ಕಾಂಗ್ರೆಸ್ ಮತ್ತು ಸಿದ್ದರಾಮಯ್ಯಗೆ ರಾಜ್ಯದ ಜನತೆ ತಕ್ಕ ಪಾಠ ಕಲಿಸುತ್ತಾರೆ: ಜೆ ಪಿ ನಡ್ಡಾ

ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ನಿನ್ನೆ ತುಮಕೂರು ಜಿಲ್ಲೆ ಸಿರಾದಲ್ಲಿ ರಾಜ್ಯ ಬಿಜೆಪಿ ನಾಯಕರ ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ. ಕಾರ್ಯಕ್ರಮದಲ್ಲಿ ನಡ್ಡಾ ಜೊತೆಗೆ ಮಾಜಿ-ಹಾಲಿ ಮುಖ್ಯಮಂತ್ರಿಗಳು, ಬಿಜೆಪಿ ರಾಜ್ಯಾಧ್ಯಕ್ಷರು, ಸಚಿವರುಗಳು ಹಾಜರಿದ್ದರು. 
ತುಮಕೂರಿನ ಸಿರಾದಲ್ಲಿ ಬಿಜೆಪಿ ನಾಯಕರ ಶಕ್ತಿ ಪ್ರದರ್ಶನ
ತುಮಕೂರಿನ ಸಿರಾದಲ್ಲಿ ಬಿಜೆಪಿ ನಾಯಕರ ಶಕ್ತಿ ಪ್ರದರ್ಶನ

ದಾವಣಗೆರೆ/ತುಮಕೂರು: ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ನಿನ್ನೆ ತುಮಕೂರು ಜಿಲ್ಲೆ ಸಿರಾದಲ್ಲಿ ರಾಜ್ಯ ಬಿಜೆಪಿ ನಾಯಕರ ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ. ಕಾರ್ಯಕ್ರಮದಲ್ಲಿ ನಡ್ಡಾ ಜೊತೆಗೆ ಮಾಜಿ-ಹಾಲಿ ಮುಖ್ಯಮಂತ್ರಿಗಳು, ಬಿಜೆಪಿ ರಾಜ್ಯಾಧ್ಯಕ್ಷರು, ಸಚಿವರುಗಳು ಹಾಜರಿದ್ದರು. 

ನಿನ್ನೆ ಕೂಡ ಮಾಜಿ ಸಿಎಂ ಸಿದ್ದರಾಮಯ್ಯನವರ ನಾಯಿಮರಿ ಹೇಳಿಕೆ ಪ್ರಸ್ತಾಪವಾಯಿತು. ಹಾಲಿ ಮುಖ್ಯಮಂತ್ರಿಯೊಬ್ಬರಿಗೆ ಮಾಜಿ ಸಿಎಂ ಅವಮಾನ ಮಾಡಿರುವುದು ಕರ್ನಾಟಕದ ಜನತೆಗೆ ಮಾಡಿದ ಅವಮಾನ. ವಿಧಾನಸಭಾ ಚುನಾವಣೆಯಲ್ಲಿ ಜನರು ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ನಡ್ಡಾ ಹೇಳಿದರು. 

ಸಿದ್ದರಾಮಯ್ಯ ಅವರು ತಮ್ಮನ್ನು ಹುಲಿ ಎಂದು ಭಾವಿಸಬಾರದು ಹುಲಿಯನ್ನು ಇಲಿಯಾಗಿ ಪರಿವರ್ತಿಸುವ ಮಾಂತ್ರಿಕ ದಂಡವನ್ನು ಜನರು ಹೊಂದಿದ್ದಾರೆ ಎಂದರು. 

ಕುಂಚಿಟಿಗ ಒಕ್ಕಲಿಗ ಸಮುದಾಯವನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸುವ ಮೂಲಕ ಬಿಜೆಪಿ ತನ್ನ ನಿಷ್ಠೆಯನ್ನು ಸಾಬೀತುಪಡಿಸುತ್ತದೆ. ಕಾಡುಗೊಲ್ಲರಿಗೆ ಎಸ್‌ಟಿ ಸ್ಥಾನಮಾನ ನೀಡಲಾಗುವುದು. ಕರ್ನಾಟಕವು ನಾವೀನ್ಯತೆ ಕೇಂದ್ರವಾಗಿದ್ದು,  ಜಿಐಎಂ ಅವಧಿಯಲ್ಲಿ 90 ಲಕ್ಷ ಕೋಟಿ ಹೂಡಿಕೆಯನ್ನು ಆಕರ್ಷಿಸಿದೆ ಎಂದು ನಡ್ಡಾ ಹೇಳಿದರು, ವಿದೇಶಿ ನೇರ ಹೂಡಿಕೆಯನ್ನು ಆಕರ್ಷಿಸುವಲ್ಲಿ ರಾಜ್ಯವು ಅಗ್ರ ಸ್ಥಾನವನ್ನು ಪಡೆದುಕೊಂಡಿದೆ ಎಂದು ಹೇಳಿದರು.

ಬೆಂಗಳೂರು-ಹೊನ್ನಾವರ ರಾಷ್ಟ್ರೀಯ ಹೆದ್ದಾರಿ-206 ಯೋಜನೆಯ ಭಾಗವಾಗಿರುವ ತುಮಕೂರು-ತಿಪಟೂರು ಹೆದ್ದಾರಿಯ ನಾಲ್ಕು ಪಥದ ಕಾಮಗಾರಿಯು ಪ್ರಗತಿಯಲ್ಲಿದೆ, ಹೊಸದಾಗಿ ನಿಯೋಜಿಸಲಾದ ತುಮಕೂರು-ದಾವಣಗೆರೆ ರೈಲು ಮಾರ್ಗದಲ್ಲಿ ಶೀಘ್ರದಲ್ಲೇ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಅವರು ಹೇಳಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಯುಪಿಎ ರಾಜ್ಯಕ್ಕೆ ಮಲತಾಯಿ ಧೋರಣೆ ನೀಡಿತ್ತು, ಆದರೆ ಯಡಿಯೂರಪ್ಪ ಮತ್ತು ಬೊಮ್ಮಾಯಿ ಸರ್ಕಾರಗಳು ಕೇಂದ್ರದ ಅಭಿವೃದ್ಧಿಗೆ ಕೈಜೋಡಿಸಿ ಕೆಲಸ ಮಾಡಿದೆ ಎಂದರು.

ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ದೇಶದ ರಾಜಕೀಯ ಸಂಸ್ಕೃತಿಯಲ್ಲಿ ಬದಲಾವಣೆಯಾಗಿದೆ ಎಂದು ದಾವಣಗೆರೆಯಲ್ಲಿ ನಡ್ಡಾ ಹೇಳಿದ್ದಾರೆ. "ಹಿಂದಿನ ಯುಪಿಎ ಸರ್ಕಾರವು ಕುಟುಂಬ ರಾಜಕಾರಣ ಆಡಳಿತವನ್ನು ಬೆಂಬಲಿಸುವ ಮತ್ತು ಮತ-ಬ್ಯಾಂಕ್ ರಾಜಕೀಯದಲ್ಲಿ ನಂಬಿಕೆಯಿಡುವ ಪಕ್ಷಗಳ ಒಕ್ಕೂಟವಾಗಿತ್ತು. ಮೋದಿ ಅವರು ರಾಜವಂಶದ ರಾಜಕೀಯ, ಜಾತಿ ಸಮೀಕರಣಗಳು, ವೋಟ್ ಬ್ಯಾಂಕ್ ರಾಜಕೀಯಕ್ಕೆ ಸವಾಲು ಹಾಕಿದ್ದಲ್ಲದೆ, ಸಬ್ಕಾ ಸಾಥ್ ಸಬ್ಕಾ ವಿಕಾಸ್ ಎಂಬ ಮಂತ್ರವನ್ನು ಖಾತ್ರಿಪಡಿಸಿದರು, ಇದು ಭಾರತದ ರಾಜಕೀಯ ಸಂಸ್ಕೃತಿಯನ್ನು ಪರಿವರ್ತಿಸಿತು ಎಂದರು. ಭಾರತವು ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ಸಮರ್ಥವಾಗಿ ನಿಭಾಯಿಸಿದೆ, ಈಗ, ನಾವು ಯಾವುದೇ ಸಾಂಕ್ರಾಮಿಕ ರೋಗವನ್ನು ನಿಭಾಯಿಸಲು ಸಮರ್ಥರಾಗಿದ್ದೇವೆ ಎಂದು ಪ್ರತಿಪಾದಿಸಿದರು. 

ತಡವಾಗಿ ಬಂದ ನಡ್ಡಾ, ವಾಲ್ಮೀಕಿ ಮಠದ ಶ್ರೀಗಳ ನಿರ್ಗಮನ:
ದಾವಣಗೆರೆ: ತಡವಾಗಿ ಬಂದ ಕಾರಣ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಲು ವಾಲ್ಮೀಕಿ ಮಠದ ಪ್ರಸನ್ನಂದ ಸ್ವಾಮೀಜಿ ನಿರಾಕರಿಸಿದ್ದಾರೆ. ನಡ್ಡಾ ಶೀಘ್ರದಲ್ಲೇ ಬರುತ್ತಾರೆ ಎಂದು ಜಗಳೂರು ಶಾಸಕ ಎಸ್‌ವಿ ರಾಮಚಂದ್ರ ಪದೇ ಪದೇ ಭರವಸೆ ನೀಡಿದರೂ ಅವರು ಕಾಯಲು ನಿರಾಕರಿಸಿದರು.ಕೊನೆಗೆ ನಡ್ಡಾ ಅವರು ಮಠಕ್ಕೆ ತೆರಳಿ ಮಾಜಿ ಧರ್ಮಗುರುಗಳ ಸ್ಮಾರಕಕ್ಕೆ ನಮನ ಸಲ್ಲಿಸಿದರು, ನಂತರ ಸಮಾವೇಶದಲ್ಲಿ ಭಾಗವಹಿಸಲು ದಾವಣಗೆರೆಗೆ ಆಗಮಿಸಿದರು. ನಿನ್ನೆ ನಡ್ಡಾ ಅವರು ಬೆಳ್ಳೂಡಿ ಮಠಕ್ಕೆ ಕುರುಬ ಸಮುದಾಯದ ಸ್ವಾಮಿ, ನಿರಂಜನಾನಂದ ಪುರಿ ಸ್ವಾಮಿಗಳನ್ನು ಭೇಟಿ ಮಾಡಿದರು. ಕುರುಬರನ್ನು ಎಸ್‌ಟಿ ವರ್ಗಕ್ಕೆ ಸೇರಿಸುವ ವಿಚಾರವನ್ನು ಪ್ರಸ್ತಾಪಿಸಿದ ನಿರಂಜನಾನಂದ ಪುರಿ, ಈ ಸಮುದಾಯ ಪರವಾಗಿ ಬಿಜೆಪಿ ನಿಲ್ಲುತ್ತದೆ ಎಂದು ನಡ್ಡಾ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com