ಮೂರಲ್ಲ ಈಗ ಆರು ಡಿಸಿಎಂ ಬೇಕು, ಐವರಿಗೂ ಡಿಕೆಶಿ ಬಾಸ್ ಆಗಲಿ- ಬಸವರಾಜ ರಾಯರೆಡ್ಡಿ; ಡಿಕೆಶಿ ಕಟ್ಟಿಹಾಕಲು ಕೈ ನಾಯಕರ ತಂತ್ರ?

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಲಾಭ ಪಡೆಯಲು ಕರ್ನಾಟಕದಲ್ಲಿ ಐದು ಡಿಸಿಎಂ ಹುದ್ದೆಗಳನ್ನು ಸೃಷ್ಟಿಸಬೇಕು ಎಂಬುದು ನನ್ನ ಅಭಿಪ್ರಾಯವಾಗಿದೆ ಶಾಸಕ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.
ಡಿ.ಕೆ ಶಿವಕುಮಾರ್ ಮತ್ತು ಬಸವರಾಜ ರಾಯರೆಡ್ಡಿ
ಡಿ.ಕೆ ಶಿವಕುಮಾರ್ ಮತ್ತು ಬಸವರಾಜ ರಾಯರೆಡ್ಡಿ
Updated on

ಬೆಂಗಳೂರು: ರಾಜ್ಯದಲ್ಲಿ ಡಿ.ಕೆ. ಶಿವಕುಮಾರ್‌ ಅವರಲ್ಲದೆ ಇನ್ನೂ ಮೂರು ಹೊಸ ಡಿಸಿಎಂ ಸ್ಥಾನಗಳನ್ನು ಸೃಷ್ಟಿಸಿ ಬೇರೆ ಬೇರೆ ವರ್ಗಕ್ಕೆ ಅವಕಾಶ ನೀಡಬೇಕು ಎಂಬ ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಅವರ ಬೇಡಿಕೆಯ ಚರ್ಚೆಯೇ ಜೋರಾಗಿದೆ.

ಅದರ ನಡುವೆ ಶಾಸಕ ಬಸವರಾಜ ರಾಯರೆಡ್ಡಿ ಇದನ್ನೂ ಮೀರಿಸಿ ಹೊಸದಾಗಿ ಐದು ಉಪಮುಖ್ಯಮಂತ್ರಿಗಳು ಬೇಕು ಎಂಬ ಅಭಿಪ್ರಾಯ ಮಂಡಿಸಿದ್ದಾರೆ. ಒಟ್ಟು ಆರು ಡಿಸಿಎಂಗಳ ಪೈಕಿ ಡಿ.ಕೆ. ಶಿವಕುಮಾರ್‌ ಅವರು ಪ್ರಿನ್ಸಿಪಾಲ್‌ ಡಿಸಿಎಂ ಆಗಲಿ ಎಂಬ ಸಲಹೆಯನ್ನೂ ಅವರೇ ನೀಡಿ ಸಂಧಾನ ಸೂತ್ರ ಹೊಸೆದಿದ್ದಾರೆ.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಲಾಭ ಪಡೆಯಲು ಕರ್ನಾಟಕದಲ್ಲಿ ಐದು ಡಿಸಿಎಂ ಹುದ್ದೆಗಳನ್ನು ಸೃಷ್ಟಿಸಬೇಕು ಎಂಬುದು ನನ್ನ ಅಭಿಪ್ರಾಯವಾಗಿದೆ ಎಂದರು. ಸದ್ಯ ಶಿವಕುಮಾರ್ ಮಾತ್ರ ಡಿಸಿಎಂ ಆಗಿದ್ದಾರೆ. ಇದೇ ರೀತಿಯ ಅವಕಾಶಗಳನ್ನು ಪ್ರಾದೇಶಿಕವಾಗಿ ಮತ್ತು ಜಿಲ್ಲಾವಾರು ನೀಡಬೇಕು. ಲಿಂಗಾಯತ, ಮುಸ್ಲಿಂ, ದಲಿತ ಸಮುದಾಯಗಳ ಅಭ್ಯರ್ಥಿಗಳು ಮತ್ತು ಒಬ್ಬ ದಲಿತ ಅಭ್ಯರ್ಥಿಗೂ ಡಿಸಿಎಂ ಅವಕಾಶ ನೀಡಬೇಕು ಎಂದು ಅವರು ಹೇಳಿದರು.

ಹೀಗೆ ಮಾಡಿದರೆ ಎಲ್ಲ ಸಮುದಾಯಗಳು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತವೆ. ಸಚಿವ ರಾಜಣ್ಣ ಅವರ ಬೇಡಿಕೆಗೆ ನನ್ನ ಬೆಂಬಲವಿದೆ, ರಾಜಣ್ಣ ಮೂರು ಡಿಸಿಎಂಗೆ ಬೇಡಿಕೆ ಇಟ್ಟಿದ್ದರು ನಾನು ಅದರ ಜೊತೆಗೆ ಇನ್ನು ಎರಡು ಡಿಸಿಎಂ ಹುದ್ದೆಗಳನ್ನು ಸೃಷ್ಟಿಸಬೇಕು ಎಂದು ಒತ್ತಾಯಿಸುತ್ತಿರುವುದಾಗಿ ತಿಳಿಸಿದರು.

ಕರ್ನಾಟಕವು ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಗುಜರಾತ್ ನಂತರ, ಅದರ ಭೌಗೋಳಿಕ ಅಥವಾ ಪ್ರಾದೇಶಿಕ ವಿಸ್ತಾರದ ವಿಷಯದಲ್ಲಿ ದೇಶದ ಆರನೇ ಅತಿದೊಡ್ಡ ರಾಜ್ಯವಾಗಿದೆ. ಈ ಪ್ರಸ್ತಾವನೆಗೆ ಈಗಾಗಲೇ ಸಚಿವ ಸಂಪುಟದ ಜಿ.ಪರಮೇಶ್ವರ, ಎಂ.ಬಿ.ಪಾಟೀಲ್ ಸೇರಿದಂತೆ ಹಲವು ಹಿರಿಯರಿಂದ ಬೆಂಬಲ ಸಿಕ್ಕಿದೆ. ಉತ್ತಮ ಆಡಳಿತ ಮತ್ತು ಆಡಳಿತ ನೀಡಲು ಸರ್ಕಾರ ಹೆಚ್ಚಿನ ಉಪಮುಖ್ಯಮಂತ್ರಿಗಳನ್ನು ತರಬೇಕು ಎಂಬ ರಾಜಣ್ಣ ಅವರ ಪ್ರಸ್ತಾವನೆಗೆ ನಾನೂ ಸಹ ಒಪ್ಪಿಗೆ ನೀಡುತ್ತೇನೆ.

ಬಿಜೆಪಿ-ಜೆಡಿ (ಎಸ್) ಮೈತ್ರಿಗಿಂತ ಕಡಿಮೆ ಸ್ಥಾನಗಳನ್ನು ಗೆದ್ದರೆ ಕಾಂಗ್ರೆಸ್ ಸರ್ಕಾರ ಅಸ್ಥಿರವಾಗಲಿದೆ. ಆದರೆ ಸದ್ಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸುಭದ್ರವಾಗಿದೆ ಎಂದು ಹೇಳಿದರು.

ಡಿಸಿಎಂ ಶಿವಕುಮಾರ್ ಅವರ ಸ್ಥಾನವನ್ನು ದುರ್ಬಲಗೊಳಿಸುವ ಉದ್ದೇಶದಿಂದ ಹೆಚ್ಚಿನ ಡಿಸಿಎಂ ಹುದ್ದೆಗಳ ಬೇಡಿಕೆ ಇಡಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹೆಚ್ಚಿನ ಡಿಸಿಎಂ ಪ್ರಸ್ತಾವನೆ ಶಿವಕುಮಾರ್ ವಿರುದ್ಧ ಅಲ್ಲ, ಅವರು ಉತ್ತಮ ಸಂಘಟಕರು, ಅವರು ಪ್ರಧಾನ ಡಿಸಿಎಂ ಆಗಲಿ, ಇತರರು ಅವರ ಅಧೀನವಾಗಿರಲಿ ಎಂದು ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿಯಾಗಿ ಇರುತ್ತಾರೆ ಎಂದು ರಾಯರೆಡ್ಡಿ ಹೇಳಿದ್ದಾರೆ. ಅವರನ್ನು ಪೂರ್ಣಾವಧಿಗೆ ಸಿಎಂ ಮಾಡಲಾಗಿದೆ. ಅವರ ಇಚ್ಛೆಯಂತೆ ಹುದ್ದೆಗೆ ರಾಜೀನಾಮೆ ನೀಡಬಹುದು. ಆದರೆ, ಅವರನ್ನು ಸಿಎಂ ಮಾಡುವ ಸಂದರ್ಭದಲ್ಲಿ ಹೈಕಮಾಂಡ್ ಪೂರ್ಣಾವಧಿಗೆ ಸಿಎಂ ಮಾಡಲಾಗಿದೆ ಎಂದು ಸ್ಪಷ್ಟವಾಗಿ ಹೇಳಿತ್ತು.

ಸಹಕಾರ ಸಚಿವ ಕೆ.ಎನ್. ರಾಜಣ್ಣ ಮತ್ತು ರಾಯರೆಡ್ಡಿ ಹೇಳಿಕೆ ಕಾಂಗ್ರೆಸ್‌ನಲ್ಲಿ ತೀವ್ರ ಸಂಚಲನ ಮೂಡಿಸಿದೆ. ಮೂರು ಉಪ ಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸದಿದ್ದರೆ ಸರ್ಕಾರ ಅಸ್ಥಿರವಾಗಲಿದೆ ಎಂದು ರಾಜಣ್ಣ ಹೇಳಿಕೆ ನೀಡಿದ್ದರು. ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ರಾಜ್ಯದಲ್ಲಿ ಮೂರು ಉಪ ಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸಲು ರಾಜಣ್ಣ ಒತ್ತಾಯಿಸಿದ್ದರು.

ಸಂಸತ್ ಚುನಾವಣೆಯಲ್ಲಿ ಕಾಂಗ್ರೆಸ್ ಕಡಿಮೆ ಸೀಟು ಗೆದ್ದರೆ ಸರ್ಕಾರ ಅಸ್ಥಿರವಾಗಲಿದೆ, ಲೋಕಸಭೆ ಚುನಾವಣೆಯಲ್ಲಿ ಸೋಲು ಎದುರಾದಾಗಲೆಲ್ಲ ಹೈಕಮಾಂಡ್ ಸಾರ್ವಜನಿಕರ ಅಭಿಪ್ರಾಯವನ್ನು ಪರಿಗಣಿಸಿದೆ ಎಂದರು.

ಸ್ಥಿರ ಸರ್ಕಾರವನ್ನು ಖಚಿತಪಡಿಸಿಕೊಳ್ಳಲು ಮತ್ತು ಹೆಚ್ಚಿನ ಲೋಕಸಭಾ ಸ್ಥಾನಗಳನ್ನು ಗೆಲ್ಲಲು ಮೂರು ಡಿಸಿಎಂ ಹುದ್ದೆಗಳನ್ನು ರಚಿಸಲು ನಾನು ಹೈಕಮಾಂಡ್‌ಗೆ ಹೇಳಿದ್ದೇನೆ. ಇದು ದುರುದ್ದೇಶದಿಂದ ಹೇಳಿಕೆಯಲ್ಲ ಮತ್ತು ಪಕ್ಷದ ಹಿತದೃಷ್ಟಿಯಿಂದ ನಾನು ಇದನ್ನು ಹೇಳುತ್ತಿದ್ದೇನೆ ರಾಜಣ್ಣ ಹೇಳಿದ್ದರು.

ಈ ವಿಚಾರವಾಗಿ ಮಾತನಾಡಲು ಸಿಎಂ ಸಿದ್ದರಾಮಯ್ಯ ಪ್ರೇರೇಪಿಸುತ್ತಿದ್ದಾರೆ ಎಂದು ಅರ್ಥೈಸುವುದು ತಪ್ಪು, ನಾನು ಈ ಹಿಂದೆ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿಲ್ಲ, ಇನ್ನೂ ಮೂರು ಡಿಸಿಎಂಗಳಾದರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಾಮುಖ್ಯತೆ ಕಳೆದುಕೊಳ್ಳಲಿದ್ದಾರೆ ಎಂದು ಹೇಳಿರುವುದು ತಪ್ಪು ಅಭಿಪ್ರಾಯ ಎಂದರು.

ಕರ್ನಾಟಕದಂತಹ ರಾಜ್ಯಕ್ಕೆ ಕನಿಷ್ಠ ಆರು ಉಪ ಮುಖ್ಯಮಂತ್ರಿಗಳು ಇರಬೇಕು ಎಂದು ಕಾಂಗ್ರೆಸ್ ಶಾಸಕರು ಹೇಳಿದರು, ಆಂಧ್ರ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ಐವರು ಉಪ ಮುಖ್ಯಮಂತ್ರಿಗಳನ್ನು ಹೊಂದಿದ್ದಾರೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com