189 ಅಭ್ಯರ್ಥಿಗಳ ಬಿಜೆಪಿ ಪಟ್ಟಿ ಬಿಡುಗಡೆ: ಟಿಕೆಟ್ ವಂಚಿತರು & ಸ್ಪರ್ಧಿಸಲು ಅವಕಾಶ ಪಡೆದ ಅಭ್ಯರ್ಥಿಗಳು ಇವರು

ಕೊನೆಗೂ ಬಿಜಿಪಿ ಹೈಕಮಾಂಡ್ ಒಪ್ಪಿಗೆ ಮೇರೆಗೆ ಕರ್ನಾಟಕ ವಿಧಾನಸಭೆ ಚುನಾವಣೆಗೆ 189 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. 52 ಕ್ಷೇತ್ರಗಳಿಗೆ ಹೊಸ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ. ಕೆಲವು ಹಾಲಿ ಶಾಸಕರು, ಸಚಿವರುಗಳಿಗೆ ಟಿಕೆಟ್ ಕೈತಪ್ಪಿ ಹೋಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು/ನವದೆಹಲಿ: ಕೊನೆಗೂ ಬಿಜಿಪಿ ಹೈಕಮಾಂಡ್ ಒಪ್ಪಿಗೆ ಮೇರೆಗೆ ಕರ್ನಾಟಕ ವಿಧಾನಸಭೆ ಚುನಾವಣೆಗೆ 189 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. 52 ಕ್ಷೇತ್ರಗಳಿಗೆ ಹೊಸ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ. ಇನ್ನು ಕೆಲವು ಹಾಲಿ ಶಾಸಕರು, ಸಚಿವರುಗಳಿಗೆ ಟಿಕೆಟ್ ಕೈತಪ್ಪಿ ಹೋಗಿದೆ.

ಘೋಷಣೆಯಾಗಿರುವ ಅಭ್ಯರ್ಥಿಗಳ ಪೈಕಿ 32 ಅಭ್ಯರ್ಥಿಗಳು ಒಬಿಸಿ, 30 ಅಭ್ಯರ್ಥಿಗಳು ಪರಿಶಿಷ್ಟ ಜಾತಿ ಮತ್ತು 16 ಅಭ್ಯರ್ಥಿಗಳು ಪರಿಶಿಷ್ಟ ವರ್ಗಗಗಳಿಗೆ ಸೇರಿದವರಾಗಿದ್ದಾರೆ. ಹೊಸ ತಲೆಮಾರಿನ ನಾಯಕತ್ವ ಮತ್ತು ಹೊಸ ಆಲೋಚನೆಗಳನ್ನು ಹೊಂದಿರುವ ಅಭ್ಯರ್ಥಿಗಳು ಮುಂದಿನ ದಿನಗಳಲ್ಲಿ ಪಕ್ಷವನ್ನು ಮುನ್ನಡೆಸಿಕೊಂಡು ಹೋಗುವಂತೆ ಟಿಕೆಟ್ ನೀಡಲಾಗಿದೆ ಎಂದು ನಿನ್ನೆ ಪಟ್ಟಿ ಬಿಡುಗಡೆ ನಂತರ ಕರ್ನಾಟಕದಲ್ಲಿ ಪಕ್ಷದ ಚುನಾವಣಾ ಮುಖ್ಯಸ್ಥರಾಗಿರುವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. 

ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಇದೇ 13ರಂದು ಆರಂಭವಾಗಿ ಏಪ್ರಿಲ್ 20ರವರೆಗೆ ಮುಂದುವರಿಯಲಿದೆ. 224 ವಿಧಾನಸಭೆ ಕ್ಷೇತ್ರಗಳ ಪೈಕಿ ಬಹುಮತವನ್ನು ಗೆದ್ದು ದಕ್ಷಿಣ ಭಾರತದಲ್ಲಿ ಸ್ವಂತ ಬಲದ ಮೇಲೆ ಅಧಿಕಾರ ಪಡೆಯಲು ಬಿಜೆಪಿ ಪ್ರಯತ್ನಿಸುತ್ತಿದೆ.

ಟಿಕೆಟ್ ಕೈತಪ್ಪಿದ ನಾಯಕರು: 
ಮುದ್ದಹನುಮೇಗೌಡಗೆ – ಕುಣಿಗಲ್ ಕ್ಷೇತ್ರ
ಶಾಸಕ ಲಾಲಾಜಿ‌ ಮೆಂಡನ್ – ಕಾಪು ಕ್ಷೇತ್ರ
ಹಾಲಿ ಶಾಸಕ ಸಂಜೀವ ಮಟಂದೂರ್ – ಪುತ್ತೂರು ಕ್ಷೇತ್ರ
ಎಸ್ ಅಂಗಾರ- ಸುಳ್ಯ ಕ್ಷೇತ್ರ
ಅನಿಲ್ ಬೆನಕೆ (ಬೆಳಗಾವಿ ಉತ್ತರ), 
ರಘುಪತಿ ಭಟ್ (ಉಡುಪಿ), 
ಹಾಲಾಡಿ ಶ್ರೀನಿವಾಸ ಶೆಟ್ಟಿ (ಕುಂದಾಪುರ), 
ರಾಮಣ್ಣ ಲಮಾಣಿ ( ಶಿರಹಟ್ಟಿ)

ಹೊಸ ಮುಖಗಳು: ಈ ಬಾರಿ ಹಲವು ಹೊಸ ಅಭ್ಯರ್ಥಿಗಳಿಗೆ ಬಿಜೆಪಿ ಮಣೆ ಹಾಕಿದೆ
ಬೆಳಗಾವಿ ಉತ್ತರ – ರವಿ ಪಾಟೀಲ
ಸವದತ್ತಿ- ಶ್ರೀಮತಿ ರತ್ನ ಮಹಾಮನಿ
ಚಿತ್ತಾಪುರ -ಮಣಿಕಂಠ
ಚಿಂಚೊಳ್ಳಿ- ಅವಿನಾಶ್ ಜಾಧವ್
ಶಿರಹಟ್ಟಿ- ಚಂದ್ರು ಲಮಾಣಿ
ರಾಮದುರ್ಗ- ಎಸ್ ಸರ್ ಚಿಕ್ಕರೇವಣ್ಣ
ಹಡಗಲಿ- ಕೃಷ್ಣ ನಾಯಕ್
ವಿಜಯನಗರ – ಸಿದ್ಧಾರ್ಥ ಸಿಂಗ್
ಸಿರಗುಪ್ಪ -ಸೋಮಲಿಂಗಪ್ಪ
ಹೊಸದುರ್ಗ- ಲಿಂಗಮೋರ್ತಿ
ಹರಿಹರ- ಬಿ.ಪಿ ಹರೀಶ್
ಶಿಕಾರಿಪುರ- ಬಿವೈ ವಿಜಯೇಂದ್ರ
ಕುಂದಾಪುರ- ಕಿರಣ್ ಕುಮಾರ್
ಉಡುಪಿ- ಯಶ್ ಪಾಲ್ ಸುವರ್ಣ
ಕುಣಿಗಲ್- ಕೃಷ್ಣ ಕುಮಾರ್
ಶಿರಾ- ರಾಜೇಶ್ ಗೌಡ
ಮಧುಗಿರಿ- ಎಲ್ .ಸಿ ನಾಗರಾಜ್
ಬಾಗೇಪಲ್ಲಿ -ಎಸ್ ಸಿ ಮುನಿರಾಜ್
ಮುಳಬಾಗಿಲು- ಸೀಗೇಹಳ್ಳಿ ಸುಂದರ್
ಬ್ಯಾಟರಾಯನಪುರ- ತಮ್ಮೇಶ್ ಗೌಡ
ಪುಲಿಕೇಶಿನಗರ- ಮುರುಳಿ
ಸರ್ವಜ್ಥನಗರ- ಪದ್ಮನಾಭ ರಡ್ಡಿ
ಶಾಂತಿ ನಗರ- ಶಿವಕುಮಾರ್
ಶಿವಾಜಿ ನಗರ- ಎನ್ ಚಂದ್ರ
ಚಾಮರಾಜ ಪೇಟೆ – ಭಾಸ್ಕರ್ ರಾವ್
ಜಯನಗರ -ಸಿ ಕೆ ರಾಮಮೂರ್ತಿ
ಆನೆಕಲ್- ಹುಲ್ಲಹಳ್ಳಿ ಶ್ರೀನಿವಾಸ್
ದೊಡ್ಡಬಳ್ಳಾಪುರ- ಧೀರಜ್
ರಾಮನಗರ- ಗೌತಮ ಗೌಡ
ಮಾಗಡಿ- ಪ್ರಸಾದ್ ಗೌಡ
ಮಂಡ್ಯ- ಅಶೋಕ್ ಜೈರಾಮ್
ನಾಗಮಂಗಲ – ಶಿವರಾಮೇಗೌಡ ಪತ್ನಿಗೆ ಟಿಕೆಟ್
ಅರಕಲಗೂಡು- ಯೋಗಾ ರಮೇಶ್
ಸಕಲೇಶಪುರ- ಸಿಮೆಂಟ್ ಮಂಜು
ಪುತ್ತೂರು- ಆಶಾ ತಿಮ್ಮಪ್ಪ
ಸುಳ್ಯ- ಭಾಗೀರಥಿ ಮುರುಳ್ಯ
ಪಿರಿಯಾಪಟ್ಟಣ- ವಿಜಯಶಂಕರ್
ಚಾಮುಂಡೇಶ್ವರಿ- ಕವೀಶ್ ಗೌಡ
ಹನೂರು- ಪ್ರೀತಮ್ ನಾಗಪ್ಪ

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com