ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿಯಾಗಬೇಕು: ತುಮಕೂರು ಬಿಜೆಪಿ ಶಾಸಕ ಸುರೇಶ್ ಗೌಡ
ಇಂದು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಾಗಿದ್ದು ನಮ್ಮ ಸಮುದಾಯದ ಮುಖಂಡ ಡಿ.ಕೆ ಶಿವಕುಮಾರ್ ಅವರ ನಾಯಕತ್ವ ಕಾರಣ ಆದರೆ ಆದರೆ ಅಂತಹ ವ್ಯಕ್ತಿ ಮುಖ್ಯಮಂತ್ರಿಯಾಗುವ ಸನ್ನಿವೇಶ ಬಂದಾಗ ಅಂದು ಸಮುದಾಯದ ಯಾವುದೇ ಮುಖಂಡರು ಧ್ವನಿ ಎತ್ತಲಿಲ್ಲ ಎಂದು ತಿಳಿಸಿದರು.
Published: 12th August 2023 12:24 PM | Last Updated: 12th August 2023 04:58 PM | A+A A-

ಡಿ.ಕೆ ಶಿವಕುಮಾರ್
ತುಮಕೂರು: ಆರ್.ಅಶೋಕ ಸೇರಿದಂತೆ ಬಿಜೆಪಿ ರಾಜ್ಯ ನಾಯಕರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಭ್ರಷ್ಟಾಚಾರದ ಆರೋಪದ ಮೇಲೆ ವಾಗ್ದಾಳಿ ನಡೆಸುತ್ತಿರುವ ಹೊತ್ತಿನಲ್ಲಿ ಒಕ್ಕಲಿಗ ಸಮುದಾಯ ಧ್ವನಿ ಎತ್ತಿದ್ದರೆ ಶಿವಕುಮಾರ್ ಕರ್ನಾಟಕದ ಮುಖ್ಯಮಂತ್ರಿಯಾಗುತ್ತಿದ್ದರು ಎಂದು ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಬಿ.ಸುರೇಶ್ ಗೌಡ ಹೇಳಿದ್ದಾರೆ.
ತುಮಕೂರಿನ ಗುಬ್ಬಿ ವೀರಣ್ಣ ಕಲಾ ಕ್ಷೇತ್ರದಲ್ಲಿ ಕೆಂಪೇಗೌಡ ಜಯಂತೋತ್ಸವ ಆಚರಣ ಸಮಿತಿಯಿಂದ ಹಮ್ಮಿಕೊಂಡಿದ್ದ ಕೆಂಪೇಗೌಡರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಾಗಿದ್ದು ನಮ್ಮ ಸಮುದಾಯದ ಮುಖಂಡ ಡಿ.ಕೆ ಶಿವಕುಮಾರ್ ಅವರ ನಾಯಕತ್ವ ಕಾರಣ ಆದರೆ ಆದರೆ ಅಂತಹ ವ್ಯಕ್ತಿ ಮುಖ್ಯಮಂತ್ರಿಯಾಗುವ ಸನ್ನಿವೇಶ ಬಂದಾಗ ಅಂದು ಸಮುದಾಯದ ಯಾವುದೇ ಮುಖಂಡರು ಧ್ವನಿ ಎತ್ತಲಿಲ್ಲ ಎಂದು ತಿಳಿಸಿದರು.
ಇನ್ನು ತುಮಕೂರು ಜಿಲ್ಲೆಯಲ್ಲಿ ಒಕ್ಕಲಿಗ ಸಮುದಾಯ ಪ್ರಬಲವಾಗಿದೆ ಇನ್ನು ಸಮುದಾಯದ ವಿಷಯದಲ್ಲಿ ಎಲ್ಲರೂ ಒಗ್ಗಟ್ಟು ಪ್ರದರ್ಶಿಸಬೇಕು ಇನ್ನು ಒಗ್ಗಟ್ಟಿನ ವಿಷಯದಲ್ಲಿ ಧ್ವನಿಯೆತ್ತದೆ ಎಂದರೆ ಎಲ್ಲರೂ ರಾಜಕೀಯ ಮಾಡುತ್ತಾರೆ ಹಾಗಾಗಿ ಸಮುದಾಯ ಬೆಳೆಯಬೇಕಾದರೆ ಸಮುದಾಯದ ಪ್ರತಿಯೊಬ್ಬರು ಧ್ವನಿ ಎತ್ತಬೇಕು ಎಂದ ಅವರು ಮುಂದಿನ ದಿನದಲ್ಲೂ ಸಹ ಇಂತಹ ಸನ್ನಿವೇಶ ಎದುರಾದರೆ ನಮ್ಮ ಸಮುದಾಯದ ಶ್ರೀಗಳು ಸಹ ಧ್ವನಿ ಎತ್ತಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ: ಬಿಜೆಪಿ ಮುಕ್ತ ಭಾರತ ಮಾಡುವತ್ತ ಕಾರ್ಯೋನ್ಮುಖರಾಗಿ: ಕಾಂಗ್ರೆಸ್ ಕಾರ್ಯಕರ್ತರಿಗೆ ಡಿಕೆ ಶಿವಕುಮಾರ್ ಕರೆ
ಅಂದು ಮಾಜಿ ಪ್ರಧಾನಿ ದೇವೇಗೌಡರು ಅಂದು ಸಿಎಂ ಆಗುವಾಗ ಸಹ ಅಂದು ಸಮುದಾಯ ಪ್ರಬಲವಾಗಿ ಧ್ವನಿ ಎತ್ತಿದ್ದಕ್ಕೆ ಅಂದು ದೇವೇಗೌಡರು ಸಿಎಂ ಆಗುವ ಅವಕಾಶ ಸಾಧ್ಯವಾಯಿತು ಇಲ್ಲವಾದರೆ ಅಂದು ಅವರು ಮುಖ್ಯಮಂತ್ರಿ ಸ್ಥಾನ ಪಡೆಯಲು ಸಾಧ್ಯವಾಗುತ್ತಿರಲಿಲ್ಲ , ಇನ್ನು ತುಮಕೂರು ಜಿಲ್ಲೆಯಲ್ಲೂ ಸಹ ವೈ.ಕೆ ರಾಮಯ್ಯ, ಹುಚ್ಚ ಮಾಸ್ತಿ ಗೌಡ, ಮುದ್ದಹನುಮೇಗೌಡ ಸೇರಿದಂತೆ ಹಲವು ಪ್ರಮುಖ ಮುಖಂಡರು ಸಮುದಾಯಕ್ಕಾಗಿ ಹಗಲಿರುಳು ಶ್ರಮಿಸಿ ಸಮುದಾಯದ ಪರವಾಗಿ ಧ್ವನಿ ಎತ್ತಿದ ಪ್ರಮುಖ ಮುಖಂಡರು ಎಂದರು .
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದರೆ ಅದಕ್ಕೆ ಶಿವಕುಮಾರ್ ಅವರ ನಾಯಕತ್ವವೇ ಕಾರಣ. ಆದರೆ ಯಾವುದೇ ಸಮುದಾಯದವರು ಕಾಂಗ್ರೆಸ್ ಅವರನ್ನು ಮುಖ್ಯಮಂತ್ರಿ ಮಾಡಬೇಕೆಂದು ಒತ್ತಾಯಿಸಲು ಧ್ವನಿ ಎತ್ತಲಿಲ್ಲ. ಸಮುದಾಯದ ನಾಯಕತ್ವ ಮತ್ತು ಅಧಿಕಾರದ ವಿಷಯ ಬಂದಾಗ ನಾವು ಮಾಡಬೇಕು. ದನಿ ಎತ್ತದೇ ಇದ್ದಿದ್ದರೆ ಎಚ್ ಡಿ ದೇವೇಗೌಡರು ಮುಖ್ಯಮಂತ್ರಿಯಾಗುತ್ತಿರಲಿಲ್ಲ ಎಂದು ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಹೇಳಿದರು.
ಇದನ್ನೂ ಓದಿ: ಅಂದು ಬಂಗಾರಪ್ಪ, ಜಾಲಪ್ಪ; ಇಂದು ಹರಿಪ್ರಸಾದ್ ಅವರನ್ನು ರಾಜಕೀಯವಾಗಿ ಮುಗಿಸಲು ಸಂಚು: ಪ್ರಣವಾನಂದ ಸ್ವಾಮೀಜಿ
ಎರಡು ಬಾರಿ ಶಾಸಕರಾಗಿದ್ದ ಅವರು 2019 ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿದ್ದಾಗ ತುಮಕೂರಿನಿಂದ ದೇವೇಗೌಡರನ್ನು ಸೋಲಿಸಿದ್ದಕ್ಕಾಗಿ ಪಶ್ಚಾತ್ತಾಪಪಟ್ಟರು. ಆಗ ನಾನು ತಪ್ಪು ಮಾಡಿದೆ ಆದರೆ ಗೌಡರನ್ನು ಸೋಲಿಸದಂತೆ ಸಮಾಜದ ಮುಖಂಡರು ನಮಗೆ ಸೂಚಿಸಬೇಕಿತ್ತು ಎಂದರು.
ಕಳೆದ ಬಾರಿಯ ಚುನಾವಣೆಯಲ್ಲಿ ದೇವೇಗೌಡರು ತುಮಕೂರು ಜಿಲ್ಲೆಯಲ್ಲಿ ಚುನಾವಣೆಗೆ ನಿಂತಾಗ ನಾವು ಸಹ ತಪ್ಪು ಮಾಡಿದ್ದೇವೆ ಅಂದು ನಮ್ಮ ಸಮುದಾಯದ ಮುಖಂಡರು ಕೂತು ಆ ವಿಚಾರದ ಬಗ್ಗೆ ಚರ್ಚೆ ಮಾಡಿದರೆ ಇಂತಹ ಸಂದರ್ಭ ಬರುತ್ತಿರಲಿಲ್ಲ ಎಂದು ದೇವೇಗೌಡರನ್ನ ಇದೇ ಸಂದರ್ಭದಲ್ಲಿ ನೆನೆಸಿಕೊಂಡರು