ಚಾಮುಂಡೇಶ್ವರಿ ಗೆಲ್ಲಲು ಮೂರು ಪಕ್ಷಗಳ ಜಟಾಪಟಿ: ಹ್ಯಾಟ್ರಿಕ್‌ ಹೊಸ್ತಿಲಲ್ಲಿರುವ ಜಿಟಿಡಿಗೆ ಕಾಂಗ್ರೆಸ್ ಪ್ರಬಲ ಪೈಪೋಟಿ!

ಜಿ.ಟಿ ದೇವೇಗೌಡರು ಒಕ್ಕಲಿಗ ಸಮುದಾಯದ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಹ್ಯಾಟ್ರಿಕ್ ಸಾಧಿಸಲು ಹವಣಿಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ವರ್ಚಸ್ಸಿನ ಮೇಲೆ ಹಾಗೂ ತಮ್ಮ ಸ್ವಂತ ಅನುಭವದ ಮೇಲೆ ಮತ್ತೊಮ್ಮೆ ಚುನಾವಣೆಯಲ್ಲಿ ಭಾರಿ ಅಂತರದಿಂದ ಗೆಲ್ಲುವ ವಿಶ್ವಾಸವಿದೆ.
ಜಿ.ಟಿ ದೇವೇಗೌಡ
ಜಿ.ಟಿ ದೇವೇಗೌಡ

ಮೈಸೂರು: 2018ರಲ್ಲಿ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭಾರಿ ಅಂತರದಿಂದ ಸೋಲಿಸಿ ಜೆಡಿಎಸ್ ನಾಯಕ ಜಿ ಟಿ ದೇವೇಗೌಡ ದೈತ್ಯ ನಾಯಕನಾಗಿ ಹೊರಹೊಮ್ಮಿ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ಮತ್ತೆ ತೀವ್ರ ಪೈಪೋಟಿಗೆ ಅಣಿಯಾಗಿದೆ.

ಕಾಂಗ್ರೆಸ್ ಮತ್ತು ಜೆಡಿಎಸ್  ಪಕ್ಷಗಳ ಪಾರಂಪರಿಕ ರಣರಂಗವಾಗಿರುವ ಕ್ಷೇತ್ರ ಇದೇ ಮೊದಲ ಬಾರಿಗೆ ತ್ರಿಕೋನ ಸಮರಕ್ಕೆ ಸಜ್ಜಾಗಿದೆ.

ಜಿ.ಟಿ ದೇವೇಗೌಡರು ಒಕ್ಕಲಿಗ ಸಮುದಾಯದ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಹ್ಯಾಟ್ರಿಕ್ ಸಾಧಿಸಲು ಹವಣಿಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ವರ್ಚಸ್ಸಿನ ಮೇಲೆ ಹಾಗೂ ತಮ್ಮ ಸ್ವಂತ ಅನುಭವದ ಮೇಲೆ ಮತ್ತೊಮ್ಮೆ ಚುನಾವಣೆಯಲ್ಲಿ ಭಾರಿ ಅಂತರದಿಂದ ಗೆಲ್ಲುವ ವಿಶ್ವಾಸವಿದೆ.

ಆದರೆ, ಜೆಡಿಎಸ್ ನಾಯಕರೊಂದಿಗಿನ ದೇವೇಗೌಡರ ಬಹಿರಂಗ ಪೈಪೋಟಿ ಮತ್ತು ಬಿಜೆಪಿ ಮತ್ತು ಕಾಂಗ್ರೆಸ್‌ನೊಂದಿಗಿನ ಅವರ ಒಡನಾಟವು ಕಾರ್ಯಕರ್ತರಿಗೆ ಸರಿಯಾಗಿ ಕಂಡಿಲ್ಲ, ಕಾಂಗ್ರೆಸ್‌ಗೆ ಸೇರುವ ಅವರ ಕ್ರಮವು ಅವರ ಸ್ವಂತ ಪಕ್ಷದವರಿಂದಲೇ ಟೀಕೆಗೆ ಒಳಗಾಯಿತು. ಕುಮಾರಸ್ವಾಮಿ ಜಿ.ಟಿ ದೇವೇಗೌಡರಿಗೆ ಟಿಕೆಟ್ ಘೋಷಿಸಿದ ನಂತರ ಎರಡನೇ ಸಾಲಿನ ಅನೇಕ  ನಾಯಕರು ಪಕ್ಷ ತೊರೆದಿದ್ದಾರೆ.

ನಾಲ್ಕು ದಶಕಗಳ ತಮ್ಮ ರಾಜಕೀಯ ಜೀವನದ ಅತ್ಯಂತ ಹೀನಾಯ ಸೋಲಿನ ರುಚಿ ಕಂಡಿರುವ ಸಿದ್ದರಾಮಯ್ಯನವರು ಅದನ್ನು ಜಿ. ಟಿ ದೇವೇಗೌಡರಿಗೆ ವಾಪಸ್ ಕೊಡಲು ನಿರ್ಧರಿಸಿದ್ದಾರೆ. ಹೀಗಾಗಿ ನಾನೇ (ಸಿದ್ದರಾಮಯ್ಯ) ಅಭ್ಯರ್ಥಿ ಎಂದು ಭಾವಿಸಿ ಕಾಂಗ್ರೆಸ್ ಅಭ್ಯರ್ಥಿ ಮಾವಿನಹಳ್ಳಿ ಸಿದ್ದೇಗೌಡ ಅವರನ್ನು ಬೆಂಬಲಿಸುವಂತೆ ಮತದಾರರಲ್ಲಿ ಮನವಿ ಮಾಡಿದ್ದಾರೆ.

ಒಕ್ಕಲಿಗರು, ದಲಿತರು, ನಾಯಕರು, ಕುರುಬರು ಮತ್ತು ಮುಸ್ಲಿಮರ ಪ್ರಾಬಲ್ಯವಿರುವ ಕ್ಷೇತ್ರವು 1952 ರಿಂದ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಭದ್ರಕೋಟೆಯಾಗಿ ಉಳಿದಿದೆ. ಸಿದ್ದರಾಮಯ್ಯ 1983 ರಲ್ಲಿ ಲೋಕದಳದ ಬೆಂಬಲದೊಂದಿಗೆ ಸ್ವತಂತ್ರವಾಗಿ ಸ್ಪರ್ಧಿಸಿ ಉಪಚುನಾವಣೆ ಸೇರಿದಂತೆ ಐದು ಬಾರಿ ಗೆದ್ದರು. 2006 ರಲ್ಲಿ 267 ಮತಗಳ ಕಡಿಮೆ ಅಂತರದಲ್ಲಿ ಗೆಲುವು ಸಾಧಿಸಿದರು. ಹೀಗಾಗಿ ಸಿದ್ದರಾಮಯ್ಯ ಅವರ ವರ್ಚಸ್ಸಿನ ಮೇಲೆ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವ ಕಾಂಗ್ರೆಸ್ ಜಿ.ಟಿ ದೇವೇಗೌಡರನ್ನು ಮಣಿಸಲು ಯೋಜನೆ ರೂಪಿಸಿದೆ.

ವರುಣಾ ಕ್ಷೇತ್ರ ರಚನೆಯಾದ ಬಳಿಕ 2009ರಲ್ಲಿ ಎರಡು ಬಾರಿ ಸಿದ್ದರಾಮಯ್ಯ, 2018ರಲ್ಲಿ ಮಗ ಯತೀಂದ್ರ ಒಂದು ಬಾರಿ ಸ್ಪರ್ಧಿಸಿದ್ದರು. ಆದರೆ ಚಾಮುಂಡೇಶ್ವರಿ ಕ್ಷೇತ್ರದ ಜನರೊಂದಿಗೆ ಸಿದ್ದರಾಮಯ್ಯ ಭಾವನಾತ್ಮಕ ನಂಟು ಹೊಂದಿದ್ದಾರೆ.  ಜೆಡಿಎಸ್‌ನ ಬಂಡಾಯದ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ.

ಜಿ.ಟಿ ದೇವೇಗೌಡರ ನಾಯಕತ್ವದ ವಿರುದ್ಧ ಬಂಡಾಯವೆದ್ದಿರುವ ಹಾಗೂ ಕಾಂಗ್ರೆಸ್‌ನಲ್ಲಿ ಟಿಕೆಟ್‌ ಆಕಾಂಕ್ಷಿಗಳು ಮತ್ತು ಜೆಡಿಎಸ್‌ನಿಂದ ಪಕ್ಷಾಂತರಗೊಂಡಿರುವವರ ಜತೆ ಸಿದ್ದರಾಮಯ್ಯ ಮಾತುಕತೆ ನಡೆಸಿ, ಜೆಡಿಎಸ್‌ನಿಂದ ಸೀಟು ಕಸಿದುಕೊಳ್ಳಲು ಒಗ್ಗಟ್ಟಿನ ಮಂತ್ರ ಜಪಿಸುವಂತೆ ಸೂಚನೆ ನೀಡಿದ್ದಾರೆ.

ಹಳೇ ಮೈಸೂರಿನ ಮೇಲೆ ಕಣ್ಣಿಟ್ಟಿರುವ ಬಿಜೆಪಿ, ನಗರ ಹಾಗೂ ಗ್ರಾಮಾಂತರ ಮತಗಳನ್ನು ಗಳಿಸುವ ವಿಶ್ವಾಸದಿಂದ ಯುವ ಶಿಕ್ಷಣ ತಜ್ಞ ಕವೀಶ್ ಗೌಡ ಅವರನ್ನು ಚಾಮುಂಡೇಶ್ವರಿಯಲ್ಲಿ ಕಣಕ್ಕಿಳಿಸಿದೆ.ಕಾಂಗ್ರೆಸ್ ನ ಮಾಜಿ ಶಾಸಕ ವಾಸು ಅವರ ಪುತ್ರ ಕವೀಶ್ ಗೌಡ ಯುವಕರನ್ನು ಸಂಘಟಿಸಿ ಪಕ್ಷಕ್ಕೆ ದಾರಿ ಮಾಡಲು ತಂತ್ರ ರೂಪಿಸುತ್ತಿದೆ. 2008 ರ ಚುನಾವಣೆಯಲ್ಲಿ ಬಿಜೆಪಿಯ ಮಂಜೇಗೌಡ ಅವರು 41 ಸಾವಿರ ಮತಗಳನ್ನು ಗಳಿಸಿದ್ದರು.

ಕಾಂಗ್ರೆಸ್‌ನೊಳಗಿನ ಭಿನ್ನಾಭಿಪ್ರಾಯ, ಟಿಕೆಟ್‌ ಆಕಾಂಕ್ಷಿಗಳ ನಡುವಿನ ಶೀತಲ ಸಮರ ಮತ್ತು ದೇವೇಗೌಡರ ವಿರುದ್ಧ ಚಾಲ್ತಿಯಲ್ಲಿರುವ ಆಡಳಿತ ವಿರೋಧಿ ಅಂಶಗಳು ಕೆಲಸ ಮಾಡಲಿದ್ದು ಯುವಕರು ಮತ್ತು ಹೊಸ ಮುಖವನ್ನು ಜನ ಬಯಸುತ್ತಿದ್ದಾರೆ ಎಂದು ಬಿಜೆಪಿ ಹೇಳುತ್ತದೆ. ಆದರೆ, ಮೂವರು ಒಕ್ಕಲಿಗ ಅಭ್ಯರ್ಥಿಗಳು ಒಕ್ಕಲಿಗೇತರರ ಮತದಾರರ ಬಾಗಿಲು ತಟ್ಟುತ್ತಿದ್ದಾರೆ. ಯಾರು ಅತಿ ಹೆಚ್ಚು ಮತ ಗಳಿಸುತ್ತಾರೋ ಅವರು ಗೆಲುವಿನ ನಗೆ ಬೀರಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com