ಗದಗ ಗೆಲ್ಲಲು ಸಿಎಂ ಹುದ್ದೆ ಆಕಾಂಕ್ಷಿ ಎಚ್.ಕೆ.ಪಿ ದಾಪುಗಾಲು: ಪಾಟೀಲ್ 'ಹ್ಯಾಟ್ರಿಕ್' ಕನಸಿಗೆ ಅನಿಲ್ ಅಡ್ಡಗಾಲು!

ಕಾಂಗ್ರೆಸ್ ಭದ್ರಕೋಟೆಯಾಗಿರುವ ಗ್ರಾಮೀಣ ಪ್ರದೇಶದಲ್ಲಿ ಅನಿಲ್ ಮೆಣಸಿನಕಾಯಿ ತಂಡ ಭರ್ಜರಿ ಪ್ರಚಾರ ನಡೆಸುತ್ತಿದೆ. ಪಾಟೀಲರ ತಂಡ ಎಲ್ಲ ಗ್ರಾಮ ಹಾಗೂ ನಗರ ಪ್ರದೇಶಗಳಲ್ಲಿ ಮನೆ ಮನೆಗೆ ತೆರಳಿ ವಿವಿಧ ಸಮುದಾಯದ ಜನರನ್ನು ಓಲೈಸಲು ಸಭೆಗಳನ್ನು ಆಯೋಜಿಸುತ್ತಿದೆ.
ಎಚ್.ಕೆ ಪಾಟೀಲ್ ಮತ್ತು ಅನಿಲ್ ಮೆಣಸಿನಕಾಯಿ
ಎಚ್.ಕೆ ಪಾಟೀಲ್ ಮತ್ತು ಅನಿಲ್ ಮೆಣಸಿನಕಾಯಿ

ಗದಗ: ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಪೈಪೋಟಿಗಿಂತ ಗದಗ ಕ್ಷೇತ್ರ ಸತತ ಮೂರನೇ ಬಾರಿಗೆ ಇಬ್ಬರು ವ್ಯಕ್ತಿಗಳ ನೇರ ಹಣಾಹಣಿಗೆ ಸಾಕ್ಷಿಯಾಗಿದೆ. ಬಿಜೆಪಿಯ ಅನಿಲ್ ಮೆಣಸಿನಕಾಯಿ ವಿರುದ್ಧ ಕಾಂಗ್ರೆಸ್ ಹಿರಿಯ ನಾಯಕ ಎಚ್‌ಕೆ ಪಾಟೀಲ್ ಕಣಕ್ಕಿಳಿಯಲಿದ್ದಾರೆ. ಪಾಟೀಲ್ ಅವರು ಹ್ಯಾಟ್ರಿಕ್ ಸಾಧಿಸುವ ಗುರಿಯಲ್ಲಿದ್ದರೆ, ಪಾಟೀಲ್ ಅವರಿಂದ ಸ್ಥಾನವನ್ನು ಕಸಿದುಕೊಳ್ಳಲು ಮೆಣಸಿನಕಾಯಿ ಮುಂದಾಗಿದ್ದಾರೆ.

ಕಾಂಗ್ರೆಸ್ ಭದ್ರಕೋಟೆಯಾಗಿರುವ ಗ್ರಾಮೀಣ ಪ್ರದೇಶದಲ್ಲಿ ಅನಿಲ್ ಮೆಣಸಿನಕಾಯಿ ತಂಡ ಭರ್ಜರಿ ಪ್ರಚಾರ ನಡೆಸುತ್ತಿದೆ. ಪಾಟೀಲರ ತಂಡ ಎಲ್ಲ ಗ್ರಾಮ ಹಾಗೂ ನಗರ ಪ್ರದೇಶಗಳಲ್ಲಿ ಮನೆ ಮನೆಗೆ ತೆರಳಿ ವಿವಿಧ ಸಮುದಾಯದ ಜನರನ್ನು ಓಲೈಸಲು ಸಭೆಗಳನ್ನು ಆಯೋಜಿಸುತ್ತಿದೆ.

2013ರಲ್ಲಿ ಬಿಎಸ್‌ಆರ್‌ ಕಾಂಗ್ರೆಸ್‌ ಟಿಕೆಟ್‌ನಲ್ಲಿ ಮೆಣಸಿನಕಾಯಿ ಸ್ಪರ್ಧಿಸಿದ್ದರು, ಬಿ ಶ್ರೀರಾಮುಲು ಅವರ ಪಕ್ಷದಿಂದ ಮತಗಳು ವಿಭಜನೆಯಾಗಿ ಕಾಂಗ್ರೆಸ್‌ಗೆ ಲಾಭವಾಯಿತು. 2018ರಲ್ಲಿ ಪಾಟೀಲ್ 1,800 ಮತಗಳ ಅಂತರದಿಂದ ಗೆದ್ದಿದ್ದರು.

ಬಹುಕಾಲದಿಂದ ಸಿಎಂ ರೇಸ್‌ನಲ್ಲಿರುವ ಕಾಂಗ್ರೆಸ್‌ನ ಹಿರಿಯ ನಾಯಕನಿಗೆ ಯುವ ನಾಯಕರೊಬ್ಬರು ತೀವ್ರ ಪೈಪೋಟಿ ನೀಡಿರುವುದು ರಾಜಕೀಯ ವೀಕ್ಷಕರಲ್ಲಿ ಅಚ್ಚರಿ ಮೂಡಿಸಿದೆ. ಗದಗದಲ್ಲಿ ಈ ಬಾರಿ ಮೆಣಸಿನಕಾಯಿ ಅವರಿಗೆ ಕ್ಷೇತ್ರದ ಸೇವೆ ಮಾಡಲು ಅವಕಾಶ ನೀಡಬೇಕು ಎಂಬುದು ಒಂದು ವರ್ಗದ ಜನರ ಅನಿಸಿಕೆ.

ಕಳೆದ ಐದಾರು ದಶಕಗಳಿಂದ ಪಾಟೀಲ ಕುಟುಂಬ ಅಧಿಕಾರದಲ್ಲಿದೆ. ಎಚ್‌ಕೆ ಪಾಟೀಲ್ ಅವರು ಎಂಎಲ್‌ಸಿ ಆಗಿದ್ದು, ಕಳೆದ ಎರಡು ದಶಕಗಳಲ್ಲಿ ಕೆಲವು ಸಚಿವ ಸ್ಥಾನ ನಿಭಾಯಿಸಿದ್ದಾರೆ. ಆರ್ ಡಿಪಿಆರ್ ವಿಶ್ವವಿದ್ಯಾಲಯ, ಉತ್ತರ ಕರ್ನಾಟಕದ ಮೊದಲ 3ಡಿ ತಾರಾಲಯ ಸೇರಿದಂತೆ ಹಲವು ಯೋಜನೆಗಳನ್ನು ಗದಗಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಕೋರೋನಾ ಸಾಂಕ್ರಾಮಿಕ ಸಮಯದಲ್ಲಿ ಸಾವಿರಾರು ಜನರಿಗೆ ಸಹಾಯ ಮಾಡಿದ್ದಾರೆ.  ಈಗ ತಮ್ಮ ಸೇವಾ ತಂಡ ಮೂಲಕ ಜನರಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಅವರ ತಂದೆ ಕೆ.ಎಚ್.ಪಾಟೀಲ್ ಕೂಡ ಸಚಿವರಾಗಿ ಸೇವೆ ಸಲ್ಲಿಸಿದ್ದರು.  ಎಚ್ ಕೆ ಪಾಟೀಲ್ ಸಹೋದರ ಡಿ.ಆರ್.ಪಾಟೀಲ್ ಶಾಸಕರಾಗಿದ್ದರು.

ಮತ್ತೊಂದೆಡೆ, ಅನಿಲ್ ಮೆಣಸಿನಕಾಯಿ ಕೂಡ ಸಾಂಕ್ರಾಮಿಕ ಸಮಯದಲ್ಲಿ ಬಹಳ ಶ್ರಮಿಸಿದ್ದಾರೆ. ಜನರ ಕಲ್ಯಾಣಕ್ಕಾಗಿ ಕೆಲವು ಅಭಿಯಾನಗಳನ್ನು ಪ್ರಾರಂಭಿಸುವ ಮೂಲಕ ಉತ್ತಮ ಹೆಸರನ್ನು ಗಳಿಸಿದ್ದಾರೆ ಎನ್ನಲಾಗಿದೆ. ಈ ಪ್ರದೇಶದಲ್ಲಿ ಯುವ ಐಕಾನ್ ಆಗಿ ಹೊರಹೊಮ್ಮಿದ್ದಾರೆ.

ಮೆಣಸಿನಕಾಯಿ ಅವರು ಗದಗ ಕ್ರಿಕೆಟ್ ಲೀಗ್ ಆಯೋಜಿಸಿ ಜಿಲ್ಲೆಯ ಹಲವು ಕ್ರೀಡಾ ಪಟುಗಳಿಗೆ ವೇದಿಕೆ ಕಲ್ಪಿಸಿದರೆ, ಎಚ್.ಕೆ.ಪಾಟೀಲ್ ಕೂಡ ತಮ್ಮ ತಂದೆಯ ಹೆಸರಿನಲ್ಲಿ ಕೆ.ಎಚ್.ಪಾಟೀಲ್ ಕ್ರಿಕೆಟ್ ಲೀಗ್ ಆಯೋಜಿಸಿದ್ದರು. ಇಬ್ಬರು ಅಭ್ಯರ್ಥಿಗಳ ಗೆಲುವಿನ ಸಾಧ್ಯತೆ 50:50 ಆಗಿದ್ದು, ಇಬ್ಬರೂ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ ಎಂದು ರಾಜಕೀಯ ವೀಕ್ಷಕರು ಅಭಿಪ್ರಾಯ ಪಟ್ಟಿದ್ದಾರೆ.

ಪಾಟೀಲ ಅವರು ಹುಲಕೋಟಿ ಪರ ಕೆಲಸ ಮಾಡಿದ್ದು, ಗದಗ, ಬೆಟಗೇರಿ ನಿವಾಸಿಗಳ ಮೂಲ ಸೌಕರ್ಯಗಳು ಇಂದಿಗೂ ದೂರದ ಕನಸಾಗಿದೆ, ಹೀಗಾಗಿ ಮೆಣಸಿನಕಾಯಿ ಅವರಿಗೆ ಈ ಬಾರಿ ಅವಕಾಶ ನೀಡಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com