ಸೋತು ಓಡಿಹೋಗುವವರು ಸಾಮ್ರಾಟ ಅಲ್ಲ, ಉತ್ತರ ಕುಮಾರ! ಕಾಂಗ್ರೆಸ್ ವ್ಯಂಗ್ಯ

ಮಂಡ್ಯ ಜಿಲ್ಲಾ ಉಸ್ತುವಾರಿಯಿಂದ ಆರ್.ಅಶೋಕ್ ಅವರನ್ನು ಮುಕ್ತಗೊಳಿಸಿರುವುದಕ್ಕೆ ಪ್ರತಿಪಕ್ಷ ಕಾಂಗ್ರೆಸ್ ವ್ಯಂಗ್ಯವಾಡಿದೆ. ಈ ಕುರಿತು ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಅಶೋಕ್ ಮಂಡ್ಯ ಉಸ್ತುವಾರಿಯಿಂದ ಪಲಾಯನ ಮಾಡಿದ್ದು ಏಕೆ? ಇದು ಪಲಾಯನವೇ ಅಥವಾ ಉಚ್ಛಾಟನೆಯೇ? ಎಂದು ಪ್ರಶ್ನಿಸಿದೆ. 
ಆರ್.ಅಶೋಕ್
ಆರ್.ಅಶೋಕ್
Updated on

ಬೆಂಗಳೂರು: ಮಂಡ್ಯ ಜಿಲ್ಲಾ ಉಸ್ತುವಾರಿಯಿಂದ ಆರ್.ಅಶೋಕ್ ಅವರನ್ನು ಮುಕ್ತಗೊಳಿಸಿರುವುದಕ್ಕೆ ಪ್ರತಿಪಕ್ಷ ಕಾಂಗ್ರೆಸ್ ವ್ಯಂಗ್ಯವಾಡಿದೆ. ಈ ಕುರಿತು ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಅಶೋಕ್ ಮಂಡ್ಯ ಉಸ್ತುವಾರಿಯಿಂದ ಪಲಾಯನ ಮಾಡಿದ್ದು ಏಕೆ? ಇದು ಪಲಾಯನವೇ ಅಥವಾ ಉಚ್ಛಾಟನೆಯೇ? ಎಂದು ಪ್ರಶ್ನಿಸಿದೆ. 

ಒಂದು ಜಿಲ್ಲೆಯ ಉಸ್ತುವಾರಿಯನ್ನು ನಿಭಾಯಿಸಲಾಗದ ಅಸಾಮರ್ಥ್ಯವೇ? ಅಥವಾ ಪಕ್ಷದೊಳಗಿನ ಶತ್ರುಗಳ ಎದುರು ಸೋಲೊಪ್ಪಿಕೊಂಡಿದ್ದೆ? ಎಂದು ಕಾರಣ ಕೇಳಿದ್ದು, ಹೀಗೆ ಸೋತು ಓಡಿ ಹೋಗುವವರನ್ನು ಸಾಮ್ರಾಟ ಎನ್ನುವುದಿಲ್ಲ, ಉತ್ತರ ಕುಮಾರ ಎನ್ನುತ್ತಾರೆ ಎಂದು ವ್ಯಂಗ್ಯವಾಡಿದೆ.

ರಾಜ್ಯ ಬಿಜೆಪಿಯೊಳಗಿನ ಕಿತ್ತಾಟದ ಕಿಡಿ ಹೊತ್ತಿ ಕೆಂಡವಾಗಿ, ಕೆಂಡ ಜ್ವಾಲೆಯಾಗಿದೆ. ಬಿಜೆಪಿ ಭಸ್ಮವಾಗುವುದು ನಿಶ್ಚಿತ. ಗೋ ಬ್ಯಾಕ್ ಆಕ್ರೋಶಕ್ಕೆ ಮಂಡ್ಯ ಉಸ್ತುವಾರಿಯಿಂದ ಆರ್ ಅಶೋಕ್ ಪಲಾಯನ ಮಾಡುವ ಮೂಲಕ ಬಿಜೆಪಿ ಒಳ ಜಗಳ ಬೀದಿಗೆ ಬಿದ್ದಿದೆ. ಬಿಜೆಪಿಯ ಗುಂಪುಗಾರಿಕೆ ರಾಜ್ಯವನ್ನು ನುಂಗುತ್ತಿದೆ. ಯಾರ ಸಂತೋಷಕ್ಕಾಗಿ ಇದೆಲ್ಲ ಎಂದು ರಾಜ್ಯ ಬಿಜೆಪಿಯನ್ನು ಕಾಂಗ್ರೆಸ್ ಪ್ರಶ್ನಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com