ಆಯನೂರು ಮಂಜುನಾಥ್ ಮತ್ತು ಕೆ.ಎಸ್ ಈಶ್ವರಪ್ಪ
ಆಯನೂರು ಮಂಜುನಾಥ್ ಮತ್ತು ಕೆ.ಎಸ್ ಈಶ್ವರಪ್ಪ

ಈಶ್ವರಪ್ಪ ಪುತ್ರ ಕಾಂತೇಶ್ ಗೆ ಶಿವಮೊಗ್ಗ ವಿಧಾನಸಭೆ ಟಿಕೆಟ್; ಬಿಜೆಪಿ ಒಳಜಗಳ ಕಾಂಗ್ರೆಸ್ ಗೆ ಲಾಭ; ಆಯನೂರು ಮಂಜುನಾಥ್ ಗೆ 'ಕೈ' ಗಾಳ

ಕಳೆದ ಮೂರು ದಶಕಗಳಿಂದ ಬಿಜೆಪಿಯ ಭದ್ರಕೋಟೆ ಎಂದು ಪರಿಗಣಿಸಲ್ಪಟ್ಟ ಶಿವಮೊಗ್ಗ ವಿಧಾನಸಭಾ ಕ್ಷೇತ್ರವನ್ನು ಗೆಲ್ಲುವುದು ಕೇಸರಿ ಪಕ್ಷಕ್ಕೆ ಈ ಬಾರಿ ಕಷ್ಟವಾಗಬಹುದು, ಏಕೆಂದರೆ ಕಳೆದರಡು ವರ್ಷಗಳಿಂದ ಈ ಕ್ಷೇತ್ರವು ಆಗಾಗ್ಗೆ ಕೋಮುಗಲಭೆಗಳಿಗೆ ಸಾಕ್ಷಿಯಾಗಿದೆ.

ಶಿವಮೊಗ್ಗ: ಕಳೆದ ಮೂರು ದಶಕಗಳಿಂದ ಬಿಜೆಪಿಯ ಭದ್ರಕೋಟೆ ಎಂದು ಪರಿಗಣಿಸಲ್ಪಟ್ಟ ಶಿವಮೊಗ್ಗ ವಿಧಾನಸಭಾ ಕ್ಷೇತ್ರವನ್ನು ಗೆಲ್ಲುವುದು ಕೇಸರಿ ಪಕ್ಷಕ್ಕೆ ಈ ಬಾರಿ ಕಷ್ಟವಾಗಬಹುದು, ಏಕೆಂದರೆ ಕಳೆದರಡು ವರ್ಷಗಳಿಂದ ಈ ಕ್ಷೇತ್ರವು ಆಗಾಗ್ಗೆ ಕೋಮುಗಲಭೆಗಳಿಗೆ ಸಾಕ್ಷಿಯಾಗಿದೆ.

2022 ರ ಆರಂಭದಲ್ಲಿ ಬಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆ, ಮಾಲ್‌ನಲ್ಲಿ ವೀರ ಸಾವರ್ಕರ್ ಅವರ ಪೋಸ್ಟರ್ ಹಾಕಿದ ನಂತರ ಈ ಭಾಗದಲ್ಲಿ ಪ್ರಮುಖ ಕೋಮು ಸಮಸ್ಯೆಗಳನ್ನು ಕಂಡಿತು. ಈ ಅಡಚಣೆಗಳು ನಗರದಲ್ಲಿ ಆಗಾಗ್ಗೆ ಬಂದ್‌ಗಳಿಗೆ ಕಾರಣವಾಯಿತು, ವ್ಯಾಪಾರಗಳು ಮತ್ತು ಒಟ್ಟಾರೆ ಆರ್ಥಿಕ ವಾತಾವರಣದ ಮೇಲೆ ಪರಿಣಾಮ ಬೀರಿತು.

ಕೋಮು ಜ್ವಾಲೆಯನ್ನು ತಗ್ಗಿಸುವ ಬದಲು ಶಾಸಕ ಕೆ.ಎಸ್.ಈಶ್ವರಪ್ಪ ಅವರು ದ್ವೇಷದ ಪ್ರಚಾರ ಮಾಡುತ್ತಿದ್ದಾರೆ ಎಂದು  ಆಯನೂರು ಮಂಜುನಾಥ್ ಆರೋಪಿಸಿದರು. ಕ್ಷೇತ್ರದಿಂದ ಪಕ್ಷದ ಟಿಕೆಟ್‌ ಆಕಾಂಕ್ಷಿಯಾಗಿದ್ದ ಮಂಜುನಾಥ್‌, ತಮಗೆ ಟಿಕೆಟ್ ಸಿಗುವುದಿಲ್ಲ ಎಂಬುದು ಖಚಿತವಾಗುತ್ತಿದ್ದಂತೆ ಈಶ್ವರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಈಶ್ವರಪ್ಪ ಅವರು ತಮ್ಮ ಪುತ್ರ ಕೆ.ಇ.ಕಾಂತೇಶ್‌ಗೆ ಟಿಕೆಟ್ ನೀಡುವಂತೆ ಬೇಡಿಕೆ ಇಟ್ಟಿದ್ದು, ಎರಡನೇ ಹಂತದ ನಾಯಕರ ನಿರೀಕ್ಷೆಯ ಮೇಲೆ ಪರಿಣಾಮ ಬೀರಿದೆ ಎಂದು ಮೂಲಗಳು ತಿಳಿಸಿವೆ.

ಕಾಂತೇಶ್‌ಗೆ ಬಿಜೆಪಿ ಟಿಕೆಟ್ ನೀಡಲಿದೆ ಎಂದು ಆಯನೂರು ಮಂಜುನಾಥ್‌ ಬಹಿರಂಗವಾಗಿಯೇ ಸವಾಲು ಹಾಕಿದ್ದರು. ಈಶ್ವರಪ್ಪ ವಂಶ ರಾಜಕಾರಣವನ್ನು ಮುಂದುವರಿಸುತ್ತಿದ್ದಾರೆ ಎಂದು ಆರೋಪಿಸಿದರು. ಬಿಜೆಪಿಯ ಆಂತರಿಕ ಕಲಹ ಕಾಂಗ್ರೆಸ್‌ನಲ್ಲಿ ನಿರೀಕ್ಷೆ ಹೆಚ್ಚಿಸಿದೆ, ಪಕ್ಷದಲ್ಲಿ 11 ಮಂದಿ ಆಕಾಂಕ್ಷಿಗಳಿದ್ದು, ಅಚ್ಚರಿಯ ನಡೆಯಲ್ಲಿ ಕೆಲವರು ಇತ್ತೀಚೆಗೆ ಬಹಿರಂಗವಾಗಿ ಮಂಜುನಾಥ್ ಅವರನ್ನುಕಾಂಗ್ರೆಸ್ ಪಕ್ಷಕ್ಕೆ ಸೇರುವಂತೆ ಕೋರಿದ್ದಾರೆ. ತಮ್ಮ ಸ್ಪರ್ಧೆ ಕುರಿತು ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿರುತ್ತೇವೆ ಎಂದೂ  ಆಕಾಂಕ್ಷಿಗಳು ಹೇಳಿದ್ದಾರೆ.

ಕಳೆದ ಹಲವಾರು ಚುನಾವಣೆಗಳಲ್ಲಿ, ಬಿಜೆಪಿಯು ಪ್ರಮುಖ ಸಮುದಾಯಗಳಾದ ಬ್ರಾಹ್ಮಣರು, ಲಿಂಗಾಯತರು, ಒಕ್ಕಲಿಗರು ಮತ್ತು ಇತರ ಸಣ್ಣ ಸಮುದಾಯಗಳಾದ ಕ್ಷತ್ರಿಯರು, ದರ್ಜಿ ಮರಾಠರು, ಮಾರ್ವಾಡಿಗಳು ಮತ್ತು ತಮಿಳರ ಬೆಂಬಲವನ್ನು ಗಳಿಸಲು ಹಿಂದೂ ಕಾರ್ಡ್ ಅನ್ನು ಆಡಿದರು. ಕ್ಷೇತ್ರದಲ್ಲಿ ಮುಸ್ಲಿಂ ಮತ್ತು ಎಸ್‌ಸಿ/ಎಸ್‌ಟಿ ಮತದಾರರು ಗಣನೀಯ ಸಂಖ್ಯೆಯಲ್ಲಿದ್ದಾರೆ.

ನಮ್ಮ ಪಕ್ಷ ಲಿಂಗಾಯತ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ, ಇಡೀ ಸಮುದಾಯ ನಮ್ಮೊಂದಿಗೆ ಬರುವುದರಿಂದ ಗೆಲುವಿನ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ಹೆಸರು ಹೇಳಲಿಚ್ಛಿಸದ ಕಾಂಗ್ರೆಸ್ ಹಿರಿಯ ನಾಯಕರೊಬ್ಬರು ಭವಿಷ್ಯ ನುಡಿದಿದ್ದಾರೆ. ಕಳೆದ ನಾಲ್ಕು ದಶಕಗಳಲ್ಲಿ ಬಿಜೆಪಿಯ ಭದ್ರಕೋಟೆಯಾಗಿರುವ ಈ ಕ್ಷೇತ್ರದಲ್ಲಿ 1999ರಲ್ಲಿ ಕಾಂಗ್ರೆಸ್‌ನ ಎಚ್‌ಎಂ ಚಂದ್ರಶೇಖರಪ್ಪ ಮಾತ್ರ ಗೆದ್ದಿದ್ದರು.

Related Stories

No stories found.

Advertisement

X
Kannada Prabha
www.kannadaprabha.com