ಬಿಜೆಪಿ ಆಡಳಿತವಿಲ್ಲದ ರಾಜ್ಯದಲ್ಲಿ ಕೇಂದ್ರದ ಯೋಜನೆಗಳ ಜಾರಿಗೆ ಅಡ್ಡಿ, ಡಬಲ್ ಎಂಜಿನ್ ಸರ್ಕಾರ ಬಂದರೆ ಕರ್ನಾಟಕಕ್ಕೆ ಲಾಭ: ಪ್ರಧಾನಿ ಮೋದಿ

ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನು ಕೇವಲ 13 ದಿನ ಬಾಕಿ, ರಾಜ್ಯದ ಮೂರೂ ಪಕ್ಷಗಳಿಂದ ಘಟಾನುಘಟಿ ನಾಯಕರ ಅಬ್ಬರದ ಪ್ರಚಾರ ತೀವ್ರವಾಗಿದೆ. ಶತಾಯಗತಾಯ ಮತ್ತೆ ಸಂಪೂರ್ಣ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರುವ ಆಸೆ ಬಿಜೆಪಿಗೆ. 
ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸಂವಾದ ಆಲಿಸಿದ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು
ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸಂವಾದ ಆಲಿಸಿದ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು

ನವದೆಹಲಿ/ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನು ಕೇವಲ 13 ದಿನ ಬಾಕಿ, ರಾಜ್ಯದ ಮೂರೂ ಪಕ್ಷಗಳಿಂದ ಘಟಾನುಘಟಿ ನಾಯಕರ ಅಬ್ಬರದ ಪ್ರಚಾರ ತೀವ್ರವಾಗಿದೆ. ಶತಾಯಗತಾಯ ಮತ್ತೆ ಸಂಪೂರ್ಣ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರುವ ಆಸೆ ಬಿಜೆಪಿಗೆ. 

ಪ್ರಧಾನಿ ನರೇಂದ್ರ ಮೋದಿಯವರ ಚುನಾವಣಾ ಪ್ರಚಾರಕ್ಕೆ ಕರ್ನಾಟಕಕ್ಕೆ ಎಂಟ್ರಿಯಾಗಬೇಕಿದೆ. ಇದಕ್ಕೂ ಮುನ್ನ ಇಂದು ದೆಹಲಿಯಿಂದಲೇ ವರ್ಚುವಲ್ ಮೂಲಕ ರಾಜ್ಯದ 50 ಲಕ್ಷ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದರು. ಮಾತಿನುದ್ದಕ್ಕೂ ಬಿಜೆಪಿಗೆ ಕರ್ನಾಟಕ ಜನತೆ ಏಕೆ ಮತ ಹಾಕಬೇಕು, ಬಿಜೆಪಿಗೆ ಮತ ಹಾಕುವುದರಿಂದ ಕೇಂದ್ರ ಮತ್ತು ರಾಜ್ಯದಲ್ಲಿ ಡಬಲ್ ಎಂಜಿನ್ ಸರ್ಕಾರದಿಂದ ಏನೇನು ಲಾಭವಿದೆ, ಕಾಂಗ್ರೆಸ್ ಜನತೆಗೆ ಏನು ದ್ರೋಹ ಮಾಡಿದೆ ಎಂಬ ಬಗ್ಗೆ ಪ್ರತಿಪಾದಿಸಿದರು. ಬಿಜೆಪಿ ಕಾರ್ಯಕರ್ತರ ಮೂಲಕ ಕರ್ನಾಟಕ ಜನತೆಗೆ ಸ್ಪಷ್ಟ ಸಂದೇಶ ರವಾನಿಸುವ ಪ್ರಯತ್ನವನ್ನು ಪ್ರಧಾನಿ ಮೋದಿ ಇಂದು ಸಂವಾದದಲ್ಲಿ ಮಾಡಿದರು.

ತಿಯೊಂದು ಬೂತ್​ನ ಜನರ ಮನಸ್ಸು​ ಗೆದ್ದರೆ, ಚುನಾವಣೆಯಲ್ಲಿ ಸುಲಭವಾಗಿ ಗೆಲ್ಲಬಹುದು ಬೂತ್​ ಮಟ್ಟದಲ್ಲಿ ಕೆಲಸವಾಗಬೇಕು, ಪ್ರತಿ ಬೂತ್​ನ ಜನರ ಮನಸ್ಸು ಗೆದ್ದರೆ ಚುನಾವಣೆಯಲ್ಲಿ ಗೆಲ್ಲುವುದು ಸುಲಭ. ಎರಡು ದಿನಗಳ ಬಳಿಕ ನಾನು ಕೂಡ ಕಾರ್ಯಕರ್ತರ ಜತೆ ಸೇರಿ ಜನರ ಆಶೀರ್ವಾದ ಕೇಳಲು ಬರುತ್ತಿದ್ದೇನೆ ಎಂದರು. ಕರ್ನಾಟಕದಲ್ಲಿ ಎಲ್ಲಿ ಹೋಗಿದ್ದೇನೆ ಅಲ್ಲೆಲ್ಲಾ ನನಗೆ ಪ್ರೀತಿ, ಆಶೀರ್ವಾದ ಸಿಕ್ಕಿದೆ, ನನಗೆ ಯಾವುದೇ ಪದವಿ ಇಲ್ಲದಿದ್ದ ಸಂದರ್ಭದಲ್ಲೂ ಕೂಡ ಜನರು ನನಗೆ ಪ್ರೀತಿ ನೀಡಿದ್ದರು. ಈಗಲೂ ಕೂಡ ಬಿಜೆಪಿಗೆ ಜನರು ಆಶೀರ್ವಾದ ಮಾಡುತ್ತಾರೆ ಎನ್ನುವ ನಂಬಿಕೆ ಇದೆ ಎಂದರು.

ಡಬಲ್ ಎಂಜಿನ್ ಸರ್ಕಾರ ಏಕೆ ಬೇಕು?: ಕಳೆದ 9 ವರ್ಷಗಳಲ್ಲಿ, ಭಾರತವು ಪ್ರಪಂಚದಾದ್ಯಂತದ ಹೂಡಿಕೆದಾರರಿಗೆ ಪ್ರಮುಖ ಕೇಂದ್ರವಾಗಿದೆ. ಡಬಲ್ ಇಂಜಿನ್ ಸರ್ಕಾರದಿಂದಾಗಿ, ಕರ್ನಾಟಕ ಸರ್ಕಾರವು ಇದರಿಂದ ಹೆಚ್ಚಿನ ಲಾಭವನ್ನು ಪಡೆದುಕೊಂಡಿದೆ ಎಂದರು.

ಡಬಲ್​ ಇಂಜಿನ್ ಸರ್ಕಾರ ನೇರವಾಗಿ ವಿಕಾಸದ ಕಡೆಗೆ ಹೆಜ್ಜೆ ಇಡುತ್ತದೆ, ಡಬಲ್ ಇಂಜಿನ್ ಸರ್ಕಾರವಿರುವ ರಾಜ್ಯಗಳಲ್ಲಿ ಅಭಿವೃದ್ಧಿ ಕಾರ್ಯ, ಬಡತನ ನಿರ್ಮೂಲನೆ, ಯೋಜನೆಗಳ ಜಾರಿ, ಪ್ರಗತಿ ವೇಗವಾಗಿ ಆಗುತ್ತಿದೆ.

ಯಾವ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿಲ್ಲ ಆ ರಾಜ್ಯದಲ್ಲಿ ಕೇಂದ್ರದ ಯಾವ ಯೋಜನೆಯನ್ನೂ ಸಫಲವಾಗಲು ಬಿಡುತ್ತಿಲ್ಲ, ಜನರಿಗೆ ಯೋಜನೆ ತಲುಪದೇ ಇರುವಂತೆ ನೋಡಿಕೊಳ್ಳಲಾಗುತ್ತಿದೆ.

ಡಬಲ್ ಇಂಜಿನ್ ಸರ್ಕಾರದಲ್ಲಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ ರಾಜ್ಯ ಸರ್ಕಾರವು 4 ಸಾವಿರ ರೂಪಾಯಿಗಳನ್ನು ಕೇಂದ್ರ ಸರ್ಕಾರವು 10 ಸಾವಿರ ರೂಪಾಯಿ ನೀಡುತ್ತಿದೆ, ಜನರಿಗೆ ಒಟ್ಟು 10 ಸಾವಿರ ರೂಪಾಯಿ ತಲುಪುತ್ತಿದೆ, ಇದೇ ಡಬಲ್ ಇಂಜಿನ್ ಸರ್ಕಾರದ ಮಹತ್ವ ಎಂದರು.

ಇನ್ನೂ ರಾಜ್ಯದಲ್ಲಿ ಬಿಜೆಪಿ ಇಲ್ಲದಿದ್ದರೆ ರಸ್ತೆ,ಸಾರ್ವಜನಿಕ ಸಾರಿಗೆ ಸೇರಿದಂತೆ ಯಾವುದೇ ಯೋಜನೆ ಹಾಕಿಕೊಂಡರೂ ಅದಕ್ಕೆ ಜಮೀನು ಹೊಂದಿಸುವುದರಿಂದ ಹಿಡಿದು ಸಾಕಷ್ಟು ಕಷ್ಟಪಡಬೇಕು.

2014ಕ್ಕೂ ಮುನ್ನ ಆವಾಜ್​ ಯೋಜನೆಯಲ್ಲಿ ಮನೆ ನಿರ್ಮಿಸಲು 300ಕ್ಕೂ ಅಧಿಕ ದಿನ ತೆಗೆದುಕೊಳ್ಳುತ್ತಿತ್ತು ಆದರೆ ಈಗ 100 ದಿನಗಳಲ್ಲಿ ಮನೆ ನಿರ್ಮಾಣವಾಗಲಿದೆ.

ಮೊದಲು 70-80 ಸಾವಿರ ರೂ ನೀಡಲಾಗುತ್ತಿತ್ತು ಆದರೆ ಈಗ 1 ಲಕ್ಷದ 30 ಸಾವಿರ ರೂ. ನೀಡಲಾಗುತ್ತಿದೆ.

ಮೊದಲು ನಾಲ್ಕು ಗೋಡೆ ನಿರ್ಮಿಸಿ ಕೊಟ್ಟುಬಿಡುತ್ತಿದ್ದರು ಆದರೆ ಈಗ ಮನೆ ನಿರ್ಮಿಸಿ, ಅದರ ಜತೆಗೆ ಟಾಯ್ಲೆಟ್​, ವಿದ್ಯುತ್ ಸಂಪರ್ಕ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡಲಾಗುತ್ತದೆ, ಹಾಗೂ ವ್ಯಕ್ತಿಯ ಆಸೆಯಂತೆಯೇ ಮನೆ ನಿರ್ಮಾಣವಾಗುತ್ತಿದೆ. 

ವೈದ್ಯಕೀಯ ಕಾಲೇಜುಗಳ ಸಂಖ್ಯೆಯೂ 9 ವರ್ಷಗಳಲ್ಲಿ ಹೆಚ್ಚಾಗಿದೆ ಎಂದು ಬಿಜೆಪಿ ಸರ್ಕಾರ ಸಾಕಷ್ಟು ಕೆಲಸ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com