ಒಡೆದ ಮನೆಯಾಗಿರುವ ಕಾಂಗ್ರೆಸ್‌‌ನಲ್ಲಿ ಜೋರಾದ ಫೈಟ್‌: ಬಿಜೆಪಿ ಟೀಕೆ

ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ದೊರೆಯದೆ ಆರಂಭದಿಂದಲೂ ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರುತ್ತಿರುವ ಕಾಂಗ್ರೆಸ್ ಹಿರಿಯ ನಾಯಕ ಬಿ. ಕೆ. ಹರಿಪ್ರಸಾದ್ ನಗರದಲ್ಲಿ ಇಂದು ನಡೆದ ಈಡಿಗರ ಸಮಾವೇಶದಿಂದ ಬಿ.ಕೆ. ಹರಿಪ್ರಸಾದ್ ದೂರ ಉಳಿದರು. 
ಬಿಕೆ ಹರಿಪ್ರಸಾದ್, ಸಿಎಂ ಸಿದ್ದರಾಮಯ್ಯ
ಬಿಕೆ ಹರಿಪ್ರಸಾದ್, ಸಿಎಂ ಸಿದ್ದರಾಮಯ್ಯ

ಬೆಂಗಳೂರು: ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ದೊರೆಯದೆ ಆರಂಭದಿಂದಲೂ ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರುತ್ತಿರುವ ಕಾಂಗ್ರೆಸ್ ಹಿರಿಯ ನಾಯಕ ಬಿ. ಕೆ. ಹರಿಪ್ರಸಾದ್ ನಗರದಲ್ಲಿ ಇಂದು ನಡೆದ ಈಡಿಗರ ಸಮಾವೇಶದಿಂದ ಬಿ.ಕೆ. ಹರಿಪ್ರಸಾದ್ ದೂರ ಉಳಿದರು. 

ಆರ್ಯ ಈಡಿಗ ಸಂಘ ಅರಮನೆ ಮೈದಾನದಲ್ಲಿ ಆಯೋಜಿಸಿದ ಈಡಿಗ, ಬಿಲ್ಲವ ಮತ್ತು ನಾಮದಾರಿ ಸೇರಿ 26 ಪಂಗಡಗಳ ಬೃಹತ್ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಸಮುದಾಯದ ವಿವಿಧ 26 ಪಂಗಡಗಳ ನಾಯಕರು ಮತ್ತು ಸ್ವಾಮೀಜಿಗಳು ಪಾಲ್ಗೊಂಡಿದ್ದರು.

ಕಾಂಗ್ರೆಸ್ ನಲ್ಲಿನ ಈ ಎಲ್ಲಾ ವಿದ್ಯಮಾನ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ರಾಜ್ಯ ಬಿಜೆಪಿ, ಬ್ರಿಟಿಷರ ನಂತರ ಒಡೆದಾಳುವುದರಲ್ಲಿ ಸಿಎಂ ಸಿದ್ದರಾಮಯ್ಯ ಅವರು ನಿಸ್ಸೀಮರಂತೆ, ಇದು ಬಿಕೆ ಹರಿಪ್ರಸಾದ್ ಮಾಡಿರುವ ಆರೋಪದ ಒಟ್ಟು ಸಾರಾಂಶ. ಅಹಿಂದವನ್ನು ಕೇವಲ ವೋಟ್‌ ಬ್ಯಾಂಕ್‌ ಮಾಡಿಕೊಂಡಿರುವ ಸಿಎಂ ಸಿದ್ದರಾಮಯ್ಯರವರು, ಹಿಂದುಳಿದ ವರ್ಗದವರನ್ನು ಹೀನಾಯವಾಗಿ ಕಾಣುತ್ತಿದ್ದಾರೆ ಎಂಬುದು ಹರಿಪ್ರಸಾದ್‌ ರವರ ಹೇಳಿಕೆಯಿಂದ ಸಾಬೀತಾಗಿದೆ ಎಂದು ಹೇಳಿದೆ. 

ಒಡೆದ ಮನೆಯಾಗಿರುವ ಕಾಂಗ್ರೆಸ್‌‌ನಲ್ಲಿ ಫೈಟ್‌ ಜೋರಾಗಿದ್ದು, ರಾಜ್ಯದ ಆಡಳಿತ ಮಾತ್ರ ಸಂಪೂರ್ಣ ಹಳಿ ತಪ್ಪಿದೆ ಎಂದು ಬಿಜೆಪಿ ವಿಷಾಧಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com