ಜೆಡಿಎಸ್ ಕೋಮುವಾದ ಸಿದ್ಧಾಂತಕ್ಕೆ ಬದಲಾಗುತ್ತಿರುವುದು ಕಾಣುತ್ತಿದೆ, ಥೇಟ್.. ನಾಗವಲ್ಲಿಯ ತರ!

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌-ಬಿಜೆಪಿ ಮೈತ್ರಿ ಕುರಿತ ಮಾತುಗಳು ಹಲವು ದಿನಗಳಿಂದ ಓಡಾಡುತ್ತಿವೆ. ಕಳೆದ ಬಾರಿ ಕಾಂಗ್ರೆಸ್‌ ಜೊತೆ ಮೈತ್ರಿ ಮಾಡಿಕೊಂಡಿದ್ದ ಜೆಡಿಎಸ್‌ ಈ ಬಾರಿ ಬಿಜೆಪಿಯೊಂದಿಗೆ ಸ್ನೇಹ ಬೆಳೆಸಲಿದೆ ಎನ್ನಲಾಗುತ್ತಿದೆ.
ಎಚ್.ಡಿ ಕುಮಾರಸ್ವಾಮಿ
ಎಚ್.ಡಿ ಕುಮಾರಸ್ವಾಮಿ
Updated on

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌-ಬಿಜೆಪಿ ಮೈತ್ರಿ ಕುರಿತ ಮಾತುಗಳು ಹಲವು ದಿನಗಳಿಂದ ಓಡಾಡುತ್ತಿವೆ. ಕಳೆದ ಬಾರಿ ಕಾಂಗ್ರೆಸ್‌ ಜೊತೆ ಮೈತ್ರಿ ಮಾಡಿಕೊಂಡಿದ್ದ ಜೆಡಿಎಸ್‌ ಈ ಬಾರಿ ಬಿಜೆಪಿಯೊಂದಿಗೆ ಸ್ನೇಹ ಬೆಳೆಸಲಿದೆ ಎನ್ನಲಾಗುತ್ತಿದೆ. ಈ ವಿಚಾರವಾಗಿ ಟ್ವೀಟ್‌ ಮಾಡಿರುವ ಕರ್ನಾಟಕ ಕಾಂಗ್ರೆಸ್‌, ಜೆಡಿಎಸ್‌ ಅನ್ನು 'ನಾಗವಲ್ಲಿ'ಗೆ ಹೋಲಿಸಿ ಟ್ವೀಟ್‌ ಮಾಡಿದೆ.

'ಹೊಸ ರಾಜಕೀಯ ಸಮ್ಮಿಶ್ರಣವೊಂದು ತಯಾರಾಗುತ್ತಿದೆ. ಈಗ ನಮಗಿರುವ ಪ್ರಶ್ನೆ, ಜೆಡಿಎಸ್ ಕೋಮುವಾದವನ್ನು ಅಳವಡಿಸಿಕೊಳ್ಳುತ್ತದೆಯೇ ಅಥವಾ ಬಿಜೆಪಿ ಜಾತ್ಯತೀತತೆಯನ್ನು ಅಳವಡಿಸಿಕೊಳ್ಳುತ್ತದೆಯೇ?' ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.

ಈ ಬೆಳವಣಿಗೆಗಳನ್ನು ನೋಡುತ್ತಿದ್ದರೆ ಜೆಡಿಎಸ್ ಕೋಮುವಾದ ಸಿದ್ಧಾಂತಕ್ಕೆ ಬದಲಾಗುತ್ತಿರುವುದು ಕಾಣುತ್ತಿದೆ, ಥೇಟ್. ನಾಗವಲ್ಲಿಯ ತರ!!' ಎಂದು ವ್ಯಂಗ್ಯವಾಡಿದೆ.

ಬಿಜೆಪಿಗೆ ದಲಿತರ ರಾಜಕೀಯ ಹಾಗೂ ಸಾಮಾಜಿಕ ಏಳಿಗೆಯನ್ನು ಸಹಿಸಲಾಗುತ್ತಿಲ್ಲವೇ? ದಲಿತರ ತಲೆ ಮೇಲೆ ಚಡ್ಡಿ ಹೊರಿಸಿತ್ತು ಬಿಜೆಪಿ ,ಹಣವನ್ನು ದುರುಪಯೋಗ ಮಾಡಿತ್ತು ಬಿಜೆಪಿ.

ದಲಿತರಿಗೆ ಮಾತ್ರ ಚಪ್ಪಲಿ ಕಾಯುವ ಟೆಂಡರ್ ಮೀಸಲಿಟ್ಟಿತ್ತು ಬಿಜೆಪಿ, ಸೆಂಟ್ರಲ್ ವಿಸ್ತಾ, ರಾಮಮಂದಿರದ ಕಾರ್ಯಕ್ರಮಕ್ಕೆ ದಲಿತ ಸಮುದಾಯದ ರಾಷ್ಟ್ರಪತಿಗೆ ಆಹ್ವಾನಿಸಲಿಲ್ಲ ಬಿಜೆಪಿ. ಈಗ ದಲಿತ ಸಮುದಾಯದ ಉಪಸಭಾಪತಿಯ ಮುಖಕ್ಕೆ ಪೇಪರ್ ಎಸೆದು ಅವಮಾನಿಸಿದೆ ಬಿಜೆಪಿ ದಲಿತರನ್ನು ಬಿಜೆಪಿ ಏಕಿಷ್ಟು ಕೇವಲವಾಗಿ ಕಾಣುತ್ತಿದೆ? ಮನುವಾದವೇ ಬಿಜೆಪಿಯ ಪಕ್ಷದ ಬೈಲಾ ಆಗಿದೆಯೇ?  ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ಹರಿಹಾಯ್ದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com