‘ನಾನು ಯಾರ ಬೆಡ್‌ರೂಂನಲ್ಲೂ ಇರಲಿಲ್ಲ, ಯಾರಿದ್ದರೋ ಅವರನ್ನೇ ಕೇಳಿಕೊಳ್ಳಲಿ'
‘ನಾನು ಯಾರ ಬೆಡ್‌ರೂಂನಲ್ಲೂ ಇರಲಿಲ್ಲ. ಯಾರಿದ್ದರೋ ಅವರನ್ನೇ ಕೇಳಿಕೊಳ್ಳಲಿ’ ಎಂದು ಹೇಳಿದರು. ಬೇರೆ ಯಾರಾದರೂ ಭ್ರಷ್ಟಾಚಾರದ ಬಗ್ಗೆ ಆರೋಪ ಮಾಡಿದರೆ ಉತ್ತರ ಕೊಡಬಹುದು.
Published: 27th January 2023 10:19 AM | Last Updated: 27th January 2023 10:19 AM | A+A A-

ಡಿ.ಕೆ ಶಿವಕುಮಾರ್ ಮತ್ತು ಮುನಿರತ್ನ
ಬೆಂಗಳೂರು: ಕಾಂಗ್ರೆಸ್‌ನಲ್ಲಿ, ತಮ್ಮ ಬೆಡ್‌ರೂಂನಲ್ಲೇ ಇದ್ದವರು ಈಗ ಬಿಜೆಪಿಗೆ ಹೋಗಿ ಆರೋಪ ಮಾಡುತ್ತಿದ್ದಾರೆ ಎಂಬ ಡಿ.ಕೆ.ಶಿವಕುಮಾರ್ ಟೀಕೆಗೆ ಸಚಿವ ಮುನಿರತ್ನ ತಿರುಗೇಟು ನೀಡಿದ್ದಾರೆ.
ಗುರುವಾರ ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾನು ಯಾರ ಬೆಡ್‌ರೂಂನಲ್ಲೂ ಇರಲಿಲ್ಲ. ಯಾರಿದ್ದರೋ ಅವರನ್ನೇ ಕೇಳಿಕೊಳ್ಳಲಿ’ ಎಂದು ಹೇಳಿದರು. ಬೇರೆ ಯಾರಾದರೂ ಭ್ರಷ್ಟಾಚಾರದ ಬಗ್ಗೆ ಆರೋಪ ಮಾಡಿದರೆ ಉತ್ತರ ಕೊಡಬಹುದು. ಭ್ರಷ್ಟಾಚಾರದ ಕುರಿತು ಡಿ.ಕೆ.ಶಿವಕುಮಾರ್ ಮಾತನಾಡಿದರೆ ಏನೆಂದು ಹೇಳುವುದು. ನನಗಂತೂ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಶೇ 40 ಕಮಿಷನ್ ಎಂದು ವೇದಿಕೆಗಳಲ್ಲಿ ಮಾತನಾಡುವುದಲ್ಲ, ನ್ಯಾಯಾಲಯಕ್ಕೆ ಹೋಗಲಿ, ದಾಖಲೆ ಸಲ್ಲಿಸಲಿ. ಆರೋಪ ಮಾಡಿ ತಪ್ಪಿಸಿಕೊಂಡು ಹೋಗಲು ಸಾಧ್ಯವಿಲ್ಲ. ಪ್ರಾಯಶ್ಚಿತ ಅನುಭವಿಸಬೇಕಾಗುತ್ತದೆ’ ಎಂದರು.
ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಸ್ಪರ್ಧೆ ಯಾರು ಎಲ್ಲಿ ಬೇಕಾದರೂ ಹೇಳಬಹುದು, ಆದರೆ ಸ್ಪರ್ಧೆ ಮಾಡಿದಾಗ ಮಾತ್ರ ಗೊತ್ತಾಗುತ್ತೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಉತ್ತಮ ಆಡಳಿತ ಕೊಡುತ್ತಿವೆ, ರೈತರಿಗಾಗಿ ನಾವು ಸಾಕಷ್ಟು ಯೋಜನೆಗಳನ್ನ ಕೊಟ್ಟಿದ್ದೇವೆ. ಬೇಡಿಕೆ ಇದ್ದಷ್ಟುಅನುದಾನವನ್ನ ರೈತರಿಗೆ ಕೊಡುತ್ತಿದ್ದೇವೆ ಎಂದು ತಿಳಿಸಿದರು.