ವಿಧಾನಸಭೆ ಚುನಾವಣೆ ಗೆಲ್ಲಲು ಸರ್ಕಸ್: ಆಶಾ ಕಾರ್ಯಕರ್ತೆಯರಿಗೆ ಸೌದಿ ರಿಯಾಲ್ಸ್‌ ವಿತರಿಸಿದ ಶಾಸಕ ಜಮೀರ್​ ಅಹ್ಮದ್

ಕರ್ನಾಟಕ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜ್ಯ ವಿವಿಧ ಕ್ಷೇತ್ರಗಳಲ್ಲಿ ಮತದಾರರ ಗಮನ ಸೆಳೆಯಲು ಅಭ್ಯರ್ಥಿಗಳು ನಾನಾ ರೀತಿಯಲ್ಲಿ ಗಿಫ್ಟ್​ಗಳನ್ನು ನೀಡುತ್ತಿದ್ದಾರೆ.
ಆಶಾ ಕಾರ್ಯಕರ್ತೆಯರಿಗೆ ಗಿಫ್ಟ್
ಆಶಾ ಕಾರ್ಯಕರ್ತೆಯರಿಗೆ ಗಿಫ್ಟ್

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜ್ಯ ವಿವಿಧ ಕ್ಷೇತ್ರಗಳಲ್ಲಿ ಮತದಾರರ ಗಮನ ಸೆಳೆಯಲು ಅಭ್ಯರ್ಥಿಗಳು ನಾನಾ ರೀತಿಯಲ್ಲಿ ಗಿಫ್ಟ್​ಗಳನ್ನು ನೀಡುತ್ತಿದ್ದಾರೆ. ಈಗಾಗಲೇ ರಾಜ್ಯ ಹಲವು ಕ್ಷೇತ್ರಗಳಲ್ಲಿ ಸೀರೆ, ಕುಕ್ಕರ್ ಹಾಗೂ ಹಣ ಸೇರಿದಂತೆ ವಿವಿಧ ವಸ್ತುಗಳನ್ನು ಹಂಚಿಕೆ ಮಾಡಿರುವ ಕುರಿತು ವರದಿಗಳಾಗಿದೆ.

ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಅವರು, ಬಿಬಿಎಂಪಿ ಆಶಾ ಕಾರ್ಯಕರ್ತೆಯರಿಗೆ ವಿದೇಶಿ ಹಣ ಹಂಚಿಕೆ ಮಾಡಿದ್ದಾರೆ.  ಜಗಜೀವನ್ ರಾಮ್ ನಗರ ವಾರ್ಡ್ ಕಚೇರಿಯಲ್ಲಿ 16 ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತರ (ಆಶಾ) ಕಾರ್ಯಕರ್ತರಿಗೆ ಉಮ್ರಾ (ಮೆಕ್ಕಾಕ್ಕೆ ಇಸ್ಲಾಮಿಕ್ ಯಾತ್ರೆ) ಆಯೋಜನೆ ಮತ್ತು ಪ್ರತಿಯೊಬ್ಬರಿಗೂ ಸೌದಿ ರಿಯಾಲ್  ವಿತರಿಸಿದರು.

ಸೌದಿ ಅರೇಬಿಯಾದ 500 ರಿಯಾಲ್ಸ್‌ ಮುಖಬೆಲೆ ನೋಟುಗಳ ಹಂಚಿಕೆ ಮಾಡಿದ್ದು, 500 ರಿಯಾಲ್ಸ್‌ಗೆ ಭಾರತದಲ್ಲಿ 11,034 ರೂಪಾಯಿ ಮೌಲ್ಯ ಇದೆ. ಹಣದ ಜೊತೆ ನ್ಯಾಷನಲ್ ಟ್ರಾವೆಲ್ಸ್ ಕಿಟ್ ಅನ್ನು ಸಹ ಶಾಸಕ ಜಮೀರ್ ನೀಡಿದ್ದಾರೆ. ನಂತರ ತುಮಕೂರು ಜಿಲ್ಲೆಯ ಸಿರಾ ಪಟ್ಟಣಕ್ಕೆ ಭೇಟಿ ನೀಡಿದ ಅವರು 26 ಯಾತ್ರಿಕರಿಗೆ ಸೌದಿ ರಿಯಾಲ್ 500 ಮತ್ತು ಇತರ ಅಗತ್ಯ ವಸ್ತುಗಳನ್ನು ವಿತರಿಸಿದರು.

ವಿಧಾನಸಭಾ ಚುನಾವಣೆಗೆ ಮುನ್ನ ಮತದಾರರನ್ನು ಸೆಳೆಯಲು ಮಾತ್ರ ಅವರು ಇಂತಹ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂದು ಬಿಜೆಪಿ ಶಾಸಕರು ವಾಗ್ದಾಳಿ ನಡೆಸಿದರು. ಕೂಡಲೇ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯಾಧ್ಯಕ್ಷ ಕೆ.ಸೋಮಶೇಖರ್ ಮಾತನಾಡಿ, ಕಾಂಗ್ರೆಸ್ ಮುಖಂಡರ ಕಾರ್ಯಕ್ರಮದ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ಪ್ರತಿಕ್ರಿಯಿಸಲು ಶಾಸಕರು ಲಭ್ಯವಾಗಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com