ಬೆಳಗಾವಿ: ಶಾಸಕರ ಆಪ್ತ ‘ಲಂಚ’ ಪಡೆದ ವಿಡಿಯೋ ವೈರಲ್

ಸರ್ಕಾರಿ ಕಾಮಗಾರಿಯೊಂದರ ಟೆಂಡರ್‌ಗೆ ಸಂಬಂಧಿಸಿದಂತೆ ಬೆಳಗಾವಿ ಜಿಲ್ಲೆಯ ಬಿಜೆಪಿ ಶಾಸಕರೊಬ್ಬರ ಆಪ್ತರೊಬ್ಬರು ವ್ಯಕ್ತಿಯೊಬ್ಬರಿಂದ ಲಕ್ಷಗಟ್ಟಲೆ ಲಂಚ “ಕಮಿಷನ್” ​​ಪಡೆದಿರುವ ಆರೋಪದ ವಿಡಿಯೋವೊಂದು ಸೋಮವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಳಗಾವಿ: ಸರ್ಕಾರಿ ಕಾಮಗಾರಿಯೊಂದರ ಟೆಂಡರ್‌ಗೆ ಸಂಬಂಧಿಸಿದಂತೆ ಬೆಳಗಾವಿ ಜಿಲ್ಲೆಯ ಬಿಜೆಪಿ ಶಾಸಕರೊಬ್ಬರ ಆಪ್ತರೊಬ್ಬರು ವ್ಯಕ್ತಿಯೊಬ್ಬರಿಂದ ಲಕ್ಷಗಟ್ಟಲೆ ಲಂಚ “ಕಮಿಷನ್” ​​ಪಡೆದಿರುವ ಆರೋಪದ ವಿಡಿಯೋವೊಂದು ಸೋಮವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಶಾಸಕರ ಆಪ್ತರೊಬ್ಬರಿಗೆ ಕಮಿಷನ್ ಹಣ ನೀಡುತ್ತಿರುವ ದೃಶ್ಯಾವಳಿಗಳು ವಿಡಿಯೋದಲ್ಲಿದೆ. ಖಾಸಗಿ ಗುತ್ತಿಗೆದಾರರೊಬ್ಬರ ಪರವಾಗಿ ಸಂಪರ್ಕಿಸಿದ ವ್ಯಕ್ತಿಗೆ ಶಾಸಕರ ಕ್ಷೇತ್ರದ ವಿವಿಧ ಕಾಮಗಾರಿಗಳಿಗೆ ನಿಗದಿಪಡಿಸಿದ ಲಂಚದ ಹಣವನ್ನು ಸಹ ಅವರ ಸಹಚರ ಬಹಿರಂಗಪಡಿಸುತ್ತಾನೆ.

ಈ ವಿಡಿಯೋ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಸರ್ಕಾರದ ವಿವಿಧ ಯೋಜನೆಗಳನ್ನು ಕಾರ್ಯಗತಗೊಳಿಸಿದ ಗುತ್ತಿಗೆದಾರರ ಬಿಲ್‌ಗಳನ್ನು ತೆರವುಗೊಳಿಸಲು ಕೆಲವು ಸಚಿವರು ಮತ್ತು ಶಾಸಕರು 40% ಕಮಿಷನ್‌ಗೆ ಬೇಡಿಕೆಯಿಟ್ಟಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕರು ಈ ಹಿಂದೆ ಬಿಜೆಪಿ ಸರ್ಕಾರವನ್ನು ಗುರಿಯಾಗಿಸಿಕೊಂಡು ಆರೋಪಿಸಿದ್ದರು. ಶಾಸಕರ ಸಹಚರ ಅಪರಿಚಿತ ವ್ಯಕ್ತಿಯಿಂದ ಹಣ ಸ್ವೀಕರಿಸಿ ಇನ್ನೋವಾ ಕಾರಿನೊಳಗೆ ಇಟ್ಟುಕೊಂಡಿರುವುದನ್ನು ದೃಶ್ಯಾವಳಿಗಳು ತೋರಿಸುತ್ತವೆ.

ಶಾಸಕರ ಆಪ್ತ ಸಹಾಯಕನಿಗೆ ರೂ,1000 ಅಥವಾ 2,000 ನೀಡುವಂತೆ ಸಹಚರರು ಬೇಡಿಕೆ ಇಟ್ಟಿದ್ದಾರೆ. ಆ ವ್ಯಕ್ತಿ ತನ್ನ ಬಳಿ ಇನ್ನು ಹಣವಿಲ್ಲ, ನಾಳೆ ಕೆಲಸದ ಸ್ಥಳದಲ್ಲಿ ಆಪ್ತ ಸಹಾಯಕನಿಗೆ ರೂ.1,000 ಕೊಡುತ್ತೇನೆ ಎಂದು ಹೇಳಿರುವುದು ಕೇಳಿ ಬಂದಿದೆ.

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ಆಪ್ತನ ಮೂಲಕ ಲಂಚ ಪಡೆದ ಶ್ರೀಮಂತ ಪಾಟೀಲ್ ವಿರುದ್ಧ ಬಸವರಾಜ ಬೊಮ್ಮಾಯಿ ಕ್ರಮ ಕೈಗೊಳ್ಳುವರೇ ಎಂದು ಪ್ರಶ್ನಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com