ಉತ್ತರಾಧಿಕಾರಿ ಯಾರಾಗಬೇಕೆಂದು ಪಕ್ಷದ ಹೈಕಮಾಂಡ್ ನಿರ್ಧರಿಸುತ್ತಾರೆ-ಬಿ ವೈ ವಿಜಯೇಂದ್ರ

ಇಂದು ನಮ್ಮ ತಂದೆ ಬಿ ಎಸ್ ಯಡಿಯೂರಪ್ಪನವರ ಹುಟ್ಟುಹಬ್ಬಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಬರುತ್ತಿರುವುದು, ಶಿವಮೊಗ್ಗ ಏರ್ ಪೋರ್ಟ್ ಉದ್ಘಾಟನೆ ಮಾಡುತ್ತಿರುವುದು ವಿಶೇಷತೆ. ಅದು ಬಿಟ್ಟರೆ ಸಣ್ಣಪುಟ್ಟ ಪೂಜೆ ಕಾರ್ಯಕ್ರಮಗಳು ಬಿಟ್ಟರೆ ಹುಟ್ಟುಹಬ್ಬದ ವಿಶೇಷತೆ ಏನಿಲ್ಲ ಎಂದು ಬಿ ವೈ ವಿಜಯೇಂದ್ರ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಬಿ ವೈ ವಿಜಯೇಂದ್ರ(ಸಂಗ್ರಹ ಚಿತ್ರ)
ಬಿ ವೈ ವಿಜಯೇಂದ್ರ(ಸಂಗ್ರಹ ಚಿತ್ರ)

ಶಿವಮೊಗ್ಗ: ಇಂದು ನಮ್ಮ ತಂದೆ ಬಿ ಎಸ್ ಯಡಿಯೂರಪ್ಪನವರ ಹುಟ್ಟುಹಬ್ಬಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಬರುತ್ತಿರುವುದು, ಶಿವಮೊಗ್ಗ ಏರ್ ಪೋರ್ಟ್ ಉದ್ಘಾಟನೆ ಮಾಡುತ್ತಿರುವುದು ವಿಶೇಷತೆ. ಅದು ಬಿಟ್ಟರೆ ಸಣ್ಣಪುಟ್ಟ ಪೂಜೆ ಕಾರ್ಯಕ್ರಮಗಳು ಬಿಟ್ಟರೆ ಹುಟ್ಟುಹಬ್ಬದ ವಿಶೇಷತೆ ಏನಿಲ್ಲ ಎಂದು ಬಿ ವೈ ವಿಜಯೇಂದ್ರ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಶಿವಮೊಗ್ಗದಲ್ಲಿಂದು ಮಾತನಾಡಿದ ಅವರು, ರಾಜ್ಯದ ಮೂಲೆಮೂಲೆಗಳಿಂದ ತಂದೆಯವರ ಅಭಿಮಾನಿಗಳು ಬರುತ್ತಿದ್ದಾರೆ, ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಇವತ್ತಿನ ದಿನ, ಬಿಜೆಪಿಯ ಕಾರ್ಯಕರ್ತರು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದಾರೆ. 

ಶಿಕಾರಿಪುರ ಜನತೆ ಕೂಡ ದೊಡ್ಡ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ನಮ್ಮಲ್ಲೆರ ಜೀವನದಲ್ಲಿ ಇಂದು ಮರೆಯಲಾಗದ ದಿನ. ಶಿವಮೊಗ್ಗ ವಿಮಾನ ನಿಲ್ದಾಣ ಮೂಲಕ ಈ ಭಾಗದ ಯುವಕರ ಕನಸು, ಆಶೋತ್ತರಗಳಿಗೆ, ಪ್ರವಾಸೋದ್ಯಮಕ್ಕೆ ಶಕ್ತಿ ಸಿಕ್ಕಂತಾಗುತ್ತದೆ. ಮಧ್ಯ ಕರ್ನಾಟಕ, ಮಲೆನಾಡು ಪ್ರದೇಶ ಈ ವಿಮಾನ ನಿಲ್ದಾಣದಿಂದ ಆರ್ಥಿಕ ಚಟುವಟಿಕೆ ಹೆಚ್ಚಾಗಲಿದೆ. ವಿಮಾನ ನಿಲ್ದಾಣ ಎಂದರೆ ಶ್ರೀಮಂತರಿಗೆ ಮಾತ್ರ ಅಲ್ವಯ ಎಂಬ ಮನೋಭಾವನೆಯನ್ನು ತೊಡೆದುಹಾಕಲಿದೆ ಎಂದರು.

ಉತ್ತರಾಧಿಕಾರಿ ಆಯ್ಕೆ: ಯಡಿಯೂರಪ್ಪನವರ ಉತ್ತರಾಧಿಕಾರಿ ತಾವಾಗುತ್ತಿದ್ದೀರಾ, ಇಂದು ಪ್ರಧಾನಿಯವರು ಘೋಷಿಸುತ್ತಾರೆಯೇ ಎಂಬ ಪ್ರಶ್ನೆಗೆ ಅದರ ಬಗ್ಗೆ ಗೊತ್ತಿಲ್ಲ, ಉತ್ತರಾಧಿಕಾರಿ ಆಯ್ಕೆ ತೀರ್ಮಾನ ಪಕ್ಷದಲ್ಲಿ ಹೈಕಮಾಂಡ್ ಮಾಡುತ್ತದೆ ಎಂದರು.

ಶಿವಮೊಗ್ಗ ನೂತನ ವಿಮಾನ ನಿಲ್ದಾಣ ಉದ್ಘಾಟನೆಗೆ ಕ್ಷಣಗಣನೆ ಶುರುವಾಗಿದ್ದು ಸಮಾವೇಶ ಸ್ಥಳಕ್ಕೆ ಯಡಿಯೂರಪ್ಪ ಕುಟುಂಬಸ್ಥರು ಆಗಮಿಸಿದ್ದಾರೆ. ಯಡಿಯೂರಪ್ಪ, ಪುತ್ರರಾದ ರಾಘವೇಂದ್ರ, ಬಿ.ವೈ.ವಿಜಯೇಂದ್ರ, ಬಿಎಸ್​ವೈ ಪುತ್ರಿಯರು, ಸೊಸೆಯಂದಿರು, ಮೊಮ್ಮಕ್ಕಳ ಆಗಮಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com