ದೇವೇಗೌಡರು ಮಾತ್ರ ನಮಗೆ ಸರ್ವೊಚ್ಛ ನಾಯಕ: ಎಚ್ ಡಿಕೆಗೆ ರೇವಣ್ಣ ಟಾಂಗ್
ಹಾಸನ: ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ವಿಚಾರವಾಗಿ ಯಾವುದೇ ಗೊಂದಲವಿಲ್ಲ. ಅದು ನನಗೆ ಮತ್ತು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರಿಗೆ ಮಾತ್ರ ಗೊತ್ತು ಎಂದು ಮಾಜಿ ಸಚಿವ ಎಚ್ ಡಿ ರೇವಣ್ಣ ಅವರು ಬುಧವಾರ ಹೇಳಿದ್ದಾರೆ.
ಇಂದು ಜಿಲ್ಲೆಯ ಹೊಳೆನರಸೀಪುರ ಪಟ್ಟಣದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ರೇವಣ್ಣ ಅವರು, ದೇವೇಗೌಡರು ಮಾತ್ರ ನಮಗೆ ಸರ್ವೊಚ್ಛ ನಾಯಕರು. ನಾನು ಈಗಾಗಲೇ ಅವರ ಬಳಿ ಹೇಳಿದ್ದೇನೆ. ಅವರು ಏನು ಹೇಳುತ್ತಾರೆ ಅದಕ್ಕೆ ನಾನು ಬದ್ಧನಾಗಿದ್ದೇನೆ ಎಂದು ಹೇಳುವ ಮೂಲಕ, ತಮ್ಮ ಸಹೋದರ, ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅವರಿಗೆ ಟಾಂಗ್ ನೀಡಿದ್ದಾರೆ.
ದೇವೇಗೌಡರು ಪ್ರಧಾನಿ ಆದಾಗ ಮಾಡಿದ ಅಭಿವೃದ್ಧಿಯಿಂದಾಗಿ ಈಗ ಗಾರ್ಮೆಂಟ್ಸ್ಗಳಲ್ಲಿ 60 ಸಾವಿರ ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹೊಳೆನರಸೀಪುರ ಕ್ಷೇತ್ರದಲ್ಲೂ ಕೂಡ 15 ಸಾವಿರ ಮಹಿಳೆಯರಿಗೆ ಉದ್ಯೋಗ ಕೊಡುವ ಗಾರ್ಮೆಂಟ್ಸ್ ತರುತ್ತೇವೆ ಎಂದರು.
ರಾಜ್ಯದಲ್ಲಿ ಜೆಡಿಎಸ್ ಬಿಟ್ಟು ಯಾರೂ ಸರ್ಕಾರ ಮಾಡೋಕೆ ಆಗಲ್ಲ. ನಮ್ಮ ಪಕ್ಷಕ್ಕೆ 123 ಸ್ಥಾನ ಬರುತ್ತೆ. ಇವತ್ತೇ ಬರೆದಿಟ್ಟುಕೊಳ್ಳಿ ಎಂದು ರೇವಣ್ಣ ಭವಿಷ್ಯ ನುಡಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ