ಕ್ಷೇತ್ರದಲ್ಲಿ ಸಮರ್ಥ ಅಭ್ಯರ್ಥಿ ಇದ್ದಾಗ ಕುಟುಂಬದವರನ್ನು ಸ್ಪರ್ಧೆಗೆ ಇಳಿಸಲ್ಲ-ಎಚ್.ಡಿಕೆ: ದೊಡ್ಡಗೌಡರ ಮನೆಯಲ್ಲಿ ತಾರಕಕ್ಕೇರಿದ ಟಿಕೆಟ್ ಫೈಟ್!
ಹಾಸನ ಕ್ಷೇತ್ರದಲ್ಲಿ ಸಮರ್ಥವಾದ ಅಭ್ಯರ್ಥಿ ಇದ್ದಾರೆ. ಅಲ್ಲಿ ಈಗ ಅನಿವಾರ್ಯತೆ ಇಲ್ಲ. ಈಗಾಗಲೇ ನಾಲ್ವರು ಮಹಿಳೆಯರಿಗೆ ಟಿಕೆಟ್ ಘೋಷಣೆ ಮಾಡಿದ್ದೇವೆ
Published: 27th January 2023 09:56 AM | Last Updated: 27th January 2023 09:56 AM | A+A A-

ಎಚ್.ಡಿ ಕುಮಾರಸ್ವಾಮಿ ಮತ್ತು ಭವಾನಿ ರೇವಣ್ಣ
ರಾಯಚೂರು: ನಮ್ಮ ಕುಟುಂಬದಲ್ಲಿ ಸಂಘರ್ಷ ನಡೆಯುತ್ತಿದೆ ಅನ್ನೋದೇನಿಲ್ಲ, ನನಗೆ ಕಾರ್ಯಕರ್ತರೇ ಕುಟುಂಬಸ್ಥರು. ಅಲ್ಲಿ ಸಮರ್ಥವಾದ ಅಭ್ಯರ್ಥಿ ಇದ್ದಾರೆ. ಇಲ್ಲದಿದ್ದರೇ ಅವರನ್ನು ನಾನೇ ನಿಲ್ಲಿಸುತ್ತಿದ್ದೆ. ಇಲ್ಲಿ ಕುಟುಂಬ ರಾಜಕಾರಣ ಇಲ್ಲ. ಗೊಂದಲವಿದ್ದರೆ ಸಮಸ್ಯೆ ಬಗೆಹರಿಸಿಕೊಳ್ಳುತ್ತೇವೆ. ಅವಶ್ಯಕತೆಯಿದ್ದರೇ ಕಾರ್ಯಕರ್ತರಿಗಾಗಿ ತಲೆಕೊಡುತ್ತೇವೆ. ಇಲ್ಲಿನ ಅಂತಹ ಪರಿಸ್ಥಿತಿ ಇಲ್ಲ ಎಂದು ತಿಳಿಸಿದರು.
ಪಂಚರತ್ನಯಾತ್ರೆ ಹಿನ್ನೆಲೆಯಲ್ಲಿ ರಾಯಚೂರು ಪ್ರವಾಸದಲ್ಲಿರುವ ಹೆಚ್‌ಡಿಕೆ ದೇವದುರ್ಗದ ಗಾಣಧಾಣದಲ್ಲಿ ಮಾತನಾಡಿ, ಹಾಸನ ಕ್ಷೇತ್ರದಲ್ಲಿ ಸಮರ್ಥವಾದ ಅಭ್ಯರ್ಥಿ ಇದ್ದಾರೆ. ಅಲ್ಲಿ ಈಗ ಅನಿವಾರ್ಯತೆ ಇಲ್ಲ. ಈಗಾಗಲೇ ನಾಲ್ವರು ಮಹಿಳೆಯರಿಗೆ ಟಿಕೆಟ್ ಘೋಷಣೆ ಮಾಡಿದ್ದೇವೆ. ಕ್ಷೇತ್ರದಲ್ಲಿ ಸ್ಪರ್ಧಿಸಲು ಸಮರ್ಥ ಅಭ್ಯರ್ಥಿ ಇದ್ದಾಗ ಕುಟುಂಬದವರನ್ನು ಸ್ಪರ್ಧೆಗೆ ಇಳಿಸುವುದಿಲ್ಲ. ಇದರ ಬಗ್ಗೆ ಸ್ಪಷ್ಟನೆ ನೀಡಿದ್ದೇನೆ. ಪದೇ ಪದೇ ಇದರ ಬಗ್ಗೆ ಸಮಜಾಯಿಷಿ ಕೊಡಬೇಕಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ನಮ್ಮ ಕುಟುಂಬದಲ್ಲಿ ಸಂಘರ್ಷ ನಡೆಯುತ್ತಿದೆ ಅನ್ನೋದೇನಿಲ್ಲ, ನನಗೆ ಕಾರ್ಯಕರ್ತರೇ ಕುಟುಂಬಸ್ಥರು. ಅಲ್ಲಿ ಸಮರ್ಥವಾದ ಅಭ್ಯರ್ಥಿ ಇದ್ದಾರೆ. ಇಲ್ಲದಿದ್ದರೇ ಅವರನ್ನು ನಾನೇ ನಿಲ್ಲಿಸುತ್ತಿದ್ದೆ. ಇಲ್ಲಿ ಕುಟುಂಬ ರಾಜಕಾರಣ ಇಲ್ಲ. ಗೊಂದಲವಿದ್ದರೆ ಸಮಸ್ಯೆ ಬಗೆಹರಿಸಿಕೊಳ್ಳುತ್ತೇವೆ. ಅವಶ್ಯಕತೆಯಿದ್ದರೇ ಕಾರ್ಯಕರ್ತರಿಗಾಗಿ ತಲೆಕೊಡುತ್ತೇವೆ. ಇಲ್ಲಿನ ಅಂತಹ ಪರಿಸ್ಥಿತಿ ಇಲ್ಲ ಎಂದು ತಿಳಿಸಿದರು.