚರ ಏಜೆನ್ಸಿಗಳು ಸಹ ಮುಂದೆ ಏನಾಗಲಿದೆ ಎಂಬ ಬಗ್ಗೆ ಕಾದು ನೋಡುತ್ತಿವೆ.

ಈಗಿನ ಮತ್ತು ಹಿಂದಿನ ಸರ್ಕಾರಗಳು ಹಿಂದುಳಿದ ವರ್ಗಗಳಿಗೆ  ಹೆಚ್ಚಿನ ಪ್ರಾಮುಖ್ಯತೆ ನೀಡಿಲ್ಲ ಎಂಬದನ್ನು ಮನಗಂಡಿರುವ ಹರಿಪ್ರಸಾದ್ ಬೆಂಬಲಿಗರು  ನೇಮಕಾತಿ ಮತ್ತು ಪ್ರಮುಖ ಹುದ್ದೆಗಳನ್ನು ನೀಡಬೇಕೆಂದು ಒತ್ತಾಯಿಸಿದ್ದಾರೆ. ಕಾಂಗ್ರೆಸ್ ಬೆಂಬಲಿಸಿದ ಹಿಂದುಳಿದ ವರ್ಗಗಳು ಸುಮಾರು 35% ಮತದಾರರನ್ನು ಹೊಂದಿದ್ದರೂ ಅಧಿಕಾರಶಾಹಿ ಅಥವಾ ಮಂತ್ರಿಮಂಡಲದಲ್ಲಿ ತಮ್ಮ ಸಮುದಾಯದ ನಾಯಕನಿದೆ ಅವಕಾಶ ನೀಡಿಲ್ಲ, ಹೀಗಾಗಿ ಅವರಿಗೆ ಪ್ರಮುಖ ಸ್ಥಾನ  ನೀಡಬೇಕೆಂದು ಕಾಂಗ್ರೆಸ್ ನಾಯಕರನ್ನು ಒತ್ತಾಯಿಸಿವೆ.

ಪ್ರಮುಖ ಸಮುದಾಯಗಳ ಪ್ರಾತಿನಿಧ್ಯಕ್ಕೆ ಹೋಲಿಸಿದರೆ ಸಚಿವ ಸಂಪುಟದಲ್ಲಿ ಕೇವಲ ಮೂವರು ಹಿಂದುಳಿದವರಿದ್ದಾರ. ಸಿಎಂ, ಬೈರತಿ ಸುರೇಶ್ ಮತ್ತು ಮಧು ಬಂಗಾರಪ್ಪ ಮಾತ್ರ ಎನ್ನುತ್ತಾರೆ ಹರಿಪ್ರಸಾದ್ ಬೆಂಬಲಿಗರು.

ಹೈಕಮಾಂಡ್‌ನ ಮೂಲಗಳು ಹೇಳುವಂತೆ ಒಬ್ಬರು ಅಥವಾ ಇಬ್ಬರು ಸರಿಯಾಗಿ ಕಾರ್ಯನಿರ್ವಹಣೆ ಮಾಡದ ಸಚಿವರನ್ನು ಕೈಬಿಡುವ ನಿರೀಕ್ಷೆಯಿದೆ ಮತ್ತು ಹರಿಪ್ರಸಾದ್‌ಗೆ ದಸರಾ ಅಥವಾ ನಂತರದ ಸಮಯದಲ್ಲಿ ಅಂದರೆ ಲೋಕಸಭಾ ಚುನಾವಣೆಗೆ ಮುಂಚೆಯೇ ಸೂಕ್ತ ಸ್ಥಾನ ನೀಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಹರಿಪ್ರಸಾದ್ ಅವರು ಸಚಿವರಾಗಲು ಎಲ್ಲಾ ರೀತಿಯಲ್ಲೂ ಅರ್ಹರಾಗಿದ್ದಾರೆ. ಅವರ ಸೇರ್ಪಡೆಯಿಂದ ಹಿಂದುಳಿದ ವರ್ಗಗಳ ಮೇಲೆ ಕಾಂಗ್ರೆಸ್ ತನ್ನ ಹಿಡಿತವನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಹರಿಪ್ರಸಾದ್ ಅವರನ್ನು ಸಚಿವರನ್ನಾಗಿ ಮಾಡುವುದರಿಂದ ಕಾಂಗ್ರೆಸ್‌ಗೆ ಸಂಖ್ಯಾಬಲದ ಕೊರತೆ ಇರುವ ಪರಿಷತ್ತಿನಲ್ಲಿ ಅವರು ಸಭಾನಾಯಕನ ಪಾತ್ರವನ್ನು ವಹಿಸುತ್ತಾರೆ ಎಂದರ್ಥ ಎಂಬುದಾಗಿ ಸಿಎಂ ಸಿದ್ದರಾಮಯ್ಯನವರ ಮಾಜಿ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಅಭಿಪ್ರಾಯ ಪಟ್ಟಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com