' ಸ್ಯಾಂಟ್ರೊ ರವಿ'ಯ ವಹಿವಾಟುಗಳೆಲ್ಲ ನಡೆಯುತ್ತಿದ್ದುದು ಕುಮಾರ ಕೃಪ ಗೆಸ್ಟ್ ಹೌಸ್ ನಿಂದ: ಕೆಎಸ್ ಟಿಡಿಸಿಯ ಮಾಜಿ ಅಧಿಕಾರಿಯ ಕೃಪಾ ಕಟಾಕ್ಷ!

ರಾಜ್ಯ ರಾಜಕೀಯದಲ್ಲಿ 'ಸ್ಯಾಂಟ್ರೋ ರವಿ'ಯ ಕರ್ಮಕಾಂಡ ಸದ್ದು, ಗದ್ದಲವೆಬ್ಬಿಸಿದೆ. ಸರ್ಕಾರದ ಮೂಗಿನ ನೇರಕ್ಕೆ ಸ್ಯಾಂಟ್ರೋ ರವಿ ವಿಧಾನ ಸೌಧ ಹತ್ತಿರವಿರುವ ಕುಮಾರ ಕೃಪ ಗೆಸ್ಟ್ ಹೌಸ್ ನ ಕೋಣೆಯಲ್ಲಿ ಕುಳಿತು ಕಾರ್ಯಾಚರಣೆ ನಡೆಸುತ್ತಿದ್ದ ಎಂಬ ಮಾತುಗಳು ಕೇಳಿಬರುತ್ತಿದೆ. ಹೀಗಾದರೆ ಈಗ ಏಳುತ್ತಿರುವ ಪ್ರಶ್ನೆ ಕುಮಾರ ಕೃಪ ಗೆಸ್ಟ್ ಹೌಸ್ ನಲ್ಲಿ ಸರಿಸುಮಾರು ಶಾಶ್ವತವಾಗಿ ಸ್ಯ
ಸ್ಯಾಂಟ್ರೋ ರವಿ
ಸ್ಯಾಂಟ್ರೋ ರವಿ

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ 'ಸ್ಯಾಂಟ್ರೋ ರವಿ'ಯ ಕರ್ಮಕಾಂಡ ಸದ್ದು, ಗದ್ದಲವೆಬ್ಬಿಸಿದೆ. ಸರ್ಕಾರದ ಮೂಗಿನ ನೇರಕ್ಕೆ ಸ್ಯಾಂಟ್ರೋ ರವಿ ವಿಧಾನ ಸೌಧ ಹತ್ತಿರವಿರುವ ಕುಮಾರ ಕೃಪ ಗೆಸ್ಟ್ ಹೌಸ್ ನ ಕೋಣೆಯಲ್ಲಿ ಕುಳಿತು ಕಾರ್ಯಾಚರಣೆ ನಡೆಸುತ್ತಿದ್ದ ಎಂಬ ಮಾತುಗಳು ಕೇಳಿಬರುತ್ತಿದೆ. ಹೀಗಾದರೆ ಈಗ ಏಳುತ್ತಿರುವ ಪ್ರಶ್ನೆ ಕುಮಾರ ಕೃಪ ಗೆಸ್ಟ್ ಹೌಸ್ ನಲ್ಲಿ ಸರಿಸುಮಾರು ಶಾಶ್ವತವಾಗಿ ಸ್ಯಾಂಟ್ರೋ ರವಿಯನ್ನು ಯಾರು ಅಲ್ಲಿ ಇರಿಸಿಕೊಂಡಿದ್ದರು ಎಂಬುದು.

ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಸಿಕ್ಕಿರುವ ಮಾಹಿತಿ ಪ್ರಕಾರ ರವಿಯನ್ನು ಕೆಎಸ್ ಟಿಡಿಸಿ ಅಧಿಕಾರಿ 'ದೇವರಾಜ್ ಸರ್' ಮೂಲಕ ಗೆಸ್ಟ್ ಹೌಸ್ ನಲ್ಲಿ ಬುಕ್ಕಿಂಗ್ ಮಾಡಲಾಗುತ್ತಿತ್ತು. ಇದೀಗ ಆ ಅಧಿಕಾರಿ ಕೆಎಸ್ ಟಿಡಿಸಿಯಿಂದ ವರ್ಗಾವಣೆಗೊಂಡಿದ್ದಾರೆ, ಆದರೆ ಅವರು ವರ್ಷವಿಡೀ ರವಿಗೆ ಗೆಸ್ಟ್ ಹೌಸ್ ನಲ್ಲಿರಲು ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.

ಇಲ್ಲಿಯೇ ಹುಟ್ಟಿಕೊಂಡಿರುವುದು ಸಮಸ್ಯೆ, ಕಾನೂನು ಉಲ್ಲಂಘನೆಯಾಗಿದೆ ಎಂಬುದು. ಗೆಸ್ಟ್ ಹೌಸ್ ನಿಯಮ ಪ್ರಕಾರ ಒಬ್ಬ ವ್ಯಕ್ತಿ 5 ದಿನಕ್ಕಿಂತ ಹೆಚ್ಚು ಉಳಿದುಕೊಳ್ಳುವಂತಿಲ್ಲ. 6ನೇ ದಿನ ಅಲ್ಲಿ ಉಳಿದುಕೊಳ್ಳಬೇಕೆಂದರೆ ವಿಶೇಷ ಅನುಮತಿ ಅಥವಾ ಮತ್ತೆ ಬುಕ್ಕಿಂಗ್ ಮಾಡಬೇಕು. ದೇವರಾಜ್ ಅವರನ್ನು ನೇರವಾಗಿ ಅಧಿಕಾರಿಯ ಅಡಿಯಲ್ಲಿ ನೇಮಿಸಿಕೊಂಡು ಸರ್ಕಾರದ ಜಂಟಿ ಕಾರ್ಯದರ್ಶಿ ರ್ಯಾಂಕ್ ಎಂದು ಹೆಸರಿಸಿ ಅವರ ಹೆಸರಿನಲ್ಲಿ ಸ್ಯಾಂಟ್ರೋ ರವಿಗೆ ರೂಂ ಬುಕ್ ಮಾಡಿ ಕೊಡಲಾಗಿತ್ತು. ಆ ಅಧಿಕಾರಿ ಕೆಎಸ್ ಟಿಡಿಸಿಯ ಅಧಿಕಾರ ಹೊಂದಿದ್ದರು. 

ಖಾಸಗಿ ವ್ಯಕ್ತಿಗಳು ಪ್ರತಿದಿನಕ್ಕೆ ಪ್ರತಿವ್ಯಕ್ತಿಗೆ 1,500 ರೂಪಾಯಿ ನೀಡಿದರೆ ರಾಜ್ಯ ಸರ್ಕಾರಿ ಅಧಿಕಾರಿಗಳು 400 ರೂಪಾಯಿ, ಶಾಸಕರು ಮತ್ತು ಕೇಂದ್ರ ಸರ್ಕಾರಿ ಅಧಿಕಾರಿಗಳು 600 ರೂಪಾಯಿಗಳನ್ನು ಈ ಗೆಸ್ಟ್ ಹೌಸ್ ಗೆ ನೀಡುತ್ತಾರೆ.

ಇಲ್ಲಿ ಸ್ಯಾಂಟ್ರೋ ರವಿ ಖಾಸಗಿ ವ್ಯಕ್ತಿ, ದೇವರಾಜ್ ಮೂಲಕ ಪ್ರಭಾವ ಬಳಸಿ ಕುಮಾರ ಕೃಪ ಗೆಸ್ಟ್ ಹೌಸ್ ನಲ್ಲಿ ರೂಂ ಕೊಡಿಸಲಾಗಿದೆ. ಒಬ್ಬ ಅತಿಥಿ ಕೊಠಡಿಯನ್ನು ಬುಕ್ ಮಾಡಬೇಕೆಂದರೆ ಅಧಿಕಾರಿಗಳ ಅಗತ್ಯಗಳನ್ನು ಆತ ಈಡೇರಿಸಬೇಕು. ಇಲ್ಲಿ ಸ್ಯಾಂಟ್ರೋ ರವಿ ಮಾತ್ರ ಕುಮಾರ ಕೃಪ ಗೆಸ್ಟ್ ಹೌಸ್ ನ್ನು ತನ್ನ ಮನೆಯನ್ನಾಗಿ ಮಾಡಿಕೊಂಡಿರುವ ವ್ಯಕ್ತಿಯಲ್ಲ, ಇನ್ನೂ ಹಲವರಿದ್ದಾರೆ.

ಕುಮಾರ ಕೃಪ ಗೆಸ್ಟ್ ಹೌಸ್ ನಲ್ಲಿರುವ 180 ರೂಂಗಳನ್ನು ಪ್ರಭಾವ ಬಳಸಿಕೊಂಡು ಬುಕ್ಕಿಂಗ್ ಮಾಡಿಸಿಕೊಂಡು ತಮ್ಮ ಮನೆಯನ್ನಾಗಿ ಮಾಡಿಕೊಂಡವರು ಇನ್ನೂ ಹಲವರಿದ್ದಾರೆ. ಇಲ್ಲಿ ಒಂದು ನೆಟ್ ವರ್ಕ್ ಇದೆ, ಈ ನೆಟ್ ವರ್ಕ್ ಮೂಲಕವೇ ಸಚಿವರುಗಳು, ಅಧಿಕಾರಿಗಳು ತಮ್ಮ ಕಾರ್ಯಾಚರಣೆ ನಡೆಸುವುದು, ಸ್ಯಾಂಟ್ರೋ ರವಿ ಅದರಲ್ಲಿ ಒಂದು ಭಾಗವಷ್ಟೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com