ಚುನಾವಣಾ ತಂತ್ರಗಾರರ ಮಾತು ಕೇಳಿ ಫ್ರೀ ಘೋಷಿಸುವ ಮೊದಲು ಕೇಂದ್ರಕ್ಕೆ ಪತ್ರ ಬರೆದಿದ್ರಾ: ಕೇಂದ್ರ ಸರ್ಕಾರದ ಪರ ಎಚ್ ಡಿಕೆ ಬ್ಯಾಟಿಂಗ್

ರಾಜ್ಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್​ ಪಕ್ಷ ಘೋಷಿಸಿದ್ದ ಐದು ಗ್ಯಾರಂಟಿಗಳ ಪೈಕಿ ಒಂದಾದ ಅನ್ನಭಾಗ್ಯ ಯೋಜನೆ ಜಾರಿಗೆ ಸಂಬಂಧಿಸಿದಂತೆ ತಾನು ಎಸಗಿದ ಸ್ವಯಂಕೃತ ಅಪರಾಧಕ್ಕೆ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಾ ಇದೆ ಎಂದು ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಎಚ್.ಡಿ ಕುಮಾರಸ್ವಾಮಿ
ಎಚ್.ಡಿ ಕುಮಾರಸ್ವಾಮಿ

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್​ ಪಕ್ಷ ಘೋಷಿಸಿದ್ದ ಐದು ಗ್ಯಾರಂಟಿಗಳ ಪೈಕಿ ಒಂದಾದ ಅನ್ನಭಾಗ್ಯ ಯೋಜನೆ ಜಾರಿಗೆ ಸಂಬಂಧಿಸಿದಂತೆ ತಾನು ಎಸಗಿದ ಸ್ವಯಂಕೃತ ಅಪರಾಧಕ್ಕೆ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಾ ಇದೆ ಎಂದು ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಯಾರೋ ಚುನಾವಣಾ ತಂತ್ರಗಾರರ ಮಾತು ಕೇಳಿಕೊಂಡು ಗ್ಯಾರಂಟಿ ಮಾಡಿದಾಗ, ಯೋಜನೆ ಜಾರಿಗೆ ಅಗತ್ಯ ಸಿದ್ದತೆ ಮಾಡಿಕೊಳ್ಳಬೇಕಾಗಿತ್ತು. ಅಕ್ಕಿ ಗ್ಯಾರಂಟಿ ಕೊಡುವ ಮುನ್ನ ಇವರೇನು ಕೇಂದ್ರ ಸರ್ಕಾರ್ಕಕೆ ಪತ್ರ ಬರೆದಿದ್ರಾ. ಸುಳ್ಳು ಭರವಸೇ ಕೊಟ್ಟು ಇನ್ನೊಬ್ಬರ ಮೇಲೆ ಗೂಬೆ ಕೂರಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ಧಾರೆ.

ಕಾಂಗ್ರೆಸ್ ಕೇವಲ ಕೆಲವು ಚುನಾವಣಾ ತಂತ್ರಜ್ಞರ ಸಲಹೆಯನ್ನು ಅನುಸರಿಸಿ ಮತ್ತು ಯಾವುದೇ ಪೂರ್ವ ಸಿದ್ಧತೆಗಳಿಲ್ಲದೆ ಗ್ಯಾರಂಟಿ ಘೋಷಿಸಿತು. ಹೆಚ್ಚುವರಿ ಉಚಿತ ಅಕ್ಕಿ ಭರವಸೆಯ ಬಗ್ಗೆ ಕೇಂದ್ರ ಸರ್ಕಾರಕ್ಕೆ ತಿಳಿಸಿದ್ದೀರಾ? ಈಗ ಕೇಂದ್ರ ಏಕೆ ಅಕ್ಕಿ ಕೊಡಬೇಕು? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಕೇಂದ್ರವನ್ನು ಸಮರ್ಥಿಸಿಕೊಂಡ ಅವರು, ಕೇಂದ್ರಕ್ಕೆ ತನ್ನದೇ ಆದ ಬದ್ಧತೆಗಳಿವೆ ಮತ್ತು ಕಾಂಗ್ರೆಸ್ ಸರ್ಕಾರವು ಭರವಸೆ ನೀಡಿದ ಯೋಜನೆಗಳನ್ನು ಜಾರಿಗೆ ತರಲು ತನ್ನದೇ ಆದ  ಪೂರ್ವ ತಯಾರಿ ಹೊಂದಿರಬೇಕು ಎಂದು ಹೇಳಿದರು. ಕೇಂದ್ರ ಸರ್ಕಾರಕ್ಕೆ ಅದರದ್ದೆ ಆದ ಕಮಿಟ್​ಮೆಂಟ್​ ಇರುತ್ತದೆ. ನಮಗೆ ಅಕ್ಕಿ ಬೇಕು ಎಂದರೆ ಅವರು ಹೇಗೆ ಕೊಡುತ್ತಾರೆ. ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರೈತರ ಸಾಲ ಮನ್ನಾ ಮಾಡಿದೆ. ಆಗ ನಾನು ಪ್ರಧಾನಿ ಅವರ ಬಳಿ ಹೋಗಿ ಕೇಳಿದ್ನಾ. ದರ್ದು ಇರೋದು ಕಾಂಗ್ರೆಸ್​ ಪಕ್ಷಕ್ಕೆ ಅವರಿಗಲ್ಲ ನಿಮಗೆ ಬೇಕಾದ ವ್ಯವಸ್ಥೆಯನ್ನು ನೀವೇ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ಕೇಂದ್ರ ಸರ್ಕಾರ ಮತ್ತು ಭಾರತೀಯ ಆಹಾರ ನಿಗಮದತ್ತ ಬೊಟ್ಟು ಮಾಡುವ ಬದಲು ಸಿದ್ದರಾಮಯ್ಯ ಅವರು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪಿಯೂಷ್ ಗೋಯಲ್ ಅವರೊಂದಿಗೆ ಅನ್ನಭಾಗ್ಯ ಕುರಿತು ಮಾತುಕತೆ ನಡೆಸಬೇಕಿತ್ತು ಎಂದಿದ್ದಾರೆ.

ಜನತೆ ಎರಡು ರಾಷ್ಟ್ರೀಯ ಪಕ್ಷಗಳ ನಡವಳಿಕೆಗೆ ಬೇಸತ್ತು ಹೋಗಿದ್ಧಾರೆ. ರಾಜ್ಯದ ಜನತೆ ಅವರನ್ನು ನಂಬಿ ಮತ ಕೊಟ್ಟ ತಪ್ಪಿಗೆ ಪ್ರತಿದಿನ ಇವರ ನಾಟಕ ನೋಡಬೇಕಾಗಿದೆ. ಇವರುಗಳು ಯಾವ ರೀತಿ ಟೋಪಿ ಹಾಕುತ್ತಾರೆ ಎಂದು ನೋಡುವ ಅನಿವಾರ್ಯತೆಯನ್ನು ಜನತೆ ಮತ ನೀಡುವ ಮೂಲಕ ಸೃಷ್ಟಿಸಿಕೊಂಡಿದ್ಧಾರೆ.

ಗೃಹಜ್ಯೋತಿ ಯೋಜನೆ ರಾಜ್ಯದ ಜನತೆಗೆ ಕತ್ತಲಾಗಿ ಪರಿಣಮಿಸಲು ಶುರುವಾಗಿದೆ. ವಿಟಿಯು ಕುಲಪತಿ ವಿದ್ಯುತ್​ ಬಿಲ್​ ನೋಡಿ ಬಾಯಿ ಬಡ್ಕೋತ್ತಿದ್ಧಾರೆ. ಬಿಲ್​ನ ಮೊತ್ತ ಕಂಡು ಶಾ ಕ್ ಗೆ ಗುರಿಯಾಗಿದ್ಧಾರೆ. ಉಚಿತ ವಿದ್ಯುತ್​ ಎಂದು ಹೇಳಿಕೊಳ್ಳುತ್ತ ಇನ್ನೆಷ್ಟು ಜನರಿಗೆ ಶಾಕ್​ ಕೊಡುತ್ತೀರಿ ಎಂದು ಪ್ರಶ್ನಿಸಿದ್ಧಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com