ಯಡ್ಡಿಯೂರಪ್ಪನವರಿಗೆ ಕಲ್ಲು ಹೊಡೆದ್ರೆ ಪೆಟ್ಟು ಬೀಳೋದು ಬಿಜೆಪಿಗೇ: ಬಿ ವೈ ವಿಜಯೇಂದ್ರ
ಯಡಿಯೂರಪ್ಪನವರಿಗೆ(B S Yedyurappa) ಕಲ್ಲು ಹೊಡೆದರೆ ಪೆಟ್ಟು ಬೀಳೋದು ಬಿಜೆಪಿ (BJP) ಮೇಲೆಯೇ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಬಿಎಸ್‌ವೈ ಅವರ ಪುತ್ರ ಬಿ.ವೈ ವಿಜಯೇಂದ್ರ (BY Vijayendra) ಹೇಳಿದ್ದಾರೆ.
Published: 27th January 2023 04:34 PM | Last Updated: 27th January 2023 04:34 PM | A+A A-

ಬಿ ಎಸ್ ಯಡಿಯೂರಪ್ಪ-ಬಿ ವೈ ವಿಜಯೇಂದ್ರ
ವಿಜಯಪುರ: ಯಡಿಯೂರಪ್ಪನವರಿಗೆ(B S Yedyurappa) ಕಲ್ಲು ಹೊಡೆದರೆ ಪೆಟ್ಟು ಬೀಳೋದು ಬಿಜೆಪಿ (BJP) ಮೇಲೆಯೇ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಬಿಎಸ್‌ವೈ ಅವರ ಪುತ್ರ ಬಿ.ವೈ ವಿಜಯೇಂದ್ರ (BY Vijayendra) ಹೇಳಿದ್ದಾರೆ.
ಯಡ್ಡಿಯೂರಪ್ಪ ಹಿರಿಯರು ಅವರ ಬಗ್ಗೆ ಮಾತನಾಡಲ್ಲ’ ಎಂಬ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ವಿಜಯಪುರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಹಿರಿಯರಾದಂತಹ ಯತ್ನಾಳ್ ಅವರ ಹೇಳಿಕೆಯನ್ನ ನಾನು ಗಮನಿಸಿದ್ದೇನೆ. ಇದು ಉತ್ತಮ ಬೆಳವಣಿಗೆ ಎಂದು ಭಾವಿಸಬಹುದು. ಪಕ್ಷದ ಹಿತದೃಷ್ಟಿಯಿಂದ ಯಡ್ಡಿಯೂರಪ್ಪ ಅವರಿಗೆ ಕಲ್ಲು ಹೊಡೆದ್ರೆ ಅದರ ಪೆಟ್ಟು ಬೀಳೋದು ಬಿಜೆಪಿ ಮೇಲೆಯೇ ಎಂದಿದ್ದಾರೆ.
ಈಗಲಾದರೂ ಅರ್ಥ ಮಾಡಿಕೊಂಡು ಯತ್ನಾಳ್ ಅವರು ಹೇಳಿಕೆ ಕೊಟ್ಟಿರುವುದನ್ನು ಸ್ವಾಗತ ಮಾಡುತ್ತೇನೆ. ಏನೇ ಸಮಸ್ಯೆ ಇದ್ದರೂ, ಏನೇ ಗೊಂದಲಗಳು ಇದ್ದರೂ ಅವುಗಳನ್ನು ಕುಳಿತು ಚರ್ಚೆ ಮಾಡಿ ಪಕ್ಷದೊಳಗೇ ಬಗೆಹರಿಸಿಕೊಳ್ಳಬೇಕೆ ಹೊರತು ಬಹಿರಂಗವಾಗಿ ಹೇಳಿಕೆ ನೀಡುವುದು ಸೂಕ್ತವಲ್ಲ. ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು ಅಂದರೆ ಕೆಲವು ಸಮಸ್ಯೆಗಳನ್ನ ಸರಿಮಾಡಿಕೊಂಡು ಮುಂದೆ ಹೋಗಬೇಕಾಗುತ್ತದೆ. ಬರುವ ದಿನದಲ್ಲಿ ಎಲ್ಲವೂ ಸರಿ ಹೋಗುತ್ತದೆ ಎಂದರು.