ಮುಸ್ಲಿಮರೇ ಅಧಿಕವಾಗಿರುವ ಶಿವಾಜಿನಗರದಲ್ಲಿ 'ತಮಿಳು' ಮತಗಳೇ ನಿರ್ಣಾಯಕ: ರಿಜ್ವಾನ್ ಅರ್ಷದ್ ಸೋಲಿಸಲು 'ಬೇಗ್' ಹಿಮ್ಮೇಳ!

ಸುಸ್ಥಿತಿಯಲ್ಲಿರುವ ವಾರ್ಡ್ ಗಳು ಮತ್ತು ಕೊಳೆಗೇರಿಗಳ ಮಿಶ್ರಣವಾಗಿರುವ ಶಿವಾಜಿನಗರ ವಿಧಾನಸಭಾ ಕ್ಷೇತ್ರವು ಎರಡು ದಶಕಗಳಿಗೂ ಹೆಚ್ಚು ಕಾಲ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದೆ.
ರಿಜ್ವಾನ್ ಅರ್ಷದ್
ರಿಜ್ವಾನ್ ಅರ್ಷದ್

ಬೆಂಗಳೂರು: ಸುಸ್ಥಿತಿಯಲ್ಲಿರುವ ವಾರ್ಡ್ ಗಳು ಮತ್ತು ಕೊಳೆಗೇರಿಗಳ ಮಿಶ್ರಣವಾಗಿರುವ ಶಿವಾಜಿನಗರ ವಿಧಾನಸಭಾ ಕ್ಷೇತ್ರವು ಎರಡು ದಶಕಗಳಿಗೂ ಹೆಚ್ಚು ಕಾಲ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದೆ.

ಅಲ್ಪಸಂಖ್ಯಾತ ಸಮುದಾಯದ ಪ್ರಬಲ ನಾಯಕ ರೋಷನ್ ಬೇಗ್ ಐಎಂಎ ಹಗರಣದಲ್ಲಿ ಸಿಲುಕಿ ಅನರ್ಹತೆ ಎದುರಿಸಿದ ನಂತರ, 2019 ರ ಉಪಚುನಾವಣೆಯಲ್ಲಿ ರಿಜ್ವಾನ್ ಅರ್ಷದ್ ಗೆಲುವು ಸಾಧಿಸಿದರು.

ರಾಮಸ್ವಾಮಿಪಾಳ್ಯ, ಜಯಮಹಲ್, ಹಲಸೂರು, ಭಾರತಿನಗರ, ಶಿವಾಜಿನಗರ, ವಸಂತನಗರ ಮತ್ತು ಸಂಪಂಗಿರಾಮ ನಗರಗಳ ಬಿಬಿಎಂಪಿ ವಾರ್ಡ್‌ಗಳನ್ನು ಒಳಗೊಂಡಿರುವ ಈ ವಿಭಾಗವು ಮುಸ್ಲಿಂ ಜನಸಂಖ್ಯೆಯ ಪ್ರಾಬಲ್ಯವನ್ನು ಹೊಂದಿದೆ, ಕ್ರಿಶ್ಚಿಯನ್ ಮತ್ತು ತಮಿಳು ಮಾತನಾಡುವ ಜನಸಂಖ್ಯೆಯು ಅವಿಭಾಜ್ಯ ಅಂಗವಾಗಿದೆ.

ಈ ಹಿಂದೆ  ಶಿವಾಜಿನಗರದ ಕಾಂಗ್ರೆಸ್ ಭದ್ರಕೋಟೆಯಾಗಿದ್ದರು ಜನತಾ ಪಕ್ಷ ಕೂಡ ಪ್ರಬಲ ಅಸ್ತಿತ್ವ ಹೊಂದಿದೆ. ರೋಷನ್ ಬೇಗ್ ಇಲ್ಲಿ ದೀರ್ಘಕಾಲದಿಂದ ಕಾಂಗ್ರೆಸ್ ಜ್ಯೋತಿ ಬೆಳಗಿಸುತ್ತಿದ್ದರು. ಇಲ್ಲಿ ನಡೆದ 13 ಚುನಾವಣೆಗಳಲ್ಲಿ ಕಾಂಗ್ರೆಸ್ ಏಳು ಬಾರಿ, ಜನತಾ ಪಕ್ಷ ಮೂರು ಬಾರಿ ಮತ್ತು ಬಿಜೆಪಿ ಎರಡು ಬಾರಿ ಕ್ಷೇತ್ರವನ್ನು ವಶಪಡಿಸಿಕೊಂಡಿದೆ. ಈ ಭಾಗದ 2 ಲಕ್ಷ ಮತದಾರರಲ್ಲಿ 75 ಸಾವಿರಕ್ಕೂ ಹೆಚ್ಚು ಮುಸ್ಲಿಂ ಮತದಾರರಿರುವುದರಿಂದ ಇಲ್ಲಿನ ಜನರು ಒಂಬತ್ತು ಬಾರಿ ಮುಸ್ಲಿಂ ಅಭ್ಯರ್ಥಿಯನ್ನು ಶಾಸಕರಾಗಿ ಆಯ್ಕೆ ಮಾಡಿದ್ದಾರೆ.

ಕಾಂಗ್ರೆಸ್ ಹಾಲಿ ಶಾಸಕ ರಿಜ್ವಾನ್ ಅರ್ಷದ್ ಅವರನ್ನು ಕಣಕ್ಕಿಳಿಸಿದರೆ, ಬಿಜೆಪಿ ಎನ್ ಚಂದ್ರುಗೆ ಟಿಕೆಟ್ ನೀಡಿದೆ. ಜೆಡಿಎಸ್ ಅಭ್ಯರ್ಥಿಯ ನಾಮಪತ್ರ ತಿರಸ್ಕೃತಗೊಂಡಿದ್ದು, ಸದ್ಯ 21 ಅಭ್ಯರ್ಥಿಗಳು ಕಣದಲ್ಲಿದ್ದು, ಕೆಲವರು ನಾಮಪತ್ರ ಹಿಂಪಡೆಯುವ ಸಾಧ್ಯತೆ ಇದೆ.

ಮೇಲ್ನೋಟಕ್ಕೆ, ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಹೋರಾಟ ಕಂಡುಬರುತ್ತಿದೆ, ಆದರೆ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಅಪರಾಧ ಹಿನ್ನೆಲೆಯುಳ್ಳ ತನ್ವೀರ್ ಅಹ್ಮದ್, ಅರ್ಷದ್‌ಗೆ ಅಡ್ಡಿಯಾಗುತ್ತಿದ್ದಾರೆ. ಯಾವುದೇ ಪಕ್ಷದಿಂದ ಸ್ಪರ್ಧಿಸಲು ವಿಫಲವಾದ ನಂತರ ಕ್ಷೇತ್ರದಲ್ಲಿ ಮತ್ತೆ ಹಿಡಿತ ಸಾಧಿಸಲು ಬಯಸುತ್ತಿರುವ ರೋಷನ್ ಬೇಗ್ ಅಹಮದ್ ಅವರನ್ನು ಬೆಂಬಲಿಸಿದ್ದಾರೆ ಎಂದು ಹೇಳಲಾಗಿದೆ.

2019 ರ ಉಪಚುನಾವಣೆಯಲ್ಲಿ ಅರ್ಷದ್ ಅವರು ಬಿಜೆಪಿಯ ಎಂ ಶರವಣ ಅವರನ್ನು 13,521 ಮತಗಳ ಅಂತರದಿಂದ ಸೋಲಿಸುವ ಮೂಲಕ ಸ್ಥಾನವನ್ನು ಗೆದ್ದರು. ಈ ಬಾರಿ ಅವರು ಬಿಜೆಪಿ ಸರ್ಕಾರದ ವಿರುದ್ಧ ಆಡಳಿತ ವಿರೋಧಿಗಳಂತಹ ಅನುಕೂಲಗಳನ್ನು ಹೊಂದಿದ್ದಾರೆ. 

ಅಲ್ಪಸಂಖ್ಯಾತ ಸಮುದಾಯವನ್ನು ಗುರಿಯಾಗಿಸಿಕೊಂಡು ಹಿಜಾಬ್ ಮತ್ತು ಹಲಾಲ್ ನಿಷೇಧದಂತಹ ಬಿಸಿ ಬಿಸಿ ಚರ್ಚೆಗಳು  ಸಮಸ್ಯೆಗಳು ಅವರಿಗೆ ಮತಗಳಾಗಿ ಬದಲಾಗಬಹುದು. ಆದರೆ, ಕನಿಷ್ಠ ಮೂರು ವಾರ್ಡ್‌ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ತಮಿಳು ಮತದಾರರು ಅವರ ಭವಿಷ್ಯವನ್ನು ನಿರ್ಧರಿಸುವಲ್ಲಿ ದೊಡ್ಡ ಪಾತ್ರವನ್ನು ಹೊಂದಿದ್ದಾರೆ.

ಕ್ಷೇತ್ರದ ಮತದಾರರು ಅಭ್ಯರ್ಥಿಗಳ ಬಗ್ಗೆ ಮಿಶ್ರ ಪ್ರತಿಕ್ರಿಯೆ ಹೊಂದಿದ್ದು, ಸ್ವಚ್ಛತೆ, ಕಸ, ಸೋರುತ್ತಿರುವ ಒಳಚರಂಡಿ ಪೈಪ್‌ಗಳು, ನೀರು ಸರಬರಾಜು ಮುಂತಾದ ಹಲವಾರು ಮೂಲಭೂತ ಸಮಸ್ಯೆಗಳನ್ನು ಆದ್ಯತೆಯ ಮೇಲೆ ಪರಿಹರಿಸಬೇಕಾಗಿದೆ ಎಂದು ಬಹುತೇಕರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com