ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ: ಪ್ರತಾಪ್ ಸಿಂಹ, ಹೆಚ್.ಸಿ.ಮಹಾದೇವಪ್ಪ ನಡುವೆ ಇದೀಗ ಕ್ರೆಡಿಟ್ ವಾರ್

ಬೆಂಗಳೂರು- ಮೈಸೂರು ನಡುವಿನ ರಾಜ್ಯ ಹೆದ್ದಾರಿಯನ್ನು ದಶಪಥದ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮಾರ್ಪಡಿಸಿದ ವಿಚಾರದಲ್ಲಿ ಇದೀಗ ಸಂಸದ ಪ್ರತಾಪ್ ಸಿಂಹ ಹಾಗೂ ಮಾಜಿ ಲೋಕೋಪಯೋಗಿ ಸಚಿವ ಡಾ. ಹೆಚ್.ಸಿ. ಮಹಾದೇವಪ್ಪ ನಡುವೆ ಟ್ವಿಟರ್ ನಲ್ಲಿ ಕ್ರೆಡಿಟ್ ವಾರ್ ಜೋರಾಗಿಯೇ ನಡೆದಿದೆ.
ಪ್ರತಾಪ್ ಸಿಂಹ ಮತ್ತು ಡಾ.ಹೆಚ್. ಸಿ. ಮಹಾದೇವಪ್ಪ ಸಾಂದರ್ಭಿಕ ಫೋಟೋ
ಪ್ರತಾಪ್ ಸಿಂಹ ಮತ್ತು ಡಾ.ಹೆಚ್. ಸಿ. ಮಹಾದೇವಪ್ಪ ಸಾಂದರ್ಭಿಕ ಫೋಟೋ

ಬೆಂಗಳೂರು: ಬೆಂಗಳೂರು- ಮೈಸೂರು ನಡುವಿನ ರಾಜ್ಯ ಹೆದ್ದಾರಿಯನ್ನು ದಶಪಥದ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮಾರ್ಪಡಿಸಿದ ವಿಚಾರದಲ್ಲಿ ಇದೀಗ ಸಂಸದ ಪ್ರತಾಪ್ ಸಿಂಹ ಹಾಗೂ ಮಾಜಿ ಲೋಕೋಪಯೋಗಿ ಸಚಿವ ಡಾ. ಹೆಚ್.ಸಿ. ಮಹಾದೇವಪ್ಪ ನಡುವೆ ಟ್ವಿಟರ್ ನಲ್ಲಿ ಕ್ರೆಡಿಟ್ ವಾರ್ ಜೋರಾಗಿಯೇ ನಡೆದಿದೆ.

ಬೆಂಗಳೂರು-ಮೈಸೂರು- ಬಂಟ್ವಾಳ ರಸ್ತೆಯನ್ನು ಮಂಜೂರು ಮಾಡಿಸಿ ಅನುದಾನ ಬಿಡುಗಡೆಯಾದಾಗ ಪ್ರತಾಪ್ ಸಿಂಹ ಎಂಪಿಯೇ ಆಗಿರಲಿಲ್ಲ ಎಂಬ ಮಹಾದೇವಪ್ಪ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಪ್ರತಾಪ್ ಸಿಂಹ, ಈ ಯೋಜನೆಯನ್ನು ಪ್ರಧಾನಿ ಮೋದಿ 2018, ಫೆಬ್ರವರಿ 19 ರಂದು ಮಹಾರಾಜ ಮೈದಾನದಲ್ಲಿ ಘೋಷಣೆ ಮಾಡಿದ್ದು,  ಪ್ರಧಾನಿ ಅಧ್ಯಕ್ಷತೆಯ ಆರ್ಥಿಕ ವ್ಯವಹಾರಗಳ ಮೇಲಿನ ಸಂಪುಟ ಸಮಿತಿ-ಸಿಸಿಇಎ ಫೆಬ್ರವರಿ 20ರಂದು ಮಂಜೂರು ಮಾಡಿದೆ ಎಂಬುದಕ್ಕೆ ದಾಖಲೆ ಹಂಚಿಕೊಂಡಿರುವ ಪ್ರತಾಪ್ ಸಿಂಹ, ತಾನು ಎಂಪಿ ಆಗಿದ್ದು 2014 ಮೇನಲ್ಲಿ! ಎಂದು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಡಾ.ಹೆಚ್.ಸಿ. ಮಹಾದೇವಪ್ಪ,  ಬೆಂಗಳೂರು - ಮೈಸೂರಿನ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮಾರ್ಪಡಿಸಿ ಯುಪಿಎ ಅವಧಿಯಲ್ಲೇ ಅದಕ್ಕೆ ಕ್ಯಾಬಿನೆಟ್ ಅನುಮೋದನೆ ದೊರೆತಿದೆ. ಕಾಂಗ್ರೆಸ್  ಸರ್ಕಾರದಲ್ಲಿ ತಾನು ಸಚಿವರಾಗಿದ್ದ  ವೇಳೆ ಆ ರಸ್ತೆಗೆ ಡಿಪಿಆರ್ ಮಾಡಿಸಿ ರಸ್ತೆಯ ನಿರ್ಮಾಣಕ್ಕೆ ಎಲ್ಲಾ ಸಿದ್ದತೆ ಮುಗಿಸಲಾಗಿತ್ತು. ಈ ಬಗ್ಗೆ ಮೊಂಡುತನ ಏಕೆ? ಎಂದು ಪ್ರಶ್ನಿಸಿದ್ದಾರೆ.

ಒಮ್ಮೆ ಕ್ಯಾಬಿನೆಟ್ ನಲ್ಲಿ ಅನುಮೋದನೆ ದೊರೆತ ಮೇಲೆ ಯಾವ ಸರ್ಕಾರ ಬಂದರೂ ಕೂಡಾ ಅದರ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂಬುದು ಯಾವುದೇ ಜನ ಪ್ರತಿನಿಧಿಗಳಿಗೆ ಇರಬೇಕಾದ ಸಾಮಾನ್ಯ ಜ್ಞಾನ. ಬಹುಶಃ ನಿಮಗೆ ಇದು ಚೆನ್ನಾಗಿಯೇ ಗೊತ್ತಿರುತ್ತದೆ . ಹೀಗಾಗಿ ಸಂಸದ ಪ್ರತಾಪ್ ಸಿಂಹ ಹುಸಿ ಪ್ರಚಾರದ ಗೀಳು ಬಿಟ್ಟು ವಾಸ್ತವವನ್ನು ಯೋಚಿಸಿ ಮಾತನಾಡಲಿ ಎಂದು ಹೆಚ್. ಸಿ. ಮಹಾದೇವಪ್ಪ ಟ್ವೀಟರ್ ನಲ್ಲಿಯೇ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com