'ಮಾನ-ಮರ್ಯಾದೆ ಇಲ್ಲದೆ ಕಾಂಗ್ರೆಸ್-ಬಿಜೆಪಿ ದೇಶವನ್ನು ಲೂಟಿ ಮಾಡುತ್ತಿವೆ, ವಿದೇಶಕ್ಕೆ ಹೋಗಲು ನಾನು ಸಚಿವರನ್ನು ಕೇಳಬೇಕಾ?': ಹೆಚ್ ಡಿ ಕುಮಾರಸ್ವಾಮಿ

'ವಿದೇಶದಲ್ಲೇ ಅವರು ಇದ್ದುಬಿಡಲಿ, ಬೇಕಾದರೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಿಕೊಡುತ್ತೇವೆ' ಎಂದು ಕೆಲವು ಸಚಿವರುಗಳು ಬಿಟ್ಟಿ ಸಲಹೆ ಕೊಟ್ಟಿದ್ದಾರೆ, ಅವರು ಇಲ್ಲಿ ರಾಜ್ಯದ ಜನತೆಯ ಹಣವನ್ನು ಮಾನ ಮರ್ಯಾದೆ ಇಲ್ಲದೆ ಲೂಟಿ, ದರೋಡೆ ಮಾಡಿಕೊಂಡು ಕುಳಿತುಕೊಂಡಿದ್ದಾರೆ ಎಂದು ವಿದೇಶ ಪ್ರವಾಸ ಮುಗಿಸಿಕೊಂಡು ಬಂದ ಮಾಜಿ ಸಿಎಂ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ದೇವನಹಳ್ಳಿಯ
ಕಾಂಬೋಡಿಯಾ ದೇಶದ ಐತಿಹಾಸಿಕ ಪ್ರಸಿದ್ಧವಾದ ಆಂಗ್‌ಕರ್ ವಾಟ್ ದೇವಾಲಯ ಮುಂದೆ ಹೆಚ್ ಡಿ ಕುಮಾರಸ್ವಾಮಿ
ಕಾಂಬೋಡಿಯಾ ದೇಶದ ಐತಿಹಾಸಿಕ ಪ್ರಸಿದ್ಧವಾದ ಆಂಗ್‌ಕರ್ ವಾಟ್ ದೇವಾಲಯ ಮುಂದೆ ಹೆಚ್ ಡಿ ಕುಮಾರಸ್ವಾಮಿ

ಬೆಂಗಳೂರು: 'ವಿದೇಶದಲ್ಲೇ ಅವರು ಇದ್ದುಬಿಡಲಿ, ಬೇಕಾದರೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಿಕೊಡುತ್ತೇವೆ' ಎಂದು ಕೆಲವು ಸಚಿವರುಗಳು ಬಿಟ್ಟಿ ಸಲಹೆ ಕೊಟ್ಟಿದ್ದಾರೆ, ಅವರು ಇಲ್ಲಿ ರಾಜ್ಯದ ಜನತೆಯ ಹಣವನ್ನು ಮಾನ ಮರ್ಯಾದೆ ಇಲ್ಲದೆ ಲೂಟಿ, ದರೋಡೆ ಮಾಡಿಕೊಂಡು ಕುಳಿತುಕೊಂಡಿದ್ದಾರೆ ಎಂದು ವಿದೇಶ ಪ್ರವಾಸ ಮುಗಿಸಿಕೊಂಡು ಬಂದ ಮಾಜಿ ಸಿಎಂ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ದೇವನಹಳ್ಳಿಯಲ್ಲಿ ಕೆಂಪೇಗೌಡ ಏರ್ ಪೋರ್ಟ್ ಗೆ ಬಂದಿಳಿಯುತ್ತಿದ್ದಂತೆ ಕಾಂಗ್ರೆಸ್ ಸರ್ಕಾರ ಮತ್ತು ಸಚಿವ ಎನ್ ಚೆಲುವರಾಯಸ್ವಾಮಿ ವಿರುದ್ಧ ಕಿಡಿಕಾರಿದ್ದಾರೆ. 

ಅವರಿಗೆ ಇಲ್ಲಿ ಮನಸೋ ಇಚ್ಛೆ ಇರಲು ನಮ್ಮನ್ನು ವಿದೇಶಕ್ಕೆ ಕಳುಹಿಸಲು ನೋಡುತ್ತಿದ್ದಾರೆ. ನಮಗೆ ವಿದೇಶಕ್ಕೆ ಹೋಗುವ ಯೋಗ್ಯತೆಯಿಲ್ಲವೇ, ಅವರಿಂದ ವ್ಯವಸ್ಥೆ ಮಾಡಿಸಿಕೊಂಡು ಪಾಪದ ಹಣ ತೆಗೆದುಕೊಂಡು ಹೋಗಬೇಕೆ ಎಂದು ಕೇಳಿದರು.

ಚೆಲುವರಾಯಸ್ವಾಮಿ ಕಮಿಷನ್ ತೆಗೆದುಕೊಂಡ ಆರೋಪದ ಬಗ್ಗೆ ಗವರ್ನರ್ ಗೆ ಪತ್ರ ಹೇಗೆ ಹೋಗುತ್ತದೆ, ರಾಜ್ಯಪಾಲರಿಗೆ ಬರೆದಿರುವ ಪತ್ರ ಬಗ್ಗೆ ನಾನು ಪ್ರಸ್ತಾಪನೇ ಮಾಡಿಲ್ಲ, ಆದರೂ ನನ್ನ ಹೆಸರು ತೆಗೆಯುತ್ತಾರೆ, ಅಂದರೆ ಅವರಿಗೆ ಭಯವಿದೆ ಎಂದರ್ಥವಲ್ಲವೇ, ಮೊದಲು ಪ್ರಮಾಣಿಕವಾಗಿ ನಡೆದುಕೊಳ್ಳಲು ಕಲಿತುಕೊಳ್ಳಲಿ, ಪ್ರಮಾಣಿಕವಾಗಿದ್ದರೆ ಇಂತಹ ಪರಿಸ್ಥಿತಿ ಏಕೆ ಬರುತ್ತದೆ ಎಂದು ಕೇಳಿದರು.

ಮಂತ್ರಿಗಿರಿ ಸಿಕ್ಕಿದೆ ಎಂದು ಹಗಲುದರೋಡೆ ಮಾಡಲು ನೋಡಬೇಡಿ, ಒಳ್ಳೆ ಕೆಲಸ ಮಾಡಲಿ ಎಂದು ಸಚಿವ ಚೆಲುವರಾಯಸ್ವಾಮಿಗೆ ಕುಮಾರಸ್ವಾಮಿ ಟಾಂಗ್ ನೀಡಿದರು.ಗುತ್ತಿಗೆದಾರರಿಂದ ಕಮಿಷನ್ ತೆಗೆದುಕೊಳ್ಳುವ ಪ್ರಕರಣ ಎಲ್ಲಿಗೆ ಹೋಗಿ ನಿಲ್ಲುತ್ತದೋ ಗೊತ್ತಿಲ್ಲ, ನಾನು ಕಳೆದ 12 ವರ್ಷಗಳಿಂದ ಪಕ್ಷ ಸಂಘಟನೆಗೆ ನನ್ನ ಸಮಯವನ್ನ ಮೀಸಲಿಟ್ಟಿದ್ದೆ. ದೇಶ ಸುತ್ತು ಕೋಶ ಓದು ಎಂದು ಗಾದೆ ಮಾತಿದೆ. ಯಾವ್ಯಾವ ದೇಶಗಳಲ್ಲಿ ಏನೇನಿದೆ, ಅಲ್ಲಿನ ಅಭಿವೃದ್ಧಿ ಕೆಲಸಗಳೇನು ಎಂದು ತಿಳಿದುಕೊಳ್ಳಲು ಕಾಂಬೋಡಿಯಾಗೆ ಅಲ್ಲಿನ ಆಹ್ವಾನ ಮೇರೆಗೆ ಸ್ನೇಹಿತರ ಜೊತೆ ಹೋಗಿದ್ದೆ. ನಾನು ಮಲೇಷಿಯಾಗೆ ಹೋಗಿದ್ದಲ್ಲ. ಅಲ್ಲಿನ ಸುಂದರ ಅತಿದೊಡ್ಡ ಹಿಂದೂ ದೇವಸ್ಥಾನ ನೋಡಲು ಹೋಗಿದ್ದೆ. ಮೂರು ದಿನ ಸುತ್ತಿದ್ರು ಆ ದೇವಸ್ಥಾನ ನೋಡಲು ಆಗುವುದಿಲ್ಲ. ಆ ಸಂಸ್ಕ್ರತಿಯನ್ನ ನೋಡಲು ಆ ದೇಶದ ಆರ್ಥಿಕ ಬೆಳವಣಿಗೆ ನೋಡಲು ಹೋಗಿದ್ದೆ ಎಂದರು.

ಇನ್ನೂ ನಾನು ಹಲವಾರು ದೇಶಗಳನ್ನು ರಾಜಕೀಯ ಒತ್ತಡದಿಂದ ನೋಡಿಲ್ಲ, ಈಗ ಸ್ವಲ್ಪ ಸಮಯವಿದೆ, ಹೀಗಾಗಿ ಕಾಂಬೋಡಿಯಾಗೆ ಹೋಗಿದ್ದೆ ಎಂದರು.

ಕಾಂಬೋಡಿಯಾದಂತಹ ದೇಶಗಳಲ್ಲಿ ಅಲ್ಲಿನ ನಾಯಕರುಗಳ ಪ್ರಾಮಾಣಿಕ ದುಡಿಮೆಯಿಂದ ದೇಶದ ಜಿಡಿಪಿ ಬೆಳವಣಿಗೆ ಕಾಣುತ್ತಿದೆ, ಕಾಂಬೋಡಿಯಾ ದೇಶದಲ್ಲಿ ಜಿಡಿಪಿ ಶೇ. 7.7 ಇದೆ. ನಮ್ಮಲ್ಲಿ ಹಣದ ಕೊರತೆಯಿಲ್ಲ, ಮಧ್ಯ ಪ್ರದೇಶದಲ್ಲಿ 50% ಸರ್ಕಾರ ಎಂದು, ಇಲ್ಲಿ ಕರ್ನಾಟಕದಲ್ಲಿ 40% ಸರ್ಕಾರ ಎಂದು ಪೋಸ್ಟರ್ ಹಾಕಿಕೊಂಡು ಕಿತ್ತಾಡುತ್ತಿದ್ದಾರೆ. ಎರಡು ರಾಷ್ಟ್ರೀಯ ಪಕ್ಷಗಳು ಭಾರತದಲ್ಲಿ ಜನತೆಯ ಸಮಸ್ಯೆಗಳನ್ನು ಪರಿಹರಿಸುವುದರ ಬದಲು ಲೂಟಿ ಹೊಡೆಯುತ್ತಿದ್ದಾರೆ ಎಂದು ಆರೋಪಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com