ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಪುನರ್ ರಚನೆ: ಶಶಿ ತರೂರ್, ಸಚಿನ್ ಪೈಲಟ್ ಸೇರ್ಪಡೆ; ಕರ್ನಾಟಕದ ಇಬ್ಬರಿಗೆ ಸ್ಥಾನ!

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪಕ್ಷದ ಉನ್ನತ ನಿರ್ಧಾರ ತೆಗೆದುಕೊಳ್ಳುವ ಅಂಗವಾದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯನ್ನು (CWC) ಭಾನುವಾರ ಪುನರ್ ರಚಿಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ

ನವದಹೆಲಿ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪಕ್ಷದ ಉನ್ನತ ನಿರ್ಧಾರ ತೆಗೆದುಕೊಳ್ಳುವ ಅಂಗವಾದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯನ್ನು (CWC) ಭಾನುವಾರ ಪುನರ್ ರಚಿಸಿದ್ದಾರೆ.

ಸಮಿತಿಯ 39 ಸದಸ್ಯರು ಸಾಮಾನ್ಯ ಸದಸ್ಯರಾಗಿದ್ದರೆ, 32 ಖಾಯಂ ಆಹ್ವಾನಿತರಾಗಿದ್ದಾರೆ. ಇದು ಯೂತ್ ಕಾಂಗ್ರೆಸ್, ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ, ಮಹಿಳಾ ಕಾಂಗ್ರೆಸ್, ಸೇವಾದಳ ಪದನಿಮಿತ್ತ ಸದಸ್ಯರು ಮತ್ತು ಅಧ್ಯಕ್ಷರು ಸೇರಿದಂತೆ ರಾಜ್ಯದ ಕೆಲವು ಉಸ್ತುವಾರಿಗಳು ಮತ್ತು 13 ವಿಶೇಷ ಆಹ್ವಾನಿತರನ್ನು ಹೊಂದಿದೆ. 

ಸೋನಿಯಾ ಗಾಂಧಿ ನೇತೃತ್ವದಲ್ಲಿ ಪಕ್ಷದ ನಾಯಕತ್ವದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದ 23 ನಾಯಕರ ಗುಂಪಿನ ಭಾಗವಾಗಿದ್ದ ಶಶಿ ತರೂರ್, ಆನಂದ್ ಶರ್ಮಾ ಮತ್ತು ಮುಕುಲ್ ವಾಸ್ನಿಕ್ ಹೊಸ ಸಿಡಬ್ಲ್ಯೂಸಿಯ ಸಾಮಾನ್ಯ ಸದಸ್ಯರಲ್ಲಿ ಸೇರಿದ್ದಾರೆ.

ಗುಂಪಿನ ಭಾಗವಾಗಿದ್ದ ಮನೀಶ್ ತಿವಾರಿ ಮತ್ತು ವೀರಪ್ಪ ಮೊಯ್ಲಿ ಅವರನ್ನು ಖಾಯಂ ಆಹ್ವಾನಿತರನ್ನಾಗಿ ಮಾಡಲಾಗಿದೆ. ಪಂಜಾಬ್‌ ಮಾಜಿ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಮತ್ತು ಪ್ರತಿಭಾ ಸಿಂಗ್ ಅವರನ್ನೂ ಪ್ರಮುಖ ಸಮಿತಿಯಲ್ಲಿ ಸೇರಿಸಲಾಗಿದೆ.

ರಾಜಸ್ಥಾನದಲ್ಲಿ ಪಕ್ಷದ ಸರ್ಕಾರದ ವಿರುದ್ಧ ಬಂಡಾಯವೆದ್ದು ನಂತರ ಉಪಮುಖ್ಯಮಂತ್ರಿ ಸ್ಥಾನದಿಂದ ವಜಾಗೊಂಡ ಸಚಿನ್ ಪೈಲಟ್ ಕೂಡ ಹೊಸ CWC ಸದಸ್ಯರಲ್ಲಿ ಸೇರಿದ್ದಾರೆ. ಕಳೆದ ವರ್ಷ ಅಕ್ಟೋಬರ್ 10 ರಂದು ಮಲ್ಲಿಕಾರ್ಜುನ ಖರ್ಗೆಯವರು ಪಕ್ಷದ ಅಧ್ಯಕ್ಷರಾದ ತಿಂಗಳ ನಂತರ CWC ನ್ನು ರಚಿಸಲಾಗಿದೆ. 

ಸಿಡಬ್ಲ್ಯುಸಿಯ ಸಾಮಾನ್ಯ ಸದಸ್ಯರು ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ಮನಮೋಹನ್ ಸಿಂಗ್, ರಾಹುಲ್ ಗಾಂಧಿ, ಅಧೀರ್ ರಂಜನ್ ಚೌಧರಿ, ಎ ಕೆ ಆಂಟನಿ, ಅಂಬಿಕಾ ಸೋನಿ, ಮೀರಾ ಕುಮಾರ್, ದಿಗ್ವಿಜಯ ಸಿಂಗ್, ಪಿ ಚಿದಂಬರಂ, ತಾರಿಕ್ ಅನ್ವರ್, ಲಾಲ್ ಥನ್ಹಾವಾಲಾ, ಮುಕುಲ್ ವಾಸ್ನಿಕ್, ಆನಂದ್ ಶರ್ಮಾ, ಅಧೋಕ್ರಾವ್ ಚವಾಣ್, ಅಜಯ್ ಮಾಕೆನ್, ಚರಂಜಿತ್ ಸಿಂಗ್ ಚನ್ನಿ, ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಕುಮಾರಿ ಸೆಲ್ಜಾ ಎಂದು ಹೇಳಿಕೆ ತಿಳಿಸಿದೆ.

ಗಾಯ್ಕಂಗಮ್, ಎನ್ ರಘುವೀರಾ ರೆಡ್ಡಿ, ಶಶಿ ತರೂರ್, ತಾಮ್ರಧ್ವಜ್ ಸಾಹು, ಅಭಿಷೇಕ್ ಸಿಂಘ್ವಿ, ಸಲ್ಮಾನ್ ಖುರ್ಷಿದ್, ಜೈರಾಮ್ ರಮೇಶ್, ಜಿತೇಂದ್ರ ಸಿಂಗ್, ರಣದೀಪ್ ಸುರ್ಜೆವಾಲಾ, ಸಚಿನ್ ಪೈಲಟ್, ದೀಪಕ್ ಬಬಾರಿಯಾ, ಜಗದೀಶ್ ಠಾಕೋರ್, ಜಿ ಎಸ್ ಮಿರ್, ಅವಿನಾಶ್ ಪಾಂಡೆ, ಮಹೇಂದ್ರ ದಾಸ್ ಮುಂಶಿಯಾ, ಮಹೇಂದ್ರ ದಾಸ್ ಸಿಂಘ್ಯಾ, ಗೌರವ್ ಗೊಗೊಯ್, ಸೈಯದ್ ನಾಸೀರ್ ಹುಸೇನ್, ಕಮಲೇಶ್ವರ್ ಪಟೇಲ್ ಮತ್ತು ಕೆ ಸಿ ವೇಣುಗೋಪಾಲ್ ಕೂಡ ಸದಸ್ಯರಾಗಿದ್ದಾರೆ.

ಕರ್ನಾಟಕದ ಇಬ್ಬರಿಗೆ ಸ್ಥಾನ: ಇನ್ನು, ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಖಾಯಂ ಆಹ್ವಾನಿತರಾಗಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹಾಗೂ ಎಂಎಲ್​ಸಿ ಬಿ.ಕೆ.ಹರಿಪ್ರಸಾದ್​ ಅವರನ್ನು ಆಯ್ಕೆ ಮಾಡಲಾಗಿದೆ. ಮಲ್ಲಿಕಾರ್ಜುನ ಖರ್ಗೆಯವರು ಕೂಡ ಇದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com