ದ್ವೇಷ ಹರಡುವುದನ್ನು ತಡೆಯಲು 'ಶಾಂತಿಯುತ ಕರ್ನಾಟಕ' ಹೆಲ್ಪ್ಲೈನ್ ಆರಂಭಿಸಿ: ಸಿಎಂಗೆ ಎಂ.ಬಿ.ಪಾಟೀಲ್ ಮನವಿ
ರಾಜ್ಯದಲ್ಲಿ ಯಾವುದೇ ರೀತಿಯ ದ್ವೇಷ ಹರಡುವುದನ್ನು ತಡೆಯಲು 'ಶಾಂತಿಯುತ ಕರ್ನಾಟಕ’ ಎಂಬ ಹೊಸ ಹೆಲ್ಪ್ಲೈನ್ ಆರಂಭಿಸುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ...
Published: 05th June 2023 07:18 PM | Last Updated: 05th June 2023 08:14 PM | A+A A-

ಎಂ.ಬಿ ಪಾಟೀಲ್
ಬೆಂಗಳೂರು: ರಾಜ್ಯದಲ್ಲಿ ಯಾವುದೇ ರೀತಿಯ ದ್ವೇಷ ಹರಡುವುದನ್ನು ತಡೆಯಲು 'ಶಾಂತಿಯುತ ಕರ್ನಾಟಕ’ ಎಂಬ ಹೊಸ ಹೆಲ್ಪ್ಲೈನ್ ಆರಂಭಿಸುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಮನವಿ ಮಾಡಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಎಂ.ಬಿ.ಪಾಟೀಲ್ ಅವರು, ರಾಜ್ಯದಲ್ಲಿ ಯಾವುದೇ ರೀತಿಯ ದ್ವೇಷ ಹರಡದಂತೆ ಮತ್ತು ಅಂತಹ ಅನಪೇಕ್ಷಿತ ಘಟನೆಗಳ ಬಗ್ಗೆ ಕಣ್ಗಾವಲು ಇಡುವ ನಿಟ್ಟಿನಲ್ಲಿ 'ಶಾಂತಿಯುತ ಕರ್ನಾಟಕ' ಎಂಬ ಹೊಸ ಸಹಾಯವಾಣಿಯನ್ನು ಸ್ಥಾಪಿಸಿ ಎಂದು ಮನವಿ ಮಾಡಿದ್ದಾರೆ.
ನಮ್ಮ ಗುರಿ ಅಭಿವೃದ್ಧಿ, ಪ್ರಗತಿ ಮತ್ತು 'ಬ್ರಾಂಡ್ ಕರ್ನಾಟಕ' ರಕ್ಷಿಸುವುದು ಎಂದು ಟ್ವೀಟ್ ಮಾಡಿರುವ ಸಚಿವರು, ಗೃಹ ಸಚಿವ ಡಾ. ಜಿ ಪರಮೇಶ್ವರ್, ಸಚಿವ ಪ್ರಿಯಾಂಕ್ ಖರ್ಗೆ, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯ ಅವರನ್ನು ಟ್ಯಾಗ್ ಮಾಡಿದ್ದಾರೆ.
ಇದನ್ನು ಓದಿ: ರಾಜ್ಯದಲ್ಲಿ ಹಿಟ್ಲರ್ ಆಡಳಿತ ಎಂದ ಚಕ್ರವರ್ತಿ ಸೂಲಿಬೆಲೆಗೆ ಎಂಬಿ ಪಾಟೀಲ್ ಖಡಕ್ ಎಚ್ಚರಿಕೆ!
ನಮ್ಮ ಕಾರ್ಯಕರ್ತರನ್ನು ಟಾರ್ಗೆಟ್ ಮಾಡುವುದನ್ನು ತಡೆಯಲು ಬಿಜೆಪಿ ಸಹಾಯವಾಣಿಯನ್ನು ಆರಂಭಿಸಲಿದೆ ಎಂದು ಬೆಂಗಳೂರು ದಕ್ಷಿಣ ಸಂಸದ ಮತ್ತು ಭಾರತೀಯ ಜನತಾ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಹೇಳಿದ ಬೆನ್ನಲ್ಲೇ ಸಚಿವ ಎಂ.ಬಿ. ಪಾಟೀಲ್ ಅವರು 'ಶಾಂತಿಯುತ ಕರ್ನಾಟಕ' ಸಹಾಯವಾಣಿಗೆ ಮನವಿ ಮಾಡಿದ್ದಾರೆ.
Requesting @DrParameshwara @PriyankKharge @DKShivakumar @CMofKarnataka to consider setting up a new helpline called “Peaceful Karnataka”
— M B Patil (@MBPatil) June 5, 2023
To ensure there is no hatred being spread in Karnataka, and keep track of any such incidents.
Our agenda is only Development & Progress,… https://t.co/mBYdwHVC6m